ಪೋಕ್ಸೊ ಕೇಸ್‌ನಲ್ಲಿ ಬಿಎಸ್‌ವೈಗೆ ಶುರುವಾಯ್ತು ಸಂಕಷ್ಟ – ಕೋರ್ಟ್‌ನಿಂದ ಸಮನ್ಸ್ ಜಾರಿ

Public TV
1 Min Read
BS YEDIYURAPPA

ಬೆಂಗಳೂರು: ಪೋಕ್ಸೊ ಕೇಸ್‌ನಲ್ಲಿ (POCSO Case) ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ (B.S.Yediyurappa) ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಕಾಗ್ನಿಜೆನ್ಸ್‌ ಆರಂಭಿಸಿದ ಕೋರ್ಟ್‌ನಿಂದ ಸಮನ್ಸ್‌ ಜಾರಿಯಾಗಿದೆ.

ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ಖುಷಿಯಲ್ಲಿದ್ದ ಮಾಜಿ ಸಿಎಂ ಬಿಎಸ್‌ವೈಗೆ ಸಂಕಷ್ಟ ಶುರುವಾಗಿದೆ. ಪೋಕ್ಸೊ ಕೇಸ್‌ನಲ್ಲಿ ಬಿಎಸ್‌ವೈಗೆ ಫಾಸ್ಟ್‌ಟ್ರ್ಯಾಕ್ ಕೋರ್ಟ್ 1 ರಿಂದ ಸಮನ್ಸ್ ಜಾರಿಯಾಗಿದ್ದು, ಮಾ.15 ಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿ ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: ನಟ ದರ್ಶನ್‌ಗೆ ಇನ್ಮುಂದೆ ದೇಶಾದ್ಯಂತ ಸಂಚಾರಕ್ಕೆ ಅವಕಾಶ – ಹೈಕೋರ್ಟ್ ಆದೇಶ

BS Yediyurappa

ಪೋಕ್ಸೊ‌ ಕೇಸ್‌ನಲ್ಲಿ ಕೋರ್ಟ್ ಕಾಗ್ನಿಜೆನ್ಸ್ ತೆಗೆದುಕೊಂಡಿದ್ದು, ಕಾಗ್ನಿಜೆನ್ಸ್ ತೆಗೆದುಕೊಂಡ ಬೆನ್ನಲ್ಲೇ ಸಮನ್ಸ್ ಜಾರಿಯಾಗಿದೆ. ಹೈಕೋರ್ಟ್‌ನಲ್ಲಿ ಪ್ರಕರಣ ರದ್ದು ಮಾಡುವಂತೆ ಬಿಎಸ್‌ವೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹಳೆಯ ಕಾಗ್ನಿಜೆನ್ಸ್ ರದ್ದು ಮಾಡಿದ್ದ ಹೈಕೋರ್ಟ್, ಹೊಸದಾಗಿ ಕಾಗ್ನಿಜೆನ್ಸ್ ತೆಗೆದುಕೊಳ್ಳಬಹುದು ಅಂತ ಆದೇಶ ಮಾಡಿತ್ತು.

ಅಲ್ಲದೇ, ನಿರೀಕ್ಷಣಾ ಜಾಮೀನು ಮುಂದುವರೆಸಿತ್ತು. ಇದೀಗ ಸಿಐಡಿ ಸಲ್ಲಿಸಿರುವ ಚಾರ್ಜ್‌ಶೀಟ್ ಮೇಲೆ ಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗಿದೆ. ಇದನ್ನೂ ಓದಿ: ಮತ್ತೆರಡು ವಿಧೇಯಕ ವಾಪಸ್ – ರಾಜ್ಯಪಾಲರು vs ರಾಜ್ಯ ಸರ್ಕಾರದ ನಡುವೆ ಮುಂದುವರಿದ ಜಟಾಪಟಿ

Share This Article