ಚಿಕ್ಕಮಗಳೂರು: ಮುಳ್ಳಯ್ಯನಗಿರಿ (Mullayanagiri) ತಪ್ಪಲಿನಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡ್ಗಿಚ್ಚಿನಿಂದ ಚಂದ್ರದ್ರೋಣ (Chandra Drona) ಪರ್ವತಗಳ ಸಾಲಿನ ರಕ್ಷಣೆ ಮಾಡಲು ಅರಣ್ಯ ಇಲಾಖೆ ಪಣ ತೊಟ್ಟಿದ್ದು, ಡ್ರೋನ್‌ಗಳ ಮೊರೆ ಹೋಗಿದ್ದಾರೆ.
ಮುಳ್ಳಯ್ಯನಗಿರಿ, ದತ್ತಪೀಠದ ಗುಡ್ಡಗಳಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಕಾಡನ್ನ ರಕ್ಷಿಸಲು ಡ್ರೋನ್ ಕಣ್ಗಾವಲಿಗೆ ಇಲಾಖೆ ಮುಂದಾಗಿದೆ. ಇದನ್ನೂ ಓದಿ: ಖರ್ಜೂರದೊಳಗೆ ಇಟ್ಟು ಸಾಗಿಸುತ್ತಿದ್ದ 172 ಗ್ರಾಂ ಚಿನ್ನ ಏರ್‌ಪೋರ್ಟ್‌ನಲ್ಲಿ ವಶಕ್ಕೆ
ನಿತ್ಯ ಸಾವಿರಾರು ಜನ ಪ್ರವಾಸಿಗರು ಬಂದು ಹೋಗುವ ಪಶ್ಚಿಮ ಘಟ್ಟಗಳ ತಪ್ಪಲುಗಳಲ್ಲಿ ಡ್ರೋನ್ ಕಣ್ಗಾವಲಿನಿಂದ ಬೆಂಕಿ ಹಾಕುವವರು ಸ್ಥಳಿಯರೋ, ಪ್ರವಾಸಿಗರೋ ಅಥವಾ ನಿಜಕ್ಕೂ ಕಾಡ್ಗಿಚ್ಚೋ ಎಂಬುದನ್ನು ಗುರುತಿಸಲು ಸಹಕಾರಿಯಾಗುತ್ತದೆ. ಇದರಿಂದ ನಿತ್ಯ ಸುಟ್ಟು ಕರಕಲಾಗ್ತಿರೋ ಕಾಡಿನ ರಕ್ಷಣೆಗೆ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ. ಇದನ್ನೂ ಓದಿ: ಮಡಿಕೇರಿಯ ಇಗ್ಗುತಪ್ಪ, ನಾಲಾಡಿ ಬೆಟ್ಟದಲ್ಲಿ ಕಾಡ್ಗಿಚ್ಚು – 20 ಎಕ್ರೆಗೆ ಬೆಂಕಿ
ಗುಡ್ಡದ ತುದಿಯಲ್ಲಿ ಬೆಂಕಿ ಬಿದ್ದರೆ ನಂದಿಸುವುದು ಕಷ್ಟವಾಗಿರುವುದರಿಂದ ಅಗ್ನಿಶಾಮಕ ವಾಹನ ಹೋಗದ ಕಡೆ ಅಧಿಕಾರಿಗಳೇ ಸೊಪ್ಪಿನಿಂದ ಕಾಡನ್ನ ರಕ್ಷಿಸಬೇಕು. ಇದೀಗ ಸ್ಥಳಿಯರು ಹಾಗೂ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡಲು ಅರಣ್ಯಾಧಿಕಾರಿಗಳು ಡ್ರೋನ್ ಮೊರೆ ಹೋಗಿದ್ದಾರೆ.
ಮಂಗಳವಾರ ಹೊರನಾಡು ಸಮೀಪದ ಮಾವಿನಹೊಳ-ಬಲಿಗೆ ಗುಡ್ಡದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನ ಪರಿಣಾಮ ಹತ್ತಾರು ಎಕ್ರೆ ಅರಣ್ಯ ಬೆಂಕಿಗಾಹುತಿಯಾಗಿತ್ತು. ಇದನ್ನೂ ಓದಿ: ಆಹಾರ ಪ್ರಿಯರಿಗೆ ಶಾಕ್ – ಇಡ್ಲಿ ತಯಾರಿಕೆಗೆ ಬಳಸುವ ಪ್ಲಾಸ್ಟಿಕ್‌ನಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ