ಮಾರಿಷಸ್‌ನ ದಕ್ಷಿಣ ಭಾಗದಲ್ಲಿ ಬೆಟ್ಟಗಳ ನಡುವೆ ಸಮುದ್ರಮಟ್ಟದಿಂದ 1,800 ಅಡಿ ಎತ್ತರದಲ್ಲಿ ಒಂದು ವಿಶಾಲ ಸರೋವರ ಇದೆ. ಪ್ರಾಚೀನ ಕಾಲದಲ್ಲಿ ಉಲ್ಕಾಪಾತದಿಂದ ನಿರ್ಮಾಣವಾಗಿದ್ದ ಸರೋವರ ಇದು. ಇದಕ್ಕೆ ʻಗಂಗಾ ತಲಾವ್ʼ ಎಂದು ಹೆಸರು.
1897ರಲ್ಲಿ ಶ್ರೀ ಜಮ್ಮೂನ್ ಗಿರಿ ಎಂಬ ದಶನಾಮಿ ಗೋಸಾವಿ (ಸನ್ಯಾಸಿ) ಈ ಸರೋವರದ ಬಳಿ ಒಂದು ಶಿವ ದೇವಾಲಯ ನಿರ್ಮಿಸಿದ್ದರು. ಕೊಳದ ನಡುವೆ ಸುಂದರ ಶಿವವಿಗ್ರಹ ಸ್ಥಾಪನೆಯಾಗಿದೆ. ಮುಂದೆ ಈ ಕೆರೆಯ ಸುತ್ತ ಹನುಮಂತ, ಗಣೇಶ ಮತ್ತು ಗಂಗಾದೇವಿಯರ ದೇವಾಲಯಗಳು ಮತ್ತು ದೊಡ್ಡ ಗಾತ್ರದ ವಿಗ್ರಹಗಳು ಸ್ಥಾಪನೆಯಾದವು. ಇದನ್ನೂ ಓದಿ: ಶಿವನ ಕಣ್ಣೀರಿಂದಲೇ ಶಿವಾಲಯವಾದ ಕಥೆ – ಪಾಕಿಸ್ತಾನದ ಕಟಾಸ್ ರಾಜ್‌ಬಗ್ಗೆ ನಿಮಗೆಷ್ಟು ಗೊತ್ತು?
2008ರಲ್ಲಿ ಇದರ ಪಕ್ಕದ ಬೆಟ್ಟದ ಮೇಲೆ 108 ಅಡಿ ಎತ್ತರದ ಮಹಾದೇವನ ವಿಗ್ರಹ ಸ್ಥಾಪನೆಯಾಗಿತ್ತು. ಬರೋಡಾ (ಗುಜರಾತ್)ದ ಸೂರ್‌ಸಾಗರ್ ಎಂಬ ಸರೋವರದ ನಡುವೆ ಇರುವ ಕೆರೆಯ ಭವ್ಯ ಶಿವವಿಗ್ರಹದ ಮಾದರಿಯಲ್ಲಿ ಈ ಶಿವ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ತ್ರಿಶೂಲ ಹಿಡಿದು ನಿಂತಿರುವ ಮಹಾದೇವನ ಈ ವಿಗ್ರಹಕ್ಕೆ ಮಂಗಲ ಮಹಾದೇವ ಎಂದು ನಾಮಕರಣ ಮಾಡಲಾಗಿದೆ. ಮಾರಿಷಸ್‌ನಲ್ಲೇ ಇಷ್ಟೊಂದು ದೊಡ್ಡ ಪ್ರತಿಮೆ ಬೇರೊಂದಿಲ್ಲ.
ಗಂಗಾ ತಲಾವ್‌ನ ಶಿವದೇವಾಲಯವಿಂದು ಮಾರಿಷಸ್‌ನ ಹಿಂದೂಗಳ ಆದ್ಯ ತೀರ್ಥಕ್ಷೇತ್ರವಾಗಿದೆ. ಶಿವರಾತ್ರಿಯ ವೇಳೆ ಭಕ್ತರು ಇಲ್ಲಿನ ಶಿವಾಲಯಕ್ಕೆ ಬರಿಗಾಲಿನಲ್ಲಿ ನಡೆದುಕೊಂಡು ಬರುತ್ತಾರೆ. ಇದನ್ನೂ ಓದಿ: Maha Shivaratri| ನಾಗ ಸಾಧುಗಳು ಶಿವನನ್ನು ಪೂಜಿಸೋದು ಯಾಕೆ?