ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ದಕ್ಷಿಣ ಕರ್ನಾಟಕದ ಪುರಾಣ ಪ್ರಸಿದ್ಧ ದೇವಾಲಯಗಳು

Public TV
3 Min Read
nanjanagudu srikanteshwar

ಹಾಶಿವರಾತ್ರಿ ಸಂಭ್ರಮ ಎಲ್ಲೆಡೆ ಅದ್ದೂರಿಯಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಶಿವರಾತ್ರಿಯಂದು ಶಿವನ ದೇವಸ್ಥಾನಕ್ಕೆ ಭೇಟಿ ನೀಡಿ, ಬಿಲ್ವಪತ್ರೆ ಸಲ್ಲಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ದೇಶ್ಯಾದ್ಯಂತ ಹಲವಾರು ವಿಭಿನ್ನವಾದ ಶಿವ ದೇವಾಲಯಗಳು ಇವೆ. ಈ ಶಿವರಾತ್ರಿಯಂದು ನೀವು ಕೇವಲ ಒಂದೇ ದಿನದಲ್ಲಿ ದಕ್ಷಿಣ ಕರ್ನಾಟಕದ ಕೆಲವು ಪುರಾಣ ಪ್ರಸಿದ್ಧ ಶಿವನ ದೇವಾಲಯಗಳಿಗೆ ಭೇಟಿ ನೀಡಬಹುದು.

ಶಿವರಾತ್ರಿಯಂದು ನೀವು ಭೇಟಿ ನೀಡಬಹುದಾದ ದಕ್ಷಿಣ ಕರ್ನಾಟಕದ ಪುರಾಣ ಪ್ರಸಿದ್ಧ ಶಿವನ ದೇವಾಲಯಗಳ ಬಗ್ಗೆ ಮಾಹಿತಿ ಇಲ್ಲಿದೆ.

ಕೋಲಾರದ ಕೀರ್ತಿ ಕೋಟಿಲಿಂಗೇಶ್ವರ ದೇವಾಲಯ :
ಕರ್ನಾಟಕದ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಕೋಲಾರದ ಕೋಟಿಲಿಂಗೇಶ್ವರ ದೇವಾಲಯವು ಪ್ರಸಿದ್ಧಿಯಾಗಿದೆ. ದಕ್ಷಿಣ ಭಾರತದ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಕೋಲಾರ ಜಿಲ್ಲೆಯ ಕಮ್ಮಸಂದ್ರ ಎಂಬ ಹಳ್ಳಿಯಲ್ಲಿರುವ ಈ ದೇವಾಲಯದಲ್ಲಿ ಅತಿ ದೊಡ್ಡ ಹಾಗೂ ಎತ್ತರದ ಶಿವಲಿಂಗವಿದೆ.

ಈ ಶಿವನ ದೇವಾಲಯಕ್ಕೆ ಪ್ರತಿ ವರ್ಷ ಎರಡು ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯ ಮಹಾಶಿವರಾತ್ರಿಯ ಸಂಭ್ರಮಾಚರಣೆಗೆ ಪ್ರಸಿದ್ಧಿ ಪಡೆದಿದೆ. ನೂರಕ್ಕೂ ಹೆಚ್ಚು ಸಣ್ಣ ಶಿವನ ಲಿಂಗಗಳನ್ನು ಹೊಂದಿರುವ ಈ ದೇವಾಲಯದಲ್ಲಿ ಕೋಟಿ ಶಿವಲಿಂಗಗಳ ಸ್ಥಾಪನೆಯ ಧ್ಯೇಯವನ್ನು ಹೊಂದಿದೆ. ಈ ಹಿನ್ನೆಲೆ ಈ ದೇವಾಲಯಕ್ಕೆ ಕೋಟಿಲಿಂಗೇಶ್ವರ ಎಂದು ಹೆಸರಿಡಲಾಗಿದೆ.

Kotilingeshwar

ಮಲೆ ಮಹದೇಶ್ವರ ದೇಗುಲ:
ದಕ್ಷಿಣ ಭಾರತದ ಅತಿ ಪ್ರಸಿದ್ಧ ಯಾತ್ರಾಗಳಲ್ಲಿ ಶ್ರೀ ಮಲೆ ಮಹದೇಶ್ವರ ದೇವಾಲಯೂ ಒಂದು. ಈ ದೇವಾಲಯ ಕರ್ನಾಟಕದ ಅತಿ ಶ್ರೀಮಂತ ದೇವಾಲಯ ಎಂಬ ಖ್ಯಾತಿಯನ್ನು ಪಡೆದಿದೆ. ಚಾಮರಾಜನಗರ ಜಿಲ್ಲೆಯಲ್ಲಿರುವ ಶ್ರೀ ಮಲೆ ಮಹದೇಶ್ವರ ಬೆಟ್ಟವು ಹುಲಿ ಸಂರಕ್ಷಣಾ ಅರಣ್ಯದ ಮಧ್ಯದಲ್ಲಿದೆ. ಮಲೆ ಮಹದೇಶ್ವರ ದೇವಾಲಯದಲ್ಲಿ ಶಿವರಾತ್ರಿಯಂದು ಮಹಾರಥೋತ್ಸವ, ದಾಸೋಹ ನಡೆಸಲಾಗುತ್ತದೆ. ಶಿವರಾತ್ರಿಗೂ ಒಂದು ವಾರಕ್ಕೂ ಮುಂಚೆಯಿಂದಲೇ ಇಲ್ಲಿಗೆ ಭಕ್ತರು ಪಾದಯಾತ್ರೆಗೆ ಬರುತ್ತಾರೆ. ರಾತ್ರಿ ಜಾಗರಣೆಯು ಕೂಡ ಇಲ್ಲಿ ನಡೆಯುತ್ತದೆ.

Male Mahadeshwar

ಕದ್ರಿ ಮಂಜುನಾಥ ಸ್ವಾಮಿ ದೇವಾಲಯ:
ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಕದ್ರಿ ಮಂಜುನಾಥ ಸ್ವಾಮಿ ದೇವಾಲಯ ಶಿವನಿಗೆ ಸಮರ್ಪಿತವಾದದ್ದು, ಕದ್ರಿ ಮಂಜುನಾಥ ಸ್ವಾಮಿ ಎಂದು ಕರೆಯಲ್ಪಡುವ ಈ ದೇವಾಲಯ ಐತಿಹಾಸಿಕ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಹತ್ತರಿಂದ ಹನ್ನೊಂದನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯ 14ನೇ ಶತಮಾನದಲ್ಲಿ ಕಲ್ಲಿನ ರಚನೆಯಾಗಿ ರುಪಾಂತರಗೊಂಡಿತು. ಇಂದು ಮತ್ತು ಬೌದ್ಧ ಧರ್ಮಗಳ ಇತಿಹಾಸ ಹೊಂದಿರುವ ಈ ದೇವಾಲಯ, ಅವನತಿ ಕಂಡು ಬರಿಕ ಹಿಂದೂ ಪೂಜಾ ತಳವಾಗಿ ಪರಿವರ್ತನೆಗೊಂಡಿತು.

ಕದ್ರಿ ಮಂಜುನಾಥ ಸ್ವಾಮಿ ಶಿವನ ಸ್ವರೂಪವಾದ ಪರಶುರಾಮನಿಗೆ ಸಂಬಂಧಿಸಿದ ಪುರಾಣಗಳಲ್ಲಿ ಉಲ್ಲೇಖವನ್ನು ಹೊಂದಿದೆ. ಕ್ಷತ್ರಿಯರನ್ನು ನಾಶಪಡಿಸಿದ ಪರಶುರಾಮನು ಶಿವನ ಬಳಿ ಆಶ್ರಯಕ್ಕಾಗಿ ಸ್ಥಳ ಕೇಳಿಕೊಳ್ಳುತ್ತಾನೆ. ಆಗ ಶಿವ ಕದ್ರಿವನ ಎಂಬಲ್ಲಿ ಆಶ್ರಯ ಪಡೆಯುವಂತೆ ಸೂಚಿಸುತ್ತಾನೆ. ಶಿವನ ಶಿವನ ಮಾತುಗಳನ್ನು ಆಲಿಸಿದ ಪರಶುರಾಮ ಕದ್ರಿ ಬೆಟ್ಟಗಳನ್ನು ಆಕ್ರಮಿಸಿಕೊಂಡು ಅಲ್ಲಿ ಮಂಜುನಾಥನಿಗಾಗಿ ಕದ್ರಿವನವನ್ನು ಸ್ಥಾಪಿಸಿದನು. ಬಳಿಕ ಈ ದೇವಾಲಯ ಮಂಜುನಾಥ ಸ್ವಾಮಿಯ ವಾಸಸ್ಥಾನವಾಯಿತು.

Kadri

ಮಹಾಶಿವರಾತ್ರಿಯಂದು ಕದ್ರಿ ದೇವಸ್ಥಾನ ವಿಜೃಂಭಣೆಯಿಂದ ಅಲಂಕೃತಗೊಂಡು ಸಂಭ್ರಮಾಚರಣೆಯಲ್ಲಿ ಇರುತ್ತದೆ. ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ ಜಾಗರಣೆ ನಡೆಯಲಿದೆ. ಕದ್ರಿ ಕ್ಷೇತ್ರಕ್ಕೆ ಮುಂಜಾನೆಯಿಂದಲೇ ಮಹಾರುದ್ರಾಭಿಷೇಕ, ಶತಸೀಯಾಳಾಭಿಷೇಕ, ಮಹಾಪೂಜೆ ಹಾಗೂ ಶಿವಬಲಿ ನಡೆಯುತ್ತದೆ. ರಥೋತ್ಸವ ಸೇರಿದಂತೆ ಹಲವು ಉತ್ಸವಗಳು ಕೂಡ ಇಲ್ಲಿ ನಡೆಯುತ್ತವೆ.

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ:
ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಈ ಶಿವನ ದೇವಾಲಯವು ಒಂದು. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿದೆ. ಈ ದೇವಾಲಯವನ್ನು ನಂಜುಂಡೇಶ್ವರ ದೇವಾಲಯವು ಎಂದು ಕರೆಯಲಾಗುತ್ತದೆ. ಅತಿ ಮುಖ್ಯವಾಗಿ ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಅನಾರೋಗ್ಯಗಳು ತೊಡೆದು ಹಾಕಿ ಒಳ್ಳೆಯ ಆರೋಗ್ಯವನ್ನು ಶ್ರೀಕಂಠೇಶ್ವರ ದಯಪಾಲಿಸುತ್ತಾನೆ ಎನ್ನುವುದು ಎಲ್ಲರ ನಂಬಿಕೆ.

Nanjanagudu Kotilingeshwar Temple

ಈ ದೇವಾಲಯದ ಮುಂದೆ ಕಪಿಲಾ ನದಿ ಹರಿಯುತ್ತಿದ್ದು, ದೇವಾಲಯಕ್ಕೆ ಭೇಟಿ ನೀಡುವ ಭಕ್ತ ದೇಗುಲ ಈ ನದಿಯಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಈ ದೇವಾಲಯವನ್ನು ದಕ್ಷಿಣ ಕಾಶಿ ಅಂತಲೂ ಕರೆಯುತ್ತಾರೆ. ಶಿವರಾತ್ರಿಯಂದು ಬೆಳಿಗ್ಗೆ ನಾಲ್ಕು ಗಂಟೆಯಿಂದ ಧಾರ್ಮಿಕ ಪೂಜಾ ಕಾರ್ಯಗಳು ಆರಂಭವಾಗಿ, ನಂಜುಂಡೇಶ್ವರನಿಗೆ ಶತರುದ್ರಾಭಿಷೇಕ, ಏಕವಾರ, ಏಕದಶಾವರ, ನಿತ್ಯೋತ್ಸವ ಪೂಜೆ, ಸಂಗಮ ಕಾಲದ ಪೂಜೆ, ಪಂಚಾಮೃತ ಅಭಿಷೇಕ, ಕ್ಷೀರ ಅಭಿಷೇಕ ಹಾಗೂ 11 ಬಾರಿ ಮಹಾರುದ್ರ ಪಾರಾಯಣ ನಡೆಯುತ್ತದೆ. ತಳಿರು ತೋರಣಗಳಿಂದ ಅಲಂಕೃತಗೊಂಡ ಈ ದೇವಾಲಯಕ್ಕೆ, ಪುಷ್ಪಾಲಂಕಾರ ಮಾಡಿ ಭಕ್ತರಿಗೆ ದಾಸೋಹವು ಕೂಡ ಇರುತ್ತದೆ.

Share This Article