– ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ
ಕಾರವಾರ: ಕೇಣಿ ಗ್ರೀನ್ ಫೀಲ್ಡ್ (Keni Green Field) ಖಾಸಗಿ ಬಂದರು ಯೋಜನೆಯ ಸಮೀಕ್ಷೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ನಿಷೇಧಾಜ್ಞೆ ನಡುವೆಯೇ ಪ್ರತಿಭಟನಾನಿರತ ಮೀನುಗಾರರು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಜೆ.ಎಸ್.ಡಬ್ಲ್ಯು ಕಂಪನಿಯು 4,119 ಕೋಟಿ ರೂ. ವೆಚ್ಚದಲ್ಲಿ ಉತ್ತರ ಕನ್ನಡ (Uttar Kannada) ಜಿಲ್ಲೆಯ ಅಂಕೋಲದ (Ankola) ಕೇಣಿಯಲ್ಲಿ ಗ್ರೀನ್ ಫೀಲ್ಡ್ ಖಾಸಗಿ ಬಂದರು ಯೋಜನೆಯ ಸರ್ವೇ ಕಾರ್ಯಕ್ಕೆ ಮುಂದಾಗಿದೆ. ಇದಕ್ಕೆ ಅನುಮತಿ ನೀಡಿದ ಜಿಲ್ಲಾಡಳಿತದ ಈ ನಡೆಯನ್ನು ಖಂಡಿಸಿ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: HALನಲ್ಲಿ ಲಘು ಯುದ್ಧ ವಿಮಾನಗಳ ಉತ್ಪಾದನೆಯಲ್ಲಿ ವಿಳಂಬ – ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ ರಚನೆ
ಈ ವೇಳೆ ಸರ್ವೇ ಖಂಡಿಸಿ ಮೂವರು ಮಹಿಳೆಯರು ಸಮುದ್ರಕ್ಕೆ ಹಾರಿದ್ದಾರೆ. ಮೂವರು ಮಹಿಳೆಯರನ್ನ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ. ಸರ್ವೇ ಕಾರ್ಯ ನಿಲ್ಲಿಸುವವರೆಗೂ ಉಗ್ರ ಪ್ರತಿಭಟನೆ ಮಾಡುತ್ತೇವೆ. ಬಂದರು ಯೋಜನೆಯನ್ನು ಕೈಬಿಡದಿದ್ದರೇ ಮತ ಬಹಿಷ್ಕಾರದ ಜೊತೆ ಸಾಮೂಹಿಕವಾಗಿ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಡಲ ತೀರದಲ್ಲಿ ಸೇರಿದ ನೂರಾರು ಮೀನುಗಾರಿಕಾ ಮಹಿಳೆಯರು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಯುಎಸ್‌ಏಡ್ ಉದ್ಯೋಗಿಗಳಿಗೆ ಟ್ರಂಪ್ ಶಾಕ್ – 1,600ಕ್ಕೂ ಹೆಚ್ಚು ಮಂದಿ ವಜಾ
ಪ್ರತಿಭಟನೆ ಹಿನ್ನೆಲೆ ಕೇಣಿಯಲ್ಲಿ 2 ದಿನ ಬಿ.ಎನ್.ಎಸ್ 163 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.