ರಾಜಣ್ಣ ಮಾತಾಡಿದ್ದು ತಪ್ಪು – ಹಿರಿಯರು ತಪ್ಪು ಹಾದಿಯಲ್ಲಿ ಹೋದ್ರೆ ನಾವು ದಾರಿ ತಪ್ತೀವಿ: ಶಿವಗಂಗಾ ಬಸವರಾಜ್

Public TV
1 Min Read
Congress MLA Sivaganga Basavaraj

ದಾವಣಗೆರೆ: ರಾಜಣ್ಣನವರು (K.N Rajann) ಮಾತನಾಡಿದ್ದು ತಪ್ಪು, ನಾವೇಲ್ಲ ಮೊದಲ ಸಲ ಗೆದ್ದಿದ್ದೇವೆ. ಹಿರಿಯರ ಹಾದಿಯಲ್ಲಿ ನಡೆಯುತ್ತೇವೆ. ಅವರು ತಪ್ಪು ಹಾದಿಯಲ್ಲಿ ಹೋದರೆ ನಾವು ಕೂಡ ತಪ್ಪು ದಾರಿಯಲ್ಲಿ ಹೋದಂತಾಗುತ್ತದೆ ಎಂದು ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಹೇಳಿದ್ದಾರೆ.

ಚನ್ನಗಿರಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಹೈಕಮಾಂಡ್ ಎಚ್ಚರಿಕೆ ನೀಡಿದರೂ ಪವರ್ ಶೇರಿಂಗ್ ಬಗ್ಗೆ ಮಾತನಾಡುವುದು ತಪ್ಪು. ಒಬ್ಬರ ಕೈಯಿಂದ ಬದಲಾವಣೆ ಆಗೋದಾದ್ರೆ ಮಾಡಬಹುದಿತ್ತು. ಆದರೆ ಇದು ಹೈಕಮಾಂಡ್ ನಿರ್ಧಾರ, ಅದ್ದರಿಂದ ಯಾರೂ ಮಾತನಾಡಬಾರದು. ಹೀಗೆ ಮಾತನಾಡುತ್ತಾ ಹೋದರೆ ಕಾರ್ಯಕರ್ತರಲ್ಲಿ ಗೊಂದಲವಾಗುತ್ತದೆ. ಪವರ್ ಶೇರಿಂಗ್ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದಿದ್ದಾರೆ.

ಜಾತಿ ಜನಗಣತಿ ವಿಚಾರವಾಗಿ, ಯಾವುದೇ ಕಾರಣಕ್ಕೂ ಜಾತಿಗಣತಿ ವರದಿ ಬಿಡುಗಡೆ ಆಗಲು ಬಿಡೋದಿಲ್ಲ. ನಾನು ಹಿಂದಿನಿಂದಲೂ ಹೇಳುತ್ತಾ ಬಂದಿದ್ದೇನೆ. ನಮ್ಮ ಮನೆಗೆ ಬಂದು ಜಾತಿ ಗಣತಿ ಮಾಡಿಲ್ಲ. ಎಲ್ಲೋ ಕೂತು ಜಾತಿಗಣತಿ ಮಾಡಿದರೆ ಹೇಗೆ ಒಪ್ಪೋದು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಜಾತಿ ಜನಗಣತಿ ವರದಿ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ನಮ್ಮ ಗಮನಕ್ಕೆ ತಂದೇ ಬಿಡುಗಡೆ ಮಾಡ್ಬೇಕಲ್ವಾ? ಆಗ ನೋಡೋಣ ಎಂದಿದ್ದಾರೆ.

Share This Article