ಬೆಂಗಳೂರು: ಎಲ್ಲಿಸ್ ಪೆರ್ರಿ (Ellyse Perry) ಸ್ಫೋಟಕ ಅರ್ಧಶತಕ ನೆರವಿನಿಂದ ಮುಂಬೈಗೆ ಆರ್‌ಸಿಬಿ (RCB vs MI) 168 ರನ್‌ಗಳ ಗುರಿ ನೀಡಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರ್‌ಸಿಬಿ 20 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿದೆ. ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ದುಕೊಂಡಿತ್ತು.
ಆರ್‌ಸಿಬಿ ಪ್ರಮುಖ ಬ್ಯಾಟರ್‌ಗಳು ಕಳಪೆ ಪ್ರದರ್ಶನ ನೀಡಿರುವುದು ಕಂಡುಬಂತು. ಡ್ಯಾನಿ ವ್ಯಾಟ್-ಹಾಡ್ಜ್ 9, ರಾಘ್ವಿ ಬಿಸ್ಟ್ 1, ಕನಿಕಾ ಅಹುಜಾ 3 ರನ್ ಗಳಿಸಿ ನಿರಾಸೆ ಮೂಡಿಸಿದರು. ಸ್ಮೃತಿ ಮಂಧಾನ 26, ರಿಚಾ ಘೋಷ್ 28 ರನ್ ಗಳಿಸಿದರು.
ಎಲ್ಲಿಸ್ ಪೆರ್ರಿ ಸ್ಫೋಟಕ ಫಿಫ್ಟಿ ಆಟವು ತಂಡ ಸವಾಲಿನ ಮೊತ್ತ ಪೇರಿಸಲು ನೆರವಾಯಿತು. ಅಬ್ಬರಿಸಿದ ಪೆರ್ರಿ 43 ಬಾಲ್‌ಗಳಿಗೆ 81 ರನ್ (11 ಫೋರ್, 2 ಸಿಕ್ಸರ್) ಚಚ್ಚಿದರು.
ಮುಂಬೈ ಪರ ಅಮನ್‌ಜೋತ್ ಕೌರ್ 3 ವಿಕೆಟ್ ಕಿತ್ತು ಗಮನ ಸೆಳೆದರು. ಶಬ್ನಿಮ್ ಇಸ್ಮಾಯಿಲ್, ನ್ಯಾಟ್ ಸಿವರ್-ಬ್ರಂಟ್, ಹೇಲಿ ಮ್ಯಾಥ್ಯೂಸ್, ಸಂಸ್ಕೃತಿ ಗುಪ್ತಾ ತಲಾ 1 ವಿಕೆಟ್ ಪಡೆದರು.