– ಶತಕ ಸಿಡಿಸಿ ಬಾಂಗ್ಲಾಗೆ ನೆರವಾದ ತೋಹಿದ್ ಹೃದಯ್
ದುಬೈ: ಇಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಎರಡನೇ ಪಂದ್ಯದಲ್ಲಿ 228 ರನ್‌ಗಳಿಗೆ ಆಲೌಟ್ ಆದ ಬಾಂಗ್ಲಾದೇಶ ಟೀಂ ಇಂಡಿಯಾಗೆ 229 ರನ್‌ಗಳ ಗುರಿ ನೀಡಿದೆ. ಭಾರತ ಪರ ಮಹಮ್ಮದ್ ಶಮಿ 5 ವಿಕೆಟ್ ಕಿತ್ತು ಮಿಂಚಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾ 49.4 ಬಾಲ್‌ಗಳಿಗೆ ಆಲೌಟ್ ಆಗಿ 228 ರನ್ ಗಳಿಸಿತು. ತೋಹಿದ್ ಹೃದಯ್ ಶತಕ ಸಿಡಿಸಿ ಗಮನ ಸೆಳೆದರು.
ಜಾಕರ್ ಅಲಿ ಅರ್ಧಶತಕ (68), ತಾಂಜಿದ್ ಹಸನ್ 25, ರಿಷದ್ ಹೊಸೇನ್ 18 ರನ್ ಗಳಿಸಿದರು. ತಂಡದ ಕ್ಯಾಪ್ಟನ್ ನಜ್ಮುಲ್ ಹೊಸೇನ್ ಶಾಂತೊ ಸೇರಿದಂತೆ ಪ್ರಮುಖ ಆಟಗಾರರೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಭಾರತದ ಬೌಲರ್‌ಗಳು ಬಾಂಗ್ಲಾ ಬ್ಯಾಟರ್‌ಗಳ ಬೆವರಿಳಿಸಿದರು. ಟೀಂ ಇಂಡಿಯಾ ಪರ ಮೊಹಮ್ಮದ್ ಶಮಿ 5 ವಿಕೆಟ್ ಕಿತ್ತು ಮಿಂಚಿದರು. ಹರ್ಷಿತ್ ರಾಣಾ 3 ವಿಕೆಟ್ ಕಬಳಿಸಿ ಗಮನ ಸೆಳೆದರು. ಅಕ್ಷರ್ ಪಟೇಲ್ 2 ವಿಕೆಟ್ ಕಿತ್ತರು.