ತ್ರಿವೇಣಿ ಸಂಗಮದಲ್ಲಿ ನೀರು ಕುಡಿಯೋಕೂ ಯೋಗ್ಯ: ಯೋಗಿ ಆದಿತ್ಯನಾಥ್

Public TV
1 Min Read
Yogi Adityanath

– 56 ಕೋಟಿ ಭಕ್ತರ ನಂಬಿಕೆ ಜೊತೆ ಆಟ ಬೇಡ – ವಿಪಕ್ಷಗಳಿಗೆ ಎಚ್ಚರಿಕೆ

ಲಕ್ನೋ: ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದ ನೀರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿವೆ.. ಇದು ಸ್ನಾನ ಮಾಡಲು ಯೋಗ್ಯವಲ್ಲ ಎಂಬ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯನ್ನು ಯುಪಿ ಸರ್ಕಾರ ಅಲ್ಲಗಳೆದಿದೆ. ತ್ರಿವೇಣಿ ಸಂಗಮದ ನೀರು ಕುಡಿಯಲು ಯೋಗ್ಯ ಎಂದು ಸಿಎಂ ಯೋಗಿ ಪ್ರತಿಪಾದಿಸಿದ್ದಾರೆ.

ಈಗಾಗಲೇ ಕುಂಭಮೇಳದಲ್ಲಿ 56 ಕೋಟಿ ಭಕ್ತರು ಮಿಂದೆದಿದ್ದಾರೆ. ಯಾರಿಗೂ ಏನು ಆಗಿಲ್ಲ. ನಾವು ಇಂತಹ ಆಧಾರರಹಿತ ಆರೋಪ ಒಪ್ಪಲ್ಲ. ಸನಾತನ ಧರ್ಮದ ಬಗ್ಗೆ, ಕುಂಭಮೇಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸೋದನ್ನು ಸಹಿಸಲ್ಲ. ಅವರು 56 ಕೋಟಿ ಭಕ್ತರ ನಂಬಿಕೆಗಳ ಜೊತೆ ಆಟ ಆಡ್ತಿದ್ದಾರೆ ಎಂದು ಅಸೆಂಬ್ಲಿಯಲ್ಲಿ ಸಿಎಂ ಗುಡುಗಿದ್ದಾರೆ.

ಕಾಲ್ತುಳಿತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ರು. ಈ ವಿಚಾರದಲ್ಲೂ ರಾಜಕೀಯ ಮಾಡಿದ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ್ರು. ಸನಾತನ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸಿರೋದು ಇವರ ಪಾಲಿಗೆ ಅಪರಾಧವಾಗಿದೆ. ರೋಗಗ್ರಸ್ಥ ದೇಹವನ್ನು ಸರಿ ಮಾಡಬಹುದು. ರೋಗಗ್ರಸ್ಥ ಮನಸ್ಸುಗಳನ್ನು ಸರಿ ಮಾಡಲು ಸಾಧ್ಯವಿಲ್ಲ ಎಂದು ವಿಪಕ್ಷಗಳನ್ನು ಕುಟುಕಿದರು.

ಬಂಗಾಳ ಅಸೆಂಬ್ಲಿಯಲ್ಲಿ ಮಮತಾ ಹೇಳಿಕೆ ಖಂಡಿಸಿ ಇಂದು ಕೂಡ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿ, ಸಭಾತ್ಯಾಗ ಮಾಡಿದ್ರು. ಅತ್ತ, ದೆಹಲಿ ಕಾಲ್ತುಳಿತ ವಿಚಾರವಾಗಿ ರೈಲ್ವೇ ಇಲಾಖೆಯನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

Share This Article