ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳ (Guarantee Scheme) ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಮೀಸಲಿಟ್ಟ 52,009 ಕೋಟಿ ರೂ. ಹಣ ಎಲ್ಲಿ ಹೋಗುತ್ತಿದೆ? ಯಾರು ನುಂಗುತ್ತಿದ್ದಾರೆ ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಗದಿತ ಸಮಯಕ್ಕೆ ಗ್ಯಾರಂಟಿಗಳು ತಲುಪುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಒಳಗಡೆ ಗ್ಯಾರಂಟಿ ಕೊಡಬೇಕೇ ಬೇಡವೇ ಎಂಬ ವಿಚಾರ ಚರ್ಚೆಯಲ್ಲಿದೆ. ಈ ಕಾರಣದಿಂದ ಜನರಿಗೆ ಅನುಮಾನ ಬರುವಂತಾಗಿದೆ ಎಂದರು. ಇದನ್ನೂ ಓದಿ: ಐರಿಷ್-ಬ್ರಿಟಿಷ್ ಪ್ರವಾಸಿ ಯುವತಿಯ ರೇಪ್ & ಮರ್ಡರ್ ಕೇಸ್ – ಗೋವಾ ನಿವಾಸಿಗೆ ಜೀವಾವಧಿ ಶಿಕ್ಷೆ
ದಲಿತರ ಹಣ 25 ಸಾವಿರ ಕೋಟಿಯನ್ನೂ ನುಂಗಿದ್ದೀರಿ. 52 ಸಾವಿರ ಕೋಟಿಯನ್ನು ಬಜೆಟ್‌ನಲ್ಲಿ (Budget) ಇಟ್ಟಿದ್ದೀರಿ. 6 ತಿಂಗಳಿನಿಂದ ಅಕ್ಕಿ ಕೊಡುವುದಕ್ಕೂ ತಿಲಾಂಜಲಿ ಹಾಡಿದ್ದಾರೆ. ಮನೆ ಒಡತಿಗೆ ಕೊಡುತ್ತಿದ್ದ 2 ಸಾವಿರ ರೂ. ಬರುತ್ತಿಲ್ಲ. ಯುವನಿಧಿ ಮರೀಚಿಕೆಯಾಗಿದೆ, ಅದು ಯಾರಿಗೂ ಸಿಗುತ್ತಿಲ್ಲ. ಹಣ ಎಲ್ಲಿ ಹೋಗಿದೆ? ಇದು ಸಕಾಲಕ್ಕೆ ಜನರಿಗೆ ಯಾಕೆ ಸಿಗುತ್ತಿಲ್ಲ? ಎಂದು ಕಿಡಿಕಾರಿದರು. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಫರ್ನಿಚರ್ ಅಂಗಡಿ, ಗೋಡೌನ್‌ಗೆ ಬೆಂಕಿ – 1.50 ಕೋಟಿ ರೂ. ಮೌಲ್ಯದ ವಸ್ತುಗಳು ಭಸ್ಮ
ಇದೆಲ್ಲದರ ನಡುವೆ ಲೂಟಿ ನಡೆಯುತ್ತಿದೆ. ಇತಿಮಿತಿ ನೋಡಿ ಗ್ಯಾರಂಟಿ ಕೊಡಬೇಕಿತ್ತು ಎಂದು ಎಐಸಿಸಿ ಅಧ್ಯಕ್ಷರು ಹೇಳಿದ್ದಾರೆ. ಶಶಿ ತರೂರ್ ಅವರು ಬಂದು ಅಕ್ಕಿ ಕೊಡುವ ಯೋಜನೆ ಜನರನ್ನು ಸೋಂಬೇರಿ ಮಾಡುತ್ತದೆ ಎಂದಿದ್ದಾರೆ. ನೀವು ಕೊಡುವ ಗ್ಯಾರಂಟಿಗಳಿಗೆ ನಿಮ್ಮ ನಾಯಕರ ಸಹಮತ ಇಲ್ಲ ಎಂದಾದರೆ ನಿಮ್ಮದು ಎಂಥ ಗ್ಯಾರಂಟಿ? ಗ್ಯಾರಂಟಿಗಳು ನಿಮ್ಮ ಪಕ್ಷದ ಮುಖಂಡರಿಗೆ ಪ್ರಶ್ನೆಯಾಗಿದೆ ಎಂದರು. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ 14 ಎಕರೆ ಸರ್ಕಾರಿ ಜಮೀನು ಒತ್ತುವರಿ ಆರೋಪ – ಕಂದಾಯ ಇಲಾಖೆ ಅಧಿಕಾರಿಗಳಿಂದ ಸರ್ವೇ
ಪಡಿತರ ಸಾಮಗ್ರಿಗಳು ಜನರಿಗೆ ತಲುಪುತ್ತಿಲ್ಲ ಎಂದಾದರೆ, ಸರ್ಕಾರದ ಒಳಗಡೆಯೇ ಸೋರಿ ಹೋಗುತ್ತಿದೆ ಎಂಬುದು ಇದರ ಅರ್ಥ. ಗ್ಯಾರಂಟಿಗಳಿಗೆ ಬೇಕಾದ 52 ಸಾವಿರ ಕೋಟಿ ಇಟ್ಟಿದ್ದೇವೆ ಎಂದು ನೀವೇ ಹೇಳುತ್ತೀರಿ. ಲೆಕ್ಕಾಚಾರದ ಪ್ರಕಾರ, ಫಲಾನುಭವಿಗಳಿಗೆ ಅಕ್ಕಿ ತಲುಪಬೇಕಿತ್ತು. ಆದರೆ, ಹಾಗೆ ಆಗುತ್ತಿಲ್ಲ. ಹಾಗಿದ್ದರೆ ಎಲ್ಲಿ ಸೋರಿಕೆ ಆಗುತ್ತಿದೆ? 6 ತಿಂಗಳಿಂದ ಬಂದಿಲ್ಲ ಎಂದಾದ ಮೇಲೆ ನಿಮ್ಮ ಗ್ಯಾರಂಟಿಗೆ ಗ್ಯಾರಂಟಿಯೇ ಇಲ್ಲವಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಮೀನು ಸಾರು, ಕಡುಬು ತಿಂದು 35 ವರ್ಷಗಳ ಬಳಿಕ ಹೋಟೆಲ್ ಬಿಲ್ ಪಾವತಿಸಿದ ವ್ಯಕ್ತಿ!
ಕಾಂಗ್ರೆಸ್ಸಿಗರು ಜನರ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ. ಕೊಟ್ಟ ಆಶ್ವಾಸನೆ ವಿಚಾರದಲ್ಲಿ ಜನರಿಗೆ ಮೋಸ- ವಂಚನೆ ಮಾಡಿದ್ದೀರಿ. ಆ ಕಾರಣದಿಂದ ಗ್ಯಾರಂಟಿ ಅನುಷ್ಠಾನ ಆಗುತ್ತಿಲ್ಲ. ಅಕ್ಕಿ ಖರೀದಿಸಿದರೆ ಅದನ್ನು ಜನರಿಗೆ ಕೊಡಬೇಕು. ತೆಗೆದುಕೊಳ್ಳದೇ ಇದ್ದಲ್ಲಿ ಜನರಿಗೆ ಏನಾದರೂ ಸಬೂಬು ಹೇಳಬಹುದೆಂಬ ಚಿಂತನೆ ಸರಕಾರದ್ದು ಇದ್ದಂತಿದೆ. ಸರ್ವರ್ ಡೌನ್, ಲಾರಿ ಟಯರ್ ಪಂಕ್ಚರ್ ಎಂಬಂಥ ಸಬೂಬು ಹೇಳುವ ಸ್ಥಿತಿಗೆ ಸರ್ಕಾರ ತಲುಪಿದೆ. ಮುಖ್ಯಮಂತ್ರಿಗಳು ಇದನ್ನು ಪರಿಶೀಲಿಸಿ 6 ತಿಂಗಳ ಬಾಕಿ ಗ್ಯಾರಂಟಿಯನ್ನು ಜನರಿಗೆ ಕೊಡಬೇಕು. ಬಜೆಟ್‌ನಲ್ಲಿ ಸತ್ಯ ಇತ್ತೇ ಸುಳ್ಳು ಇತ್ತೇ ಎಂಬುದು ಜನರಿಗೆ ಈಗ ಅರ್ಥವಾಗುತ್ತಿದೆ. ಕಳೆದ ಬಜೆಟ್‌ನಲ್ಲಿ 41%- 45%ರಷ್ಟು ಹಣ ಈಗಲೂ ಖರ್ಚಾಗಿಲ್ಲ. ನೀವು ಮೊದಲೇ ಕಳಪೆ ಬಜೆಟ್ ಕೊಟ್ಟಿದ್ದೀರಿ. ಜನರಿಗೂ ಅದು ತಲುಪಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕೆಲಸ ಮಾಡದ ಮೋದಿಯನ್ನು ಕೆಳಗಿಳಿಸಿ, ಗಡ್ಕರಿಯನ್ನು ಪ್ರಧಾನಿ ಮಾಡಿ: ಸಂತೋಷ್ ಲಾಡ್
ದೆಹಲಿಯ ಜನರು ಕಾಂಗ್ರೆಸ್ಸಿಗೆ ಸೋಲಿನ ಮೂಲಕ ಒಳ್ಳೆಯ ಪಾಠ ಕಲಿಸಿದ್ದಾರೆ. ಅವರಿಗೆ ಕೃತಜ್ಞತೆಗಳು. ಛಲವಾದಿ ನಾರಾಯಣಸ್ವಾಮಿ ದಲಿತರು, ಬಿಜೆಪಿ, ಆರ್‌ಎಸ್‌ಎಸ್‌ನವರು ತಲೆ ಮೇಲೆ ಚಡ್ಡಿ ಹೊರಿಸಿದರೆಂದು ಕಾಂಗ್ರೆಸ್‌ನವರು ಸುಳ್ಳು ಹೇಳಿ ಟ್ರೋಲ್ ಮಾಡುತ್ತಿದ್ದರು. ಅವರು ಚಡ್ಡಿಯನ್ನು ಸುಟ್ಟಿದ್ದರು. ನಾನು ಆ ಕಾಲದಲ್ಲಿ ಮುಖ್ಯಮಂತ್ರಿಗಳಿಗೆ ಪ್ರತಿಭಟನೆ ರೀತಿಯಲ್ಲಿ ಚಡ್ಡಿ ಒಯ್ದು ಕೊಟ್ಟದ್ದು ನಿಜ. ಅದನ್ನು ಅವರ ಮನೆಗೆ ತಲುಪಿಸಿದ್ದೆ. ದೆಹಲಿ ಚುನಾವಣೆ ಫಲಿತಾಂಶ ನೋಡಿದರೆ ನಾನು ಕೊಟ್ಟ ಚಡ್ಡಿ ಬಿಟ್ಟು ಬೇರೇನೂ ಅವರ ಬಳಿ ಉಳಿದಿಲ್ಲ. ಪ್ರಧಾನಿಯವರಿಗೆ ಒಳ್ಳೆಯ ಹೆಸರು ಬಾರದಂತೆ ಇಲ್ಲಿನ ಸರ್ಕಾರ ಕೇಂದ್ರದ ಯೋಜನೆಗಳನ್ನು ಅನುಷ್ಠಾನಗೊಳಿಸದೇ ತಡೆಯುತ್ತಿದೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: Bengaluru | ಪತಿಗೆ ಅಕ್ರಮ ಸಂಬಂಧ – ಮಗಳನ್ನು ಕೊಲೆಗೈದು ಪತ್ನಿ ಆತ್ಮಹತ್ಯೆ