ಎಲ್ಲಾ ಹಣ ಕೇಂದ್ರವೇ ಕಿತ್ತುಕೊಂಡು ಹೋಗುತ್ತೆ, ನಮಗೆಲ್ಲಿ ಹಣ ಉಳಿಯುತ್ತೆ? – ರಾಮಲಿಂಗಾ ರೆಡ್ಡಿ

Public TV
1 Min Read
Ramalinga Reddy

– ಗ್ಯಾರಂಟಿ ಹಣ ವಿಳಂಬ ಪ್ರತಿಕ್ರಿಯೆಗೆ ರಾಮಲಿಂಗಾ ರೆಡ್ಡಿ ನಕಾರ

ಬೆಂಗಳೂರು: 4-5 ತಿಂಗಳಿಂದ ಅನ್ನಭಾಗ್ಯ ಹಣ ಮತ್ತು ಗೃಹಲಕ್ಷ್ಮಿ ಹಣ ಬಾರದೇ ಇರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ನಿರಾಕರಿಸಿದ್ದಾರೆ.

ಮೆಟ್ರೋ ಸಂಬಂಧ ಇವತ್ತು ವಿಧಾನಸೌಧದಲ್ಲಿ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಗ್ಯಾರಂಟಿ ಹಣ (Guarantee Scheme) ಬಾರದೇ ಇರುವ ವಿಚಾರಕ್ಕೆ ಪ್ರತಿಕ್ರಿಯೆ ಕೇಳಿದರೆ ವಿಷಯ ಡೈವರ್ಟ್ ಆಗೋದು ಬೇಡ ಎಂದು ಉತ್ತರಿಸಲು ನಿರಾಕರಿಸಿದರು. ಇದನ್ನೂ ಓದಿ: ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ದು ಕೇಂದ್ರ ಸರ್ಕಾರ: ವೈಷ್ಣವ್‌ಗೆ ರಾಮಲಿಂಗಾರೆಡ್ಡಿ ತಿರುಗೇಟು

ಇದೇ ವೇಳೆ ಮಾತನಾಡಿದ ಅವರು, ನಮ್ಮ ರಾಜ್ಯದಿಂದ 4.5 ಲಕ್ಷ ಕೋಟಿ ಕೇಂದ್ರಕ್ಕೆ ತೆರಿಗೆ (Tax) ಕೊಡ್ತೀವಿ. ಎಲ್ಲಾ ಹಣ ಕೇಂದ್ರವೇ ಕಿತ್ತುಕೊಂಡು ಹೋಗುತ್ತದೆ. ನಮಗೆ ಎಲ್ಲಿ ಹಣ ಉಳಿಯುತ್ತೆ. ಗ್ಯಾರಂಟಿಗಳ ಪ್ಲ್ಯಾನ್ ನಾವು ಸರಿಯಾಗಿಯೇ ಮಾಡಿದ್ದೇವೆ. ಒಂದು ತಿಂಗಳು ಲೇಟ್ ಆಗಿರಬಹುದು ಅಷ್ಟೇ. ಆದರೆ ಕೇಂದ್ರ ಸರ್ಕಾರ ಅದು ಕೊಟ್ಟೆ ಇದು ಕೊಟ್ಟೆ ಎನ್ನುತ್ತಾರೆ. ನೋಡಿದರೆ ರಸಗೊಬ್ಬರ ದರ ಏರಿಕೆ ಮಾಡಿದ್ದಾರೆ ಎಂದು ಮತ್ತೆ ಕೇಂದ್ರದ ಕಡೆ ಬೆರಳು ತೋರಿಸಿದರು. ಇದನ್ನೂ ಓದಿ: ದೆಹಲಿ ರೈಲ್ವೆ ನಿಲ್ದಾಣಗಳಲ್ಲಿ ಜನಸಂದಣಿ, ಬಿಕ್ಕಟ್ಟು ನಿರ್ವಹಣೆಗಾಗಿ ಎಐ ತಂತ್ರಜ್ಞಾನ ಬಳಕೆ

Share This Article