ಬೆಂಗಳೂರು: ಸಿದ್ದರಾಮಯ್ಯ (Siddaramaiah) ಮಾಸ್ ಲೀಡರ್. ಅಂತಹ ಮಾಸ್ ಲೀಡರ್‌ನ ಯಾರಾದರು ಬೇಡ ಅಂತಾರೆ, ಯಾವುದಾದರು ಪಕ್ಷ ಬೇಡ ಅನ್ನುತ್ತಾ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ (HC Mahadevappa) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಆರೋಗ್ಯವಾಗಿರುವವರೆಗೆ ಫಿಟ್ ಆಗಿರುವವರೆಗೆ ಸಕ್ರಿಯ ರಾಜಕಾರಣದಲ್ಲಿ ಚುನಾವಣಾ ರಾಜಕಾರಣದಲ್ಲಿ ಇರಬೇಕು. ಪಾರ್ಟಿ ದೃಷ್ಟಿಯಿಂದ, ರಾಜ್ಯದ ದೃಷ್ಟಿಯಿಂದ ರಾಷ್ಟ್ರದ ದೃಷ್ಟಿಯಿಂದ ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇರಬೇಕು. ಅನಿವಾರ್ಯ ಅಂತ ಹೇಳಲ್ಲ. ನಾನೇ ಆಗಲಿ ಯಾರೇ ಆಗಲಿ ಅನಿವಾರ್ಯ ಅಲ್ಲ. ಸಿದ್ದರಾಮಯ್ಯರಂತ ಮಾಸ್ ಲೀಡರ್ ಸಕ್ರಿಯವಾಗಿ ಇರಬೇಕು. ಸಿದ್ದರಾಮಯ್ಯ ಮಾಸ್ ಲೀಡರ್. ಎಲ್ಲಾ ಆಯಾಮದಲ್ಲೂ ನಾಯಕತ್ವ ಅಗತ್ಯವಿದೆ. ಒನ್ ಮ್ಯಾನ್ ಶೋ ಆಗಲ್ವಲ್ಲ. ನಾವೆಲ್ಲರೂ ಅವರ ಜೊತೆ ಸೇರಬೇಕು. ಹೊಸನಾಯಕತ್ವ ಬರುವವರೆಗೆ ಸಿದ್ದರಾಮಯ್ಯ ಇರಬೇಕು ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – ಸವಾರರು ಗ್ರೇಟ್ ಎಸ್ಕೇಪ್
ನಾನು ಸಮರ್ಥನಿದ್ದೇನೆ. ನನ್ನ ಸಾಮರ್ಥ್ಯದ ಬಗ್ಗೆ ಅವರ ಅರಿವಿಗೆ ಬರಬೇಕು. ಆಮೇಲೆ ಅವರು ನನ್ನನ್ನ ಗುರುತಿಸಬಹುದು. ಚುನಾವಣೆ ಹೇಗೆ ನಡೆಸಬೇಕೆಂದು ಹೈಕಮಾಂಡ್ ತೀರ್ಮಾನ ಮಾಡುತ್ತೆ. ಆ ಕಾರ್ಯತಂತ್ರದ ಮೂಲಕ ಮಾಡಲಿದೆ. ಸಿದ್ದರಾಮಯ್ಯ ಆರೋಗ್ಯ ಚೆನ್ನಾಗಿರಬೇಕು. ಅವರು ಚೆನ್ನಾಗಿರುವವರೆಗೆ ನಾಯಕತ್ವ ಇರಬೇಕು. ನನ್ನಿಂದಲೇ ಕೋಳಿ ಕೂಗುತ್ತಾ ಎಂದಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯಕ್ಕಷ್ಟೇ ಅಲ್ಲ ದೇಶಕ್ಕೆ ಅನಿವಾರ್ಯ – ಕಂಪ್ಲಿ ಶಾಸಕ ಗಣೇಶ್