ಸಿಎಂ ಸಿದ್ದರಾಮಯ್ಯ ದೇವರಾಜ್ ಅರಸುರವರ ದಾಖಲೆ ಸರಿಗಟ್ಟುತ್ತಾರೆ: ಕೆಎನ್ ರಾಜಣ್ಣ

Public TV
1 Min Read
CM Siddaramaiah 3

ತುಮಕೂರು: ಸಿಎಂ ಸಿದ್ದರಾಮಯ್ಯನವರು (Siddaramaiah) ದೇವರಾಜು ಅರಸುರವರ (Devaraj Urs) ದಾಖಲೆ ಸರಿಗಟ್ಟುತ್ತಾರೆ ಅನ್ನೋದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳುವುದರ ಮೂಲಕ ಸಚಿವ ಕೆಎನ್ ರಾಜಣ್ಣ (KN Rajanna) ಸಿದ್ದರಾಮಯ್ಯರ ಪರ ಬ್ಯಾಟ್ ಬೀಸಿದ್ದಾರೆ.

ತುಮಕೂರಿನ (Tumakuru) ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಗೆ ಹೇಗೆ ಯಡಿಯೂರಪ್ಪರು (BS Yediyurappa) ಮುಖ್ಯನೋ, ಜೆಡಿಎಸ್‌ಗೆ ದೇವೇಗೌಡ ಆಂಡ್ ಕಂಪನಿ ಮುಖ್ಯನೋ, ಹಾಗೆನೇ ಸಿದ್ದರಾಮಯ್ಯ ಆಂಡ್ ಕಂಪನಿ ಕಾಂಗ್ರೆಸ್‌ಗೆ ಮುಖ್ಯ ಎಂದು ಹೇಳುವುದರ ಮೂಲಕ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಅನ್ನೋದನ್ನು ರಾಜಣ್ಣ ಹೇಳಿದ್ದಾರೆ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಅನುಮತಿ ಕೊಡಿ ಅಂತ ನಾನೇ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ: ಹೆಚ್‌ಡಿಡಿ

KN RAJANNA

ಇದರ ಜೊತೆಗೆ ದೆಹಲಿ ಭೇಟಿ ವಿಚಾರವನ್ನು ಪ್ರಸ್ತಾಪಿಸಿದ ಕೆಎನ್ ರಾಜಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿ ಕೆಲ ಬದಲಾವಣೆ ತರುವಂತೆ ಹೈಕಮಾಂಡ್‌ಗೆ ಸಲಹೆ ನೀಡಿದ್ದೇನೆ. ಆಯಾ ಕ್ಷೇತ್ರದಲ್ಲಿ ಶಾಸಕರು ಯಾವ ಸಮುದಾಯಕ್ಕೆ ಸೇರಿರುತ್ತಾರೋ ಆ ಸಮುದಾಯ ಬಿಟ್ಟು ಬೇರೆ ಸಮುದಾಯಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಡಬೇಕು ಎಂದು ಸಲಹೆ ನೀಡಿದ್ದೇನೆ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ನಾನು ಮಂತ್ರಿಗಿರಿ ತೊರೆಯುತ್ತೇನೆ. ಡಿಕೆಶಿ ಅವರಂತೆ ನನನೂ ಎರಡೆರಡು ಸ್ಥಾನಮಾನ ಕೊಡಿ ಎಂದು ನಾನು ಹೈಕಮಾಂಡ್‌ಗೆ ಕೇಳಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ

ಮುಂದಿನ ಮೂರು ತಿಂಗಳೊಳಗೆ ಶೋಷಿತರ ಸಮಾವೇಶ ನಡೆಸಲಿದ್ದು, ಅದರಲ್ಲಿ ದಲಿತ ಸಿಎಂ ವಿಚಾರ ಇರೋದಿಲ್ಲ. ಹೈಕಮಾಂಡ್‌ರಿಂದ ಹಿಡಿದು ಎಲ್ಲರಿಗೂ ಈ ಸಮಾವೇಶಕ್ಕೆ ಆಹ್ವಾನ ನೀಡೋದಾಗಿ ತಿಳಿಸಿದರು. ಇದನ್ನೂ ಓದಿ: ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಬೌರ್ಬನ್ ವಿಸ್ಕಿಯ ಆಮದು ಸುಂಕ ಭಾರೀ ಇಳಿಕೆ – ಈ ವಿಸ್ಕಿಯ ವಿಶೇಷತೆ ಏನು?

Share This Article