ಯಾರಾಗುತ್ತಾರೆ ದೆಹಲಿ ಸಿಎಂ? ರೇಸ್‌ನಲ್ಲಿ ಯಾರಿದ್ದಾರೆ?

Public TV
2 Min Read
Delhi election results 2025 Who will BJP pick as the next Chief MinisterotoJet

ನವದೆಹಲಿ: ದೇಶವನ್ನು ಸುದೀರ್ಘ ಕಾಲ ಪಾಲನೆ ಮಾಡಿದ್ದ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ಗೆಲುವಿನ ಪಥದಲ್ಲಿ ಮುನ್ನಡೆಯುತ್ತಿರುವ ಬಿಜೆಪಿಗೆ ದಕ್ಷಿಣ ರಾಜ್ಯಗಳ ಜೊತೆಗೆ ದೆಹಲಿ ಅಸೆಂಬ್ಲಿ ಕೂಡ ಇಷ್ಟು ದಿನ ಕಬ್ಬಿಣದ ಕಡಲೆಯಾಗಿತ್ತು. ಲೋಕಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪರ ನಿಂತರೂ ಅಸೆಂಬ್ಲಿ ಚುನಾವಣೆ ವಿಚಾರಕ್ಕೆ ಬಂದರೆ ಕಳೆದ 25 ವರ್ಷದಿಂದ ಕೇಸರಿ ಪಕ್ಷವನ್ನು ದೂರ ಇಟ್ಟಿದ್ರು. ಆದ್ರೆ ಈ ಬಾರಿ ದೆಹಲಿ ಗದ್ದುಗೆ ಹಿಡಿಯಲು ಕಮಲ ನಾಯಕರು ಹೂಡಿದ ತಂತ್ರ ಫಲಿಸಿದೆ.

ದೆಹಲಿ ಪೀಠದಲ್ಲಿ ಕೇಸರಿ ಪತಾಕೆ ಹಾರಿದೆ. ಬಿಜೆಪಿಯ 27 ವರ್ಷಗಳ ಸುದೀರ್ಘ ನಿರೀಕ್ಷಣೆ ಫಲಿಸಿದೆ. ಆಪ್ ಹ್ಯಾಟ್ರಿಕ್ ಆಸೆಗೆ ತಣ್ಣೀರು ಎರಚಿದ ಕಮಲ ಪಕ್ಷ ಗೆಲುವಿನ ನಗಾರಿ ಬಾರಿಸಿದೆ. ಆಪ್ ಜಗಜಟ್ಟಿಗಳನ್ನು ಮಕಾಡೆ ಮಲಗಿಸಿ ಪ್ರಚಂಡ ಗೆಲುವು ಕಂಡಿದೆ. ಮತ ಎಣಿಕೆ ಆರಂಭದಿಂದಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು. ಸುಲಭವಾಗಿ ಮ್ಯಾಜಿಕ್ ಸಂಖ್ಯೆ ದಾಟಿತು.

ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಲಿಲ್ಲ. ಕಾಂಗ್ರೆಸ್ ಹ್ಯಾಟ್ರಿಕ್ ಶೂನ್ಯ ಸಂಪಾದನೆ ಮಾಡಿತು. ಈ ಬೆನ್ನಲ್ಲೇ ದೆಹಲಿ ಸಚಿವಾಲಯವನ್ನು ಸೀಜ್ ಮಾಡಿ ಲೆಫ್ಟಿನೆಂಟ್‌ ಗವರ್ನರ್‌ ಆದೇಶ ಹೊರಡಿಸಿದರು. ಅನುಮತಿ ಇಲ್ಲದೇ ಯಾವುದೇ ಕಡತ ಮುಟ್ಟದಂತೆ ಆದೇಶ ನೀಡಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಅಯೋಧ್ಯೆ ಸೋಲಿನ ಸೇಡನ್ನು ತೀರಿಸಿದ ಬಿಜೆಪಿ

delhi election final results

ಯಾರಾಗುತ್ತಾರೆ ಸಿಎಂ?
ದೆಹಲಿ ಗದ್ದುಗೆಯನ್ನು ಬಿಜೆಪಿ ಗೆದ್ದಾಗಿದೆ. ಈಗ ಮುಖ್ಯಮಂತ್ರಿ ಯಾರಾಗಬಹುದು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಸಿಎಂ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಣಯವೇ ಫೈನಲ್. ಮುಖ್ಯಮಂತ್ರಿ ಆಯ್ಕೆ ನಮಗೆ ದೊಡ್ಡ ಸಮಸ್ಯೆ ಅಲ್ಲ ಅದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ತಿಳಿಸಿದ್ದಾರೆ.

ಮುಂದಿನ ಒಂದು ವಾರದೊಳಗೆ ಸಿಎಂ ಆಯ್ಕೆ ಆಗಬಹುದು ಎನ್ನಲಾಗಿದೆ. ಜೈಂಟ್ ಕಿಲ್ಲರ್ ಪರ್ವೇಶ್ ವರ್ಮಾ ಅವರು ಅಮಿತ್‌ಶಾರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದಿದ್ದಾರೆ.  ಇದನ್ನೂ ಓದಿ: ಮುಸ್ಲಿಮ್‌ ಬಾಹುಳ್ಯ ಇರೋ ಮುಸ್ತಫಾಬಾದ್‌ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಪರ್ವೇಶ್ ವರ್ಮಾ
ಕೇಜ್ರಿವಾಲ್ ಸೋಲಿಸಿದ ದೈತ್ಯ. ಮಾಜಿ ಸಿಎಂ ಸಾಹೀಬ್ ಸಿಂಗ್ ವರ್ಮಾ ಪುತ್ರ. ಜಾಟರ ಪ್ರಭಾವಿ ನಾಯಕ ಇದನ್ನೂ ಓದಿ: ದೆಹಲಿಯಲ್ಲಿ ಕಾಂಗ್ರೆಸ್ ಸೋಲಿಗೆ ಇವಿಎಂ ಕಾರಣ: ಪ್ರಿಯಾಂಕಾ ಜಾರಕಿಹೊಳಿ

ವಿಜೇಂದರ್ ಗುಪ್ತಾ
ಪಕ್ಷದ ಹಿರಿಯ ನಾಯಕ. 2015, 2020ರಲ್ಲಿ ಆಪ್ ಹವಾ ನಡುವೆಯೂ ಗೆದ್ದಿದ್ದರು. ವಿಪಕ್ಷ ನಾಯಕನಾಗಿ, ಪಕ್ಷದ ಅಧ್ಯಕ್ಷರಾಗಿ ಸೇವೆ.

 

ಸತೀಶ್ ಉಪಾಧ್ಯಾಯ್
ಮೊದಲ ಬಾರಿ ಸ್ಪರ್ಧಿಸಿ ಮಾಳವೀಯ ನಗರದಿಂದ ಆಯ್ಕೆಯಾಗಿದ್ದಾರೆ. ಮೂಲತಃ ಉದ್ಯಮಿಯಾಗಿದ್ದಾರೆ.

ವೀರೇಂದ್ರ ಸಚ್‌ದೇವ್
ಹಾಲಿ ಬಿಜೆಪಿ ಅಧ್ಯಕ್ಷ. ಕಿಂಗ್ ಮೇಕರ್ ಅಂದ್ರೂ ತಪ್ಪಾಗಲಾರದು. ಚುನಾವಣೆಯಲ್ಲಿ ಸ್ಪರ್ಧಿಸದೇ ಆಪ್ ತಂತ್ರಗಳಿಗೆ ಗಟ್ಟಿ ಕೌಂಟರ್ ನೀಡಿದವರು.

ದುಷ್ಯಂತ್ ಕುಮಾರ್ ಗೌತಮ್
ಕರೋಲ್‌ಬಾಗ್‌ನಲ್ಲಿ ಸೋತಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಪ್ರಮುಖ ದಲಿತ ನಾಯಕರಾಗಿದ್ದಾರೆ.

 

Share This Article