ದಿಲ್ಲಿ ಗೆದ್ದಾಯ್ತು.. 2026ಕ್ಕೆ ಬಂಗಾಳ ಟಾರ್ಗೆಟ್‌: ಮಮತಾ ಬ್ಯಾನರ್ಜಿಗೆ ಬಿಜೆಪಿ ಎಚ್ಚರಿಕೆ

Public TV
1 Min Read
Mamata Banerjee

ಕೋಲ್ಕತ್ತಾ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಗೆಲುವಿನಿಂದ ಉತ್ತೇಜಿತರಾಗಿರುವ ಸುವೇಂದು ಅಧಿಕಾರಿ, ಪಶ್ಚಿಮ ಬಂಗಾಳ ಸಿಎಂಗೆ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ. ‘ಎಚ್ಚರಿಕೆಯಿಂದ ಇರಿ.. ಮುಂದಿನ ಟಾರ್ಗೆಟ್‌ ನೀವೇ’ ಎಂದು ತಿಳಿಸಿದ್ದಾರೆ.

ಬಿಜೆಪಿಯ ಗೆಲುವು ಖಚಿತವಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ‘ದೆಹಲಿ ಕಿ ಜೀತ್ ಹಮಾರಿ ಹೈ… 2026 ಮೇ ಬೆಂಗಾಲ್ ಕಿ ಬಾರಿ’ (ನಾವು ದೆಹಲಿಯನ್ನು ಗೆದ್ದಿದ್ದೇವೆ.. 2026 ಕ್ಕೆ ಬಂಗಾಳದ ಸರದಿ) ಎಂದು ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದಾರೆ.

ಬಂಗಾಳದ ಮತ್ತೊಬ್ಬ ಹಿರಿಯ ಬಿಜೆಪಿ ನಾಯಕ ಸುಕಾಂತ ಮಜುಂದಾರ್ ಕೂಡ ಇದೇ ರೀತಿಯ ಎಚ್ಚರಿಕೆಯನ್ನು ನೀಡುತ್ತಾ, ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ಜನರು ಕೂಡ ಬಿಜೆಪಿಗೆ ಮತ ಹಾಕುತ್ತಾರೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಗೆಲುವಿಗಾಗಿ ಇಬ್ಬರೂ ದೆಹಲಿಯ ಬಂಗಾಳಿ ಸಮುದಾಯಕ್ಕೆ ಧನ್ಯವಾದ ತಿಳಿಸಿದ್ದಾರೆ.

ದೆಹಲಿಯ 70 ವಿಧಾನಸಭಾ ಸ್ಥಾನಗಳಲ್ಲಿ 48 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಎಎಪಿ 22 ಸ್ಥಾನಗಳಿಗೆ ತೃಪ್ತಿ ಪಟ್ಟಿದೆ. ಕಾಂಗ್ರೆಸ್‌ ಸೊನ್ನೆ ಸುತ್ತಿದೆ.

ಬಿಜೆಪಿ 2020 ರ ಚುನಾವಣೆಯಲ್ಲಿ 8 ಮತ್ತು 2015 ರಲ್ಲಿ ಮೂರು ಸ್ಥಾನಗಳನ್ನು ಗೆದ್ದಿತ್ತು. ಎಎಪಿಯಲ್ಲಿ ಕೇಜ್ರಿವಾಲ್‌, ಸಿಸೋಡಿಯಾ ಸೇರಿದಂತೆ ಅನೇಕ ಘಟಾನುಘಟಿ ನಾಯಕರೇ ಚುನಾವಣೆಯಲ್ಲಿ ಸೋತು ಮುಖಭಂಗ ಅನುಭವಿಸಿದ್ದಾರೆ.

Share This Article