ಕಲಬುರಗಿ | ಅಪ್ರಾಪ್ತನಿಗೆ ಬೈಕ್ ಕೊಟ್ಟಿದ್ದಕ್ಕೆ ತಂದೆಗೆ ಬಿತ್ತು 25,000 ರೂ. ದಂಡ!

Public TV
1 Min Read
Bike

ಕಲಬುರಗಿ: ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ (Bike) ಕೊಟ್ಟಿದ್ದಕ್ಕೆ ತಂದೆಗೆ 25,000 ರೂ. ದಂಡ ವಿಧಿಸಿ, ಜೇವರ್ಗಿ ಜೆಮ್‌ಎಫ್‌ಸಿ ಕೋರ್ಟ್‌ (JMFC Court) ಆದೇಶಿಸಿದೆ.

ಯಡ್ರಾಮಿ ಪೊಲೀಸ್ ಠಾಣೆಯ ಪೊಲೀಸರ ತಪಾಸಣೆ ವೇಳೆ ಅಪ್ರಾಪ್ತ ಬಾಲಕ ನಡೆಸುತ್ತಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು – ಮಂಗಳೂರಲ್ಲಿ ಕಾರ್ಯಕರ್ತರ ಸಂಭ್ರಮ

ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿದ ಜೇವರ್ಗಿ ಜೆಮ್‌ಎಫ್‌ಸಿ ನ್ಯಾಯಾಲಯ ನ್ಯಾಯಾಧೀಶರು, ಅಪ್ರಾಪ್ತನಿಗೆ ಬೈಕ್ ಓಡಿಸಲು ಕೊಟ್ಟಿದ್ದ ತಂದೆಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

ಅಲ್ಲದೆ, ಅಪ್ರಾಪ್ತ ವಯಸ್ಕರಿಗೆ ಬೈಕ್ ಚಲಾಯಿಸಲು ಅವಕಾಶ ಕೊಡದಂತೆ ಕೋರ್ಟ್ ಸೂಚನೆ ನೀಡಿದೆ. ಇದನ್ನೂ ಓದಿ: ಜನರ ತೀರ್ಪು ಸ್ವಾಗತಿಸುತ್ತೇವೆ.. ಸೋಲನ್ನ ಹೀನಾಯ ಸೋಲು ಎಂದು ಹೇಳಲ್ಲ: ಮುಖ್ಯಮಂತ್ರಿ ಚಂದ್ರು

Share This Article