ವಾಟ್ಸಪ್‌ಗೆ ಬಂದಿರುವ ಲಿಂಕ್‌ ಓಪನ್‌ ಮಾಡದೇ ಇದ್ರೂ ಫೋನ್‌ ಹ್ಯಾಕ್‌!

Public TV
1 Min Read
whatsapp spyware photo

ವಾಷಿಂಗ್ಟನ್‌: ವಾಟ್ಸಪ್‌ಗೆ (Whatsapp) ಬಂದಿರುವ ಲಿಂಕ್‌ ಓಪನ್‌ ಮಾಡದೇ ಇದ್ದರೂ ಇನ್ನು ಮುಂದೆ ನಿಮ್ಮ ಫೋನ್‌ (Phone) ಹ್ಯಾಕ್‌ (Hack) ಆಗಬಹುದು.

ಹೌದು. ಇಲ್ಲಿಯವರೆಗೆ ವಾಟ್ಸಪ್‌ ಬಂದ ಲಿಂಕ್‌ ಓಪನ್‌ ಮಾಡಿದ್ದರೆ ಆಗ ಫೋನ್‌ಗಳು ಹ್ಯಾಕ್‌ ಆಗುತ್ತಿದ್ದವು. ಆದರೆ ಈಗ ಹ್ಯಾಕರ್‌ಗಳು ಇನ್ನು ಮುಂದೆ ಹೋಗಿದ್ದು ಲಿಂಕ್‌ ಓಪನ್‌ ಮಾಡದೇ ಹ್ಯಾಕ್‌ ಮಾಡಲು ಆರಂಭಿಸಿದ್ದಾರೆ.

ಸುಮಾರು 12ಕ್ಕೂ ಹೆಚ್ಚು ದೇಶಗಳಲ್ಲಿ 90 ಜನರ ಮೊಬೈಲಿಗೆ ಸ್ಪೈವೇರ್ (Spyware) ಬಳಸಿ ಹ್ಯಾಕ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್‌ (Israel) ಕಂಪನಿಯಾದ ಪ್ಯಾರಾಗಾನ್ ಸೊಲ್ಯೂಷನ್ಸ್ ಒಡೆತನದ ಹ್ಯಾಕಿಂಗ್ ಟೂಲ್‌ ಬಳಸಿ ಹ್ಯಾಕ್‌ ಮಾಡಲಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

whatsapp spyware

ಪ್ಯಾರಾಗಾನ್‌ನ ಸ್ಪೈವೇರ್ ಅನ್ನು  ಸರ್ಕಾರಗಳಿಗೆ ಮಾರಾಟ ಮಾಡಲಾಗುತ್ತದೆ. ಅಪರಾಧಿಗಳ ವಿರುದ್ಧ ಮತ್ತು ರಾಷ್ಟ್ರೀಯ ಭದ್ರತೆ ಸಂಬಂಧ ಪಟ್ಟ ಪ್ರಕರಣಗಳು ಬಂದಾಗ ಸರ್ಕಾರ ಈ ಸ್ಪೈವೇರ್‌ ಬಳಸಿ ಮಾಹಿತಿಗಳನ್ನು ಕಲೆ ಹಾಕುತ್ತವೆ.

ಈ ಸ್ಪೈವೇರ್‌ ಪೀಡಿತ ಬಳಕೆದಾರರ ಸಾಧನಗಳು ಅಪಾಯಕ್ಕೆ ಸಿಲುಕಿರಬಹುದು ಎಂದು ವಾಟ್ಸಾಪ್ ದೃಢಪಡಿಸಿದೆ. ಸುಮಾರು 90 ಬಳಕೆದಾರರನ್ನು ಹ್ಯಾಕ್ ಮಾಡುವ ಪ್ರಯತ್ನವನ್ನು ಪತ್ತೆಹಚ್ಚಿರುವುದಾಗಿ ವಾಟ್ಸಾಪ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

ನಿರ್ದಿಷ್ಟವಾಗಿ ಯಾರನ್ನು ಗುರಿಯಾಗಿಸಿ ಈ ಸ್ಪೈವೇರ್‌ ಬಿಡಲಾಗಿದೆ ಎಂದು ಹೇಳಲು ವಾಟ್ಸಪ್‌ ಅಧಿಕಾರಿಗಳು ನಿರಾಕರಿಸಿದ್ದಾರೆ. ಯುರೋಪಿನ ಹಲವಾರು ಜನ ಸೇರಿದಂತೆ 12 ಹೆಚ್ಚು ದೇಶಗಳ ಜನರನ್ನು ಗುರಿಯಾಗಿ ಈ ಸೈಬರ್‌ ದಾಳಿ ನಡೆದಿದೆ.

 

Share This Article