ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣಗೆ (Rashmika Mandanna) ಭಾರೀ ಬೇಡಿಕೆಯಿದೆ. ಈ ಕನ್ನಡದ ನಟಿ ನಟಿಸಿರುವ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆಯುತ್ತಿದೆ. ಹೀಗಿರುವಾದ ‘ಪುಷ್ಪ 2’ (Pushpa 2) ಯಶಸ್ಸಿನ ಬಳಿಕ ಅವರು ‘ಛಾವಾ’ (Chhaava) ಸಿನಿಮಾದ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ರಶ್ಮಿಕಾ ಬಣ್ಣದ ಬದುಕಿನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದುವೇ ‘ಛಾವಾ’ ಸಿನಿಮಾ. ಮೊದಲ ಬಾರಿಗೆ ಮಹಾರಾಣಿಯ ಪಾತ್ರಕ್ಕೆ ಶ್ರೀವಲ್ಲಿ ಜೀವ ತುಂಬಿದ್ದಾರೆ. ಅವರ ಮೊದಲ ಹಿಸ್ಟೋರಿಕಲ್ ಬಿಗ್ ಬಜೆಟ್ ಸಿನಿಮಾ ಆಗಿರೋ ಕಾರಣ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಇದನ್ನೂ ಓದಿ:ಅದ್ಧೂರಿಯಾಗಿ ಮದುವೆಯಾದ ‘ಸನಮ್ ತೇರಿ ಕಸಂ’ ಚಿತ್ರದ ನಟಿ ಮೌರಾ
‘ಛಾವಾ’ ಸಿನಿಮಾದಲ್ಲಿ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ ಛತ್ರಪತಿ ಸಂಭಾಜಿ ಮಹಾರಾಜನ ಪಾತ್ರವನ್ನು ವಿಕ್ಕಿ ಕೌಶಲ್ ನಿಭಾಯಿಸಿದ್ದಾರೆ. ಸಂಭಾಜಿ ಮಹಾರಾಜರ ಶೌರ್ಯ ಅವರ ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದೆ. ಗಂಡ ಮತ್ತು ಹೆಂಡತಿಯ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಮರಾಠ ಸಾಮ್ರಾಜ್ಯದಿಂದ ಸಂಭಾಜಿ ದೂರ ಇದ್ದಾಗ ಅವರ ಹೆಂಡತಿ ಎಲ್ಲವನ್ನೂ ಯಾವ ರೀತಿ ನಿರ್ವಹಿಸುತ್ತಿದ್ದರು ಎಂಬುದು ಕಥೆಯ ಹೈಲೈಟ್ ಆಗಿದೆ. ಇಲ್ಲಿ ವಿಕ್ಕಿ ಕೌಶಲ್ ರಶ್ಮಿಕಾ ನಾಯಕಿಯಾಗಿದ್ದಾರೆ. ಇದೇ ಫೆ.14ರಂದು ಸಿನಿಮಾ ರಿಲೀಸ್ ಆಗಲಿದೆ.
View this post on Instagram
ಇನ್ನೂ ರಶ್ಮಿಕಾ ಮಂದಣ್ಣ ಅವರು ಹೀರೋಗಳ ಪಾಲಿಗೆ ಲಕ್ಕಿ ನಟಿ. ಅವರು ನಟಿಸಿದ ಸಿನಿಮಾ ಫ್ಲಾಪ್ ಆಗಿದ್ದಕ್ಕಿಂತ ಸೂಪರ್ ಸಕ್ಸಸ್ ಕಂಡಿರೋದೆ ಜಾಸ್ತಿ. ಹಾಗಾಗಿ ರಶ್ಮಿಕಾ ಸಿನಿಮಾದಲ್ಲಿ ನಟಿಸಿದ್ದಾರೆ ಎಂದರೆ ಆ ಸಿನಿಮಾ ಬಿಗ್ ಸಕ್ಸಸ್ ಕಾಣಲಿದ ಎಂಬುದು ಸಿನಿಪಂಡಿತರ ಲೆಕ್ಕಚಾರ. ಈಗಾಗಲೇ ಪುಷ್ಪ, ಅನಿಮಲ್, ಪುಷ್ಪ 2 ಈ ಸಿನಿಮಾ ಭರ್ಜರಿ ಸಕ್ಸಸ್ ಕಂಡಿದೆ. ಸಿನಿಮಾದ ಲುಕ್, ಟ್ರೈಲರ್, ಸಾಂಗ್ಸ್ ಪ್ರೇಕ್ಷಕರ ಗಮನ ಸೆಳೆದಿದೆ.
ಇನ್ನೂ ತಮ್ಮ ಕಾಲಿಗೆ ಪೆಟ್ಟಾಗಿದ್ರೂ ಕೂಡ ಸಿನಿಮಾ ಪ್ರಚಾರಕ್ಕೆ ನಟಿ ಸಾಥ್ ನೀಡುತ್ತಿದ್ದಾರೆ. ಕುಂಟುತ್ತಲೇ ಸಮಾರಂಭಕ್ಕೆ ಆಗಮಿಸಿ ಈ ಸಿನಿಮಾ ತಮಗೆಷ್ಟು ಸ್ಪೆಷಲ್ ಅನ್ನೋದನ್ನು ಅವರು ತಿಳಿಸಿದ್ದಾರೆ. ಮೊದಲ ಐತಿಹಾಸಿಕ ಸಿನಿಮಾ ಆಗಿರೋದ್ರಿಂದ ನಟಿ ಹೆಚ್ಚು ಗಮನ ಕೊಡುತ್ತಿದ್ದಾರೆ. ಹಾಗಾಗಿ ರಶ್ಮಿಕಾ ನಟಿಸಿರುವ ‘ಛಾವಾ’ ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ.