ಬಾಂಗ್ಲಾದಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸಿದ ಭಾಷಣ – ಉದ್ರಿಕ್ತರಿಂದ ಶೇಖ್ ಹಸೀನಾ ತಂದೆ ನಿವಾಸ ಧ್ವಂಸ

Public TV
2 Min Read
Sheikh Hasina House 3

ಢಾಕಾ: ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರದ ಕಿಡಿ ಧಗಧಗಿಸುತ್ತಿದೆ. ಭಾರತಕ್ಕೆ ಪಲಾಯನ ಮಾಡಿರುವ ಶೇಖ್ ಹಸೀನಾ (Sheikh Hasina) ಮಾಡಿದ ಭಾಷಣದಿಂದ ಆಕ್ರೋಶಗೊಂಡ ವಿರೋಧಿ ಬಣ ರಾಜಧಾನಿ ಢಾಕಾದಲ್ಲಿ (Dhaka) ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.

ಶೇಖ್ ಹಸೀನಾ ತಂದೆ, ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ (Sheikh Mujibur Rahma) ಸ್ಮಾರಕ ಮತ್ತು ಅವರ ನಿವಾಸವನ್ನ ಧ್ವಂಸಗೊಳಿಸಲಾಗಿದೆ. ಮನೆಗೆ ಬೆಂಕಿ ಹಚ್ಚಿ, ಜೆಸಿಬಿ, ಕ್ರೇನ್ ಮೂಲಕ ಮನೆ ಧ್ವಂಸಗೊಳಿಸಿದ್ದಾರೆ. ಇದನ್ನೂ ಓದಿ: ಬಾವಿಯಲ್ಲಿ ಪತ್ತೆಯಾದ ಬುಲೆಟ್ ಬೈಕ್ ಸುತ್ತ ಅನುಮಾನದ ಹುತ್ತ!

Sheikh Hasina House

ನಾವು ಗಳಿಸಿದ ಸ್ವಾತಂತ್ರ‍್ಯವನ್ನು, ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬುಲ್ಡೋಜರ್ ಮೂಲಕ ನಾಶಗಳಿಸಲು ಸಾಧ್ಯವಿಲ್ಲವೆಂದು ಶೇಖ್ ಹಸೀನಾ ಭಾರತದಿಂದ ಆನ್‌ಲೈನ್ ಮೂಲಕ ಮಾಡಿದ ಭಾಷಣಕ್ಕೆ ಕೆರಳಿದ ಪ್ರತಿಭಟನಾಕಾರರು ಅವಾಮಿ ಲೀಗ್ ಪಕ್ಷ ನಿಷೇಧಕ್ಕೆ ಆಗ್ರಹಿಸಿ ದಂಗೆ ಎಬ್ಬಿಸಿದ್ದಾರೆ. ಇದು ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಅಶಾಂತಿ ಹರಡುವ ಸಾಧ್ಯತೆ ಇದೆ.

ಶೇಖ್‌ ಹಸೀನಾ ಭಾಷಣದಲ್ಲಿ ಹೇಳಿದ್ದೇನು?
ಶೇಖ್‌ ಹಸೀನಾ ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಆನ್‌ಲೈನ್‌ ಮೂಲಕ ಭಾಷಣ ಮಾಡಿದರು. ಪ್ರಸ್ತುತ ದುರಾಡಳಿತದ ವಿರುದ್ಧ ಪ್ರತಿರೋಧ ಸಂಘಟಿಸಲು ದೇಶವಾಸಿಗಳಿಗೆ ಕರೆ ನೀಡಿದರು. ನಾವು ಗಳಿಸಿದ ಸ್ವಾತಂತ್ರ‍್ಯವನ್ನು, ಲಕ್ಷಾಂತರ ಹುತಾತ್ಮರ ಪ್ರಾಣವನ್ನು ಬುಲ್ಡೋಜರ್ ಮೂಲಕ ನಾಶಗಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೊಹಮ್ಮದ್‌ ಯೂನಸ್‌ ನೇತೃತ್ವದ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ನನ್ನ ತಂದೆ ನಾವು ನಿರ್ಮಾಣ ಕಟ್ಟಡಗಳನ್ನು ಕೆಡವಬಹುದು, ಆದ್ರೆ ಇತಿಹಾಸವನ್ನು ಕೆಡವಲು ಸಾಧ್ಯವಿಲ್ಲ. ಇಂದಲ್ಲ ನಾಳೆ ಅದು ತನ್ನ ಸೇಡು ತೀರಿಸಿಕೊಳ್ಳುತ್ತೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಎಚ್ಚರಿಸಿದರು. ಇದನ್ನೂ ಓದಿ: ಗೌತಮ್‌ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಪ್ರತಿ ವರ್ಷ 500 ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ 10 ಲಕ್ಷ ನೆರವು ಘೋಷಣೆ

ಈ ಹಿಂದೆ 1972ರಲ್ಲಿ‌ ನಡೆದ ವಿದ್ಯಾರ್ಥಿ ಆಂದೋಲನವು ದೇಶದ ಸಂವಿಧಾನವನ್ನೇ ನಾಶಪಡಿಸುವ ಎಚ್ಚರಿಕೆ ನೀಡಿತ್ತು. ಕೆಲ ಬಲಪಂಥೀಯ ಗುಂಪುಗಳು ಶೇಖ್ ಮುಜಿಬ್ ನೇತೃತ್ವದ ಸ್ವಾತಂತ್ರ್ಯೋತ್ತರ ಸರ್ಕಾರವು ಅಳವಡಿಸಿಕೊಂಡ ರಾಷ್ಟ್ರಗೀತೆಯನ್ನು ಬದಲಾಯಿಸುವಂತೆ ಸೂಚಿಸಿದ್ದವು. ಇದ್ಯಾವುದನ್ನೂ ಇತಿಹಾಸ ಮರೆತಿಲ್ಲ ಎಂದು ಕಹಿ ಘಟನೆಗಳನ್ನು ನೆನಪಿಸಿಕೊಂಡರು.

ಧ್ವಂಸಗೊಂಡ ಮನೆಗೊಂಡು ಇತಿಹಾಸವಿದೆ:
ಅಲ್ಲದೇ ಈಗ ಧ್ವಂಸಗೊಳಿಸಿದ ಮನೆ ಬಾಂಗ್ಲಾದೇಶದ ಇತಿಹಾಸದಲ್ಲಿ ಒಂದು ಅಪ್ರತಿಮ ಸಂಕೇತವಾಗಿತ್ತು. ಏಕೆಂದರೆ ಶೇಖ್ ಮುಜೀಬ್ ಸ್ವಾತಂತ್ರ್ಯಪೂರ್ವದ ಸ್ವಾಯತ್ತತೆಯ ಚಳುವಳಿಯನ್ನು ದಶಕಗಳ ಕಾಲ ಈ ಮನೆಯಿಂದಲೇ ಮುನ್ನಡೆಸಿದ್ದರು. ಬಳಿಕ ಇದನ್ನು ವಸ್ತು ಸಂಗ್ರಹಾಲಯವನ್ನಾಗಿ ಬದಲಾಯಿಸಲಾಗಿತ್ತು.

Share This Article