ಕುಂಭಮೇಳದ ಮೊನಾಲಿಸಾ ಸಿನಿಮಾ ಆಫರ್‌ ಒಪ್ಪಿದ್ಹೇಗೆ?

Public TV
1 Min Read
Monalisa movie offer

ನವದೆಹಲಿ: ಪ್ರಯಾಗ್‌ರಾಜ್‌ನ (Prayagraj) ಕುಂಭಮೇಳದಲ್ಲಿ (Maha Kumbhamela) ತನ್ನ ಕಣ್ಣುಗಳಿಂದಲೇ ಎಲ್ಲರ ನಿದ್ದೆಗೆಡಿಸಿದ್ದ ಮೊನಾಲಿಸಾ ಇದೀಗ ದೊಡ್ಡ ಪರದೆಯ ಮೇಲೆ ಬರಲು ಸಿದ್ಧಳಾಗಿದ್ದಾಳೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಹುಡುಗಿಯೊಬ್ಬಳು ರುದ್ರಾಕ್ಷಿ ಮಾರುತ್ತಿದ್ದಳು. ಆಕೆಯ ಮುಗ್ಧ ನಗು, ನೀಲಿ ಕಣ್ಣುಗಳ ಮೂಲಕವೇ ಎಲ್ಲರ ಗಮನಸೆಳೆದು ರಾತ್ರೋರಾತ್ರಿ ಫೇಮಸ್‌ ಆಗಿ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಳು.

ಇದೀಗ ಬರಹಗಾರ ಹಾಗೂ ನಿರ್ದೇಶಕ ಸನೋಜ್‌ ಮಿಶ್ರಾ ಅವರು ಮೊನಾಲಿಸಾಳ ಮನೆಗೆ ಭೇಟಿ ನೀಡಿದ್ದು, ಅವರ ಕುಟುಂಬದವರ ಒಪ್ಪಿಗೆ ಮೇರೆಗೆ ʻದಿ ಡೈರಿ ಆಫ್‌ ಮಣಿಪುರ್‌ʼ ಚಿತ್ರದಲ್ಲಿ ನಟಿಸಲು ಮೊನಾಲಿಸಾ ಸಹಿ ಹಾಕಿದ್ದಾರೆ. ಇದಕ್ಕೂ ಮುನ್ನ ಮೊನಾಲಿಸಾಳಿಗೆ ಹಲವು ಸಿನಿಮಾದಲ್ಲಿ ನಟಿಸುವಂತೆ ಆಫರ್‌ಗಳು ಬಂದಿದ್ದವು ಎನ್ನಲಾಗಿದೆ.ಇದನ್ನೂ ಓದಿ: ಮೊನಾಲಿಸಾ ಹಾಟ್‌ ಸಾಂಗ್‌ ರಿಲೀಸ್‌ – ವಿಡಿಯೋ ವೈರಲ್‌!

 

View this post on Instagram

 

A post shared by Sanoj Mishra (@sanojmishra)

ಮೊನಾಲಿಸಾ ಮನೆಗೆ ನಿರ್ದೇಶಕರು ಭೇಟಿ ನೀಡಿರುವ ವಿಡಿಯೇವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿ ನಿರ್ದೇಶಕ ಸನೋಜ್‌ ಮಿಶ್ರಾ ಮಾತನಾಡಿ, ಮೊನಾಲಿಸಾ ಕುಟುಂಬದವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಮೊನಾಲಿಸಾ ಕುಟುಂಬದವರು ಮುಗ್ಧ ಮನಸ್ಸಿನವರು. ಸಿನಿಮಾದಲ್ಲಿ ನಟಿಸಲು ಆಕೆ ಹಾಗೂ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಮೊನಾಲಿಸಾ ಹಾಟ್‌ ಡ್ಯಾನ್ಸ್‌ ಮಾಡಿರುವ ವಿಡಿಯೋ ವೈರಲ್‌ ಆಗಿತ್ತು. ಕೆಂಪು ಬಣ್ಣದ ಒನ್‌ಪೀಸ್‌ನಲ್ಲಿ ಕಾಣಿಸಿಕೊಂಡಿದ್ದ ಮೊನಾಲಿಸಾಳ ಸಂಪೂರ್ಣ ಲುಕ್‌ ಬದಲಾಗಿದ್ದು, ಸಂಪೂರ್ಣವಾಗಿ AI ತಂತ್ರಜ್ಞಾನ ಬಳಸಿಕೊಂಡು ವಿಡಿಯೋ ಮಾಡಲಾಗಿತ್ತು.ಇದನ್ನೂ ಓದಿ: ವೈರಲ್ ಆಗಿದ್ದ ಸುಂದರ ಕಣ್ಣಿನ ಮೊನಾಲಿಸಾ ಕುಂಭಮೇಳದಿಂದ ಹೊರನಡೆದಿದ್ಯಾಕೆ?

 

Share This Article