ಟ್ರಾಫಿಕ್ ರೂಲ್ಸ್ ಬ್ರೇಕ್ – 1.61 ಲಕ್ಷ ದಂಡ ಕಟ್ಟಿದ ಸವಾರ

Public TV
1 Min Read
Bengaluru Scooty Fine

ಬೆಂಗಳೂರು: ಸಂಚಾರಿ ನಿಮಯ ಉಲ್ಲಂಘನೆ ಮಾಡಿದ ಬೈಕ್ ಸವಾರ ಬರೋಬ್ಬರಿ 1.61 ಲಕ್ಷ ರೂ. ದಂಡ ಪಾವತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru Scooty Fine 2 Copy

ಕೆಎ05 ಜೆಡ್‌ಎಕ್ಸ್1344 ನಂಬರ್‌ನ ಸ್ಕೂಟರ್‌ನಿಂದ ಹೆಲ್ಮೆಟ್, ಸಿಗ್ನಲ್ ಜಂಪ್ ಹೀಗೆ ಹಲವು ರೀತಿಯಲ್ಲಿ ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಾಗಿತ್ತು. ಇದೀಗ ಸ್ಕೂಟರ್ ಸವಾರ ಕೊನೆಗೂ ಕಾನೂನಿಗೆ ತಲೆ ಬಾಗಿದ್ದಾನೆ. ತನ್ನ ಬೈಕ್ ಮೇಲಿದ್ದ 1.61 ರೂ. ದಂಡದ ಮೊತ್ತ ಪಾವತಿಸಿದ್ದಾರೆ.ಇದನ್ನೂ ಓದಿ: ಮೇಲುಕೋಟೆಗೆ ಸಚಿವ ಚಲುವರಾಯಸ್ವಾಮಿ ಕುಟುಂಬಸ್ಥರ ಭೇಟಿ – ಮನೆದೇವರಿಗೆ ವಿಶೇಷ ಪೂಜೆ

ಸ್ಕೂಟರ್ ಮೇಲೆ ಕಳೆದ ವರ್ಷ 1,05,500 ರೂ. ದಂಡ ಹಾಕಲಾಗಿತ್ತು. ಈ ವರ್ಷ 1,61,000 ರೂ. ದಂಡ ಏರಿಕೆಯಾಗಿತ್ತು. ಆದರೂ, ಪೊಲೀಸರ ಭಯವಿಲ್ಲದೇ ರಾಜಾರೋಷವಾಗಿ ವ್ಯಕ್ತಿ ಸ್ಕೂಟರ್ ಚಲಾಯಿಸುತ್ತಿದ್ದ. ಈ ಕುರಿತು ವ್ಯಕ್ತಿಯೊಬ್ಬರು ಸ್ಕೂಟರ್ ಪೋಟೋ ತೆಗೆದು, ಬೆಂಗಳೂರಿನಲ್ಲಿ ಸ್ಕೂಟರ್ ಬೆಲೆಗಿಂತ ದುಪ್ಪಟ್ಟು ಟ್ರಾಫಿಕ್ ಫೈನ್ ವಿಧಿಸಿಕೊಂಡಿದ್ದ ವ್ಯಕ್ತಿ ಎಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿದ್ದರು.

Bengaluru Scooty Fine 1

ಇದಕ್ಕೆ ಬೆಂಗಳೂರು ಸಂಚಾರಿ ಪೊಲೀಸರು ಯಾಕೆ ಇನ್ನೂ ಸವಾರನ ವಿರುದ್ಧ ಕ್ರಮಕೈಗೊಂಡಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೊಲೀಸರು ವೈರಲ್ ಆಗುತ್ತಿದ್ದ ಸ್ಕೂಟರ್ ಪತ್ತೆ ಹಚ್ಚಿದ್ದರು. ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿ, ಸ್ಕೂಟರ್ ಚಲಾಯಿಸುತ್ತಿದ್ದ ವ್ಯಕ್ತಿಗೆ ದಂಡದ ಮೊತ್ತ ಕಟ್ಟುವಂತೆ ನೋಟಿಸ್ ನೀಡಿ, ಸ್ಕೂಟರ್ ಸೀಜ್ ಮಾಡಿದ್ದರು. ಸ್ಕೂಟರ್ ಮೇಲೆ 2023ರಿಂದ ಈವರೆಗೆ ಒಟ್ಟು 311 ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದ್ದವು.

ಇದೀಗ ಸ್ಕೂಟರ್ ಮೇಲಿದ್ದ ಎಲ್ಲಾ ದಂಡದ ಮೊತ್ತವನ್ನು ಸಂಚಾರಿ ಪೊಲೀಸರಿಗೆ ಕಟ್ಟಿದ್ದಾರೆ. ದಂಡ ಕಟ್ಟಿದ ಮೇಲೆ ಸ್ಕೂಟರ್ ಸವಾರನಿಗೆ ಸಂಚಾರಿ ನಿಯಮ ಪಾಲನೆಯ ಬಗ್ಗೆ ಅರಿವು ಮೂಡಿಸಿ, ತಲೆಗೆ ಹೆಲ್ಮೆಟ್ ಹಾಕಿ ಕಳಿಸಿದ್ದಾರೆ.ಇದನ್ನೂ ಓದಿ: ಯುಗಾದಿಗೆ ಗ್ಯಾರಂಟಿ ಹಣ ಬಿಡುಗಡೆ: ಶಾಸಕ ಬಸವಂತಪ್ಪ

 

Share This Article