ಚೆನ್ನಾಗಿರುವ ರಸ್ತೆಗಳಲ್ಲೂ ಆಕ್ಸಿಡೆಂಟ್ ಆಗುತ್ತೆ, ಎಚ್ಚರಿಕೆಯಿಂದ ಪ್ರಯಾಣಿಸಿ: ಚಲುವರಾಯಸ್ವಾಮಿ

Public TV
1 Min Read
Chaluvaraya Swamy

ಮಂಡ್ಯ: ಚೆನ್ನಾಗಿರುವ ರಸ್ತೆಗಳಲ್ಲೂ ಆಕ್ಸಿಡೆಂಟ್ ಆಗುತ್ತಿವೆ. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾವಣೆ ಮಾಡಬೇಕು ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (Chaluvaraya Sw amy) ಸಾರ್ವಜನಿಕರಲ್ಲಿ ಮನವಿ ಮಾಡಿದರು.

ವಿಸಿ ನಾಲೆಗೆ ಕಾರು ಪಲ್ಟಿಯಾಗಿ (VC Canal car Overturn) ಮೂವರು ಸಾವನ್ನಪ್ಪಿರುವ ವಿಚಾರವಾಗಿ ಮೇಲುಕೋಟೆಯಲ್ಲಿ ಮಾತನಾಡಿ, ಮೃತರ ಕುಟುಂಬಕ್ಕೆ ಶಾಸಕ ಗಣಿಗ ರವಿ ವೈಯಕ್ತಿಕವಾಗಿ ಪರಿಹಾರ ನೀಡಿದ್ದಾರೆ. ಹೆಚ್ಚಿನ ಪರಿಹಾರ ಕೊಡಿಸಲು ಸಿಎಂ ಬಳಿ ಮಾತನಾಡಿ ಪ್ರಯತ್ನ ಮಾಡುತ್ತೇನೆ. ಕೆಟ್ಟಿರುವ ರಸ್ತೆಗಳಲ್ಲೂ ಆಕ್ಸಿಡೆಂಟ್ ಆಗುತ್ತವೆ. ಚೆನ್ನಾಗಿರುವ ರಸ್ತೆಗಳಲ್ಲೂ ಆಕ್ಸಿಡೆಂಟ್ ಆಗುತ್ತಿವೆ. ಆದ್ದರಿಂದ ಯುವಕರು ಸ್ವಲ್ಪ ಎಚ್ಚರಿಕೆಯಿಂದ ಪ್ರಯಾಣ ಮಾಡಬೇಕು ಎಂದು ಸಲಹೆ ನೀಡಿದರು.

VC Canal 1

ಪ್ರಾಣ ಹಾನಿಯಾದಾಗ ಎಷ್ಟೇ ಪರಿಹಾರ ಕೊಟ್ಟರು ಸಹ ಆ ಕುಟುಂಬಕ್ಕೆ ನೆಮ್ಮದಿ ಸಿಗಲು ಸಾಧ್ಯವಿಲ್ಲ. ಯುವಕರೆಲ್ಲರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಾತಿನ ಭರದಲ್ಲಿ ಪೂಜಾ ಹೆಗ್ಡೆ ಯಡವಟ್ಟು- ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ

VC Canal Car

ವಿಸಿ ನಾಲೆಗೆ ತಡೆಗೋಡೆ ನಿರ್ಮಾಣ ಮಾಡದ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಎಸ್ಟಿಮೆಂಟ್ ಸಿದ್ದವಾಗಿದೆ. ಆ ಜಾಗದಲ್ಲಿ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ. ಗುತ್ತಿಗೆದಾರರು ತಡ ಮಾಡಿದ್ದಾರೆ. ಹಾಗಾಗಿ ತಕ್ಷಣ ಕೆಲಸ ಶುರು ಮಾಡುವಂತೆ ಹೇಳುತ್ತೇವೆ. ಉಳಿದೆಲ್ಲ ಕಡೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಈ ಹಿಂದೆ ಪಾಂಡವಪುರದ ಬಳಿ ಅಪಘಾತ ಆಗಿತ್ತು. ಅಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಎಲ್ಲೆಲ್ಲಿ ಮುಖ್ಯವಾಗಿ ತಡೆಗೋಡೆ ಆಗಬೇಕೊ ಅಲ್ಲೆಲ್ಲ ಮಾಡುವಂತೆ ಹೇಳಿದ್ದೇನೆ. ಈ ತಿಂಗಳೊಳಗೆ ಮಂಜೂರಾತಿ ನೀಡಲು ಡಿಸಿಗೆ ತಿಳಿಸಿದ್ದೇನೆ ಎಂದರು. ಇದನ್ನೂ ಓದಿ: ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರಪತಿ ಭವನದಲ್ಲಿ ಮದುವೆ – ಯಾರು ಈ ಪೂನಂ ಗುಪ್ತಾ?

Share This Article