ಮೈಕ್ರೋ ಫೈನಾನ್ಸ್ ಕಿರುಕುಳದ ಹಿಂದೆ ಕಾಣದ ಕೈಗಳು ಇರಬಹುದು – ಸಿ.ಟಿ.ರವಿ ಅನುಮಾನ

Public TV
1 Min Read
CT Ravi 2

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳದ ಹಿಂದೆ ಕಾಣದ ಕೈಗಳು ಇರಬಹುದು ಎಂದು ಬಿಜೆಪಿ ನಾಯಕ ಸಿ.ಟಿ ರವಿ ಅನುಮಾನ (CT Ravi) ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ನನ್ನ ನೇತೃತ್ವದಲ್ಲಿ ಸಚಿವರ ನಿಯೋಗ ಹೈಕಮಾಂಡ್ ಭೇಟಿ ಸುದ್ದಿ ಸುಳ್ಳು: ಪರಮೇಶ್ವರ್

ಮೈಕ್ರೋ ಫೈನಾನ್ಸ್ ಕಿರುಕುಳ ಕಡಿವಾಣಕ್ಕೆ ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರ ನಿಯಮ ತರಬೇಕು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜನರ ಸಮಸ್ಯೆ ಪರಿಹಾರ ಮಾಡುತ್ತಿದೆ. ಹೀಗೆ ಅನೇಕ ಸಂಸ್ಥೆಗಳು ಒಳ್ಳೆಯ ಕೆಲಸ ಮಾಡುತ್ತಿವೆ. ನಾವು ಮೊದಲು ಕಿರುಕುಳ ಕೊಡುವ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕು. ಕಡಿವಾಣ ಹಾಕಲು ರಾಜ್ಯದ ಕಾಯ್ದೆಯಲ್ಲಿ ಅವಕಾಶ ಇದೆ. ಆ ಕಾಯ್ದೆ ನಾವು ಬಳಸಿಕೊಳ್ಳೋಣ. ರಾಜ್ಯಪಾಲರು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದಾರೆ. ಅದನ್ನ ಬಳಕೆ ಮಾಡಿಕೊಳ್ಳೋಣ. ಬಳಕೆ ಆಗುವ ಮುನ್ನ ಶಸ್ತ್ರತ್ಯಾಗ ಮಾತು ಯಾಕೆ? ಎಂದು ತಿರುಗೇಟು ಕೊಟ್ಟಿದ್ದಾರೆ.

ಇದಕ್ಕೆ ಹಿಂದೆಯೂ ಕಾಯ್ದೆ ಇತ್ತು. ಆಗ ಈ ಕಿರುಕುಳ ಇರಲಿಲ್ಲ. ಈಗ ಹಾವಳಿ ಜಾಸ್ತಿ ಆಗಿರುವ ಹಿಂದೆ ಕಾಣದ ಕೈಗಳು ಇರಬಹುದು. ಅಧಿಕಾರಿಗಳ ರೇಟ್ ಫಿಕ್ಸ್ ಮಾಡೋದ್ರಲ್ಲಿ ಕಾಣದ ಕೈಗಳು ಇವೆ. ಬೆಂಗಳೂರಿನಲ್ಲಿ ಅಡಿಗೆ 100 ರೂ. ಪ್ಲ್ಯಾನ್ ಸ್ಯಾಕ್ಷನ್ ಮಾಡುವುದರ ಹಿಂದೆ ಕಾಣದ ಕೈಗಳು ಇವೆ. ಮೈಕ್ರೋ ಫೈನಾನ್ಸ್ ಹಿಂದೆಯೂ ಕಾಣದ ಕೈಗಳು ಇರಬಹುದು ಎಂದರು.ಇದನ್ನೂ ಓದಿ: ಕಿಯೋನಿಕ್ಸ್ ವೆಂಡರ್ಸ್‌ಗಳ ಬಾಕಿ ಮೊತ್ತ ಬಿಡುಗಡೆಯಾಗುತ್ತಿದೆ – ಶರತ್ ಬಚ್ಚೇಗೌಡ

Share This Article