ಬೆಂಗಳೂರು: ಬ್ರೇಕ್ ವೈಫಲ್ಯದಿಂದ ಟಿಪ್ಪರ್ ಲಾರಿ ಶೆಡ್‍ಗೆ ನುಗ್ಗಿ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿರುವ ಘಟನೆ ಕಮಲಾ ನಗರದ ವೀರಭದ್ರೇಶ್ವರ ಥಿಯೇಟರ್ ಬಳಿ ನಡೆದಿದೆ.
ಲಾರಿ ಮಾಲೀಕ ನಟರಾಜ್ ಮತ್ತು ಅವರ ಬಾಮೈದ ವಿನಯ್ ಮೃತ ದುರ್ದೈವಿಗಳು. ಇವರು ದೇವನಹಳ್ಳಿಯ ಕೋಡಿಮಂಜೇನಹಳ್ಳಿಯ ಮೂಲದವರಾಗಿದ್ದಾರೆ.
ಬುಧವಾರ ಮಧ್ಯರಾತ್ರಿ 11.30 ರ ಸಮಯಕ್ಕೆ ಬಸವೇಶ್ವರನಗರದ ಕಟ್ಟಡವೊಂದರ ನಿರ್ಮಾಣಕ್ಕೆ ಮರಳು ಸರಬರಾಜು ಮಾಡಲು ಲಾರಿ ಬಂದಿದ್ದು, ಬ್ರೇಕ್ ವೈಫಲ್ಯದಿಂದಾಗಿ ಲಾರಿ ಶೆಡ್‍ಗೆ ನುಗ್ಗಿದೆ. ಸಿಕ್ಕಿ ಹಾಕಿಕೊಂಡಿದ್ದ ಲಾರಿಯನ್ನು ಕ್ರೈನ್ ಮತ್ತು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.
ಘಟನೆ ಬಗ್ಗೆ ವಿಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.