ರೆಟ್ರೋ ಗೆಟಪ್‌ನಲ್ಲಿ ಅಭಿಮಾನಿಗಳ ಮುಂದೆ ಬಂದ ಶ್ರೀಲೀಲಾ

Public TV
1 Min Read
sreeleela

ನ್ನಡದ ಬೆಡಗಿ ಶ್ರೀಲೀಲಾ (Sreeleela) ಪರಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡು ಫ್ಯಾನ್ಸ್‌ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಹೊಸ ಸಿನಿಮಾದ ಅಪ್‌ಡೇಟ್ ಮೂಲಕ ನಟಿ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ಇಬ್ಬರೂ ಹಾಲು, ಸಕ್ಕರೆ ಇದ್ದಂಗೆ- ಹನು, ಧನು ಸ್ನೇಹಕ್ಕೆ ಐಶ್ವರ್ಯಾ ವಿಶ್

sreeleela 1 4

ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ (Parasakthi) ಸಿನಿಮಾದಲ್ಲಿ ರೆಟ್ರೋ ಗೆಟಪ್‌ನಲ್ಲಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಸೀರೆಯುಟ್ಟು ಜಡೆ ಹಾಕಿಕೊಂಡ ಹೊಸ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ. ಈ ಚಿತ್ರವನ್ನು ಸುಧಾ ಕೊಂಗರ ನಿರ್ದೇಶನ ಮಾಡಿದ್ದಾರೆ.

 

View this post on Instagram

 

A post shared by Sreeleela (@sreeleela14)

ಸದ್ಯ ಈ ಸಿನಿಮಾದ ಟೀಸರ್ ರಿವೀಲ್ ಆಗಿದ್ದು, ಕಾಲೇಜು ವಿದ್ಯಾರ್ಥಿಗಳ ಪಾಲಿಟಿಕ್ಸ್ ಕಥೆಯನ್ನು ಒಳಗೊಂಡಿದೆ. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್, ಶ್ರೀಲೀಲಾ, ರವಿ ಮೋಹನ್, ಅಥರ್ವ ಸೇರಿದಂತೆ ಅನೇಕರು ನಟಿಸಿದ್ದಾರೆ.

ಇನ್ನೂ ‘ಪುಷ್ಪ 2′ ಸಿನಿಮಾದಲ್ಲಿ ಸೊಂಟ ಬಳುಕಿಸಿದ ಮೇಲೆ ನಟಿಗೆ ಬೇಡಿಕೆ ಹೆಚ್ಚಾಗಿದೆ. ತೆಲುಗು, ತಮಿಳು, ಬಾಲಿವುಡ್‌ನಲ್ಲೂ ಶ್ರೀಲೀಲಾ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ನಿತಿನ್ ಜೊತೆಗಿನ `ರಾಬಿನ್‌ಹುಡ್’ ರಿಲೀಸ್‌ಗಾಗಿ ಎದುರು ನೋಡ್ತಿದ್ದಾರೆ.

Share This Article