ನಾವು ಪುಣ್ಯ ಮಾಡಿದ್ವಿ ಅದಕ್ಕೆ ಈ ಅವಕಾಶ ಸಿಕ್ಕಿದೆ – ಮಹಾ ಕುಂಭ ಮೇಳದಲ್ಲಿ ಅನುಶ್ರೀ ಮಾತು

Public TV
2 Min Read
Anushree

ಪ್ರಯಾಗ್‌ರಾಜ್‌: ಮಹಾ ಕುಂಭಮೇಳಕ್ಕೆ (Maha Kumbhmela) ತೆರಳಿರುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀಯವರು (Anchor Anushree) ತಮ್ಮ ದೈವಿಕ ಅನುಭವವನ್ನು `ಪಬ್ಲಿಕ್‌ ಟಿವಿ’ ಮುಂದೆ ಬಿಚ್ಚಿಟ್ಟಿದ್ದಾರೆ. ಪುಣ್ಯ ನದಿಯಲ್ಲಿ ಮುಳುಗಿ ಏಳುವಾಗ ತುಂಬಾ ಭಾವುಕ ಅನುಭವವನ್ನು ನಾನು ಅನುಭವಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಆ ದೈವಿಕ ಅನುಭವ ಕುಂಭ ಮೇಳದಲ್ಲಿ ಭಾಗಿಯಾದವರರಿಗೆ ಮಾತ್ರ ಸಿಗುತ್ತದೆ. ಒಂದು ಬಿಸಿ ವಸ್ತುವನ್ನು ಮುಟ್ಟಿದವರಿಗೆ ಹೇಗೆ ತಿಳಿಯುತ್ತದೆಯೋ ಈ ಅನುಭವ ಸಹ ಹಾಗೆಯೇ. ಆ ಅದ್ಭುತ ಅನುಭವವನ್ನು ಸುಧಾರಿಸಿಕೊಳ್ಳಲು ಸ್ವಲ್ಪ ಸಮಯಬೇಕು. ಹರಹರ ಮಹಾದೇವ ಎಂದು ತೆರಳುವಾಗ ಅಲ್ಲಿನ ದೀಪಾಲಂಕಾರಗಳಲ್ಲಿ ಶಿವನೇ ಆಶೀರ್ವಾದ ಮಾಡುವಂತೆ ಕಾಣುತ್ತದೆ. ನಾನಂತೂ ನೀರಿನಲ್ಲಿ ಮುಳುಗಿದಾಗೆಲ್ಲ ಕಣ್ಣೀರು ಹಾಕಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Anushree Raj B Shetty participated in the Kumbh Mela

144 ವರ್ಷಕ್ಕೆ ಒಮ್ಮೆ ಇದು ನಡೆಯೋದು, ಎಷ್ಟು ಜನರಿಗೆ ಈ ಅವಕಾಶ ಸಿಗುತ್ತೆ? ಎಲ್ಲಾ ಹೇಳ್ತಾರೆ ಇದು ಕಲಿಗಾಲ ಎಲ್ಲ ಪಾಪ ಮಾಡಿದವರು ಅಂತಾರೆ. ಆದರೆ ನನಗೆ ಅನ್ನಿಸಿದ್ದು, ಈ ಭಾಗ್ಯ ನಮಗೆ ಸಿಕ್ಕಿದೆ. ನಾವು ಪುಣ್ಯವಂತರು ಎಂದು ಹೇಳಿಕೊಂಡಿದ್ದಾರೆ.

ಇಲ್ಲಿ ಮಹಿಳೆಯರಿಗೆ ಸುರಕ್ಷತೆ ಇದೆ. ಇಂತಹ ವ್ಯವಸ್ಥೆ ಬಗ್ಗೆ ಹೆಮ್ಮೆ ಇದೆ. ಪೊಲೀಸ್‌ ಸಿಬ್ಬಂದಿ ಸಹ ಬಹಳ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ನಾವು ಐದು ದಿನಗಳ ಕಾಲ ಪ್ಲ್ಯಾನ್‌ ಮಾಡಿಕೊಂಡಿದ್ದೇವೆ. ಇನ್ನೂ ನಾವು ವಾರಣಾಸಿಗೆ ಹೋಗಬೇಕು. ಅಯೋಧ್ಯೆಯ ಬಾಲ ರಾಮನ ದರ್ಶನಕ್ಕೆ ಹೋಗಲು ಪ್ರಯತ್ನಿಸುತ್ತೇವೆ. ಇಂದು ಅಖಾಡಕ್ಕೆ ಹೋಗಿ ಸಾಧುಗಳ ಆಶೀರ್ವಾದ ಪಡೆಯಲು ತೆರಳುತ್ತಿದ್ದೇವೆ ಎಂದು ತಿಳಿಸಿದರು.

ಸಂಗಮದಲ್ಲಿ ಮಿಂದು.. ಕಣ್ಣುಗಳು ನೆಂದು ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು.. ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು. ಕೋಟಿ ಜನ ಸೇರೋ ಜಾಗ. ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ದ್ರೆ ಈ ದೈವಿಕ ಅನುಭವ ಸಿಗುತ್ತಿರಲಿಲ್ಲ ಎಂದು ಅನುಶ್ರೀ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕನ್ನಡಿಗರಿಗೆ ಅನುಶ್ರೀ ಕಿವಿ ಮಾತು
ಇದು ಹಾಲಿಡೇ ಟ್ರಿಪ್‌ ಅಲ್ಲ. ಬರುವವರು ತುಂಬಾ ಹಗುರ ಬ್ಯಾಗ್‌ ತಂದರೂ ಸಾಕು. ಇಲ್ಲಿ ತುಂಬಾ ನಡೆಯಬೇಕು, ಅದಕ್ಕಾಗಿ ಕಂಫರ್ಟ್‌ ಆಗಿರುವ ಶೂ ಬಳಸಬೇಕು.

ಅಂತಹ ಚಳಿ ಏನೂ ಇಲ್ಲ. ಒಂದು ಜಾಕೆಟ್‌ ತಂದರೂ ಸಾಕು, ಸೋಶಿಯಲ್‌ ಮೀಡಿಯಾ ನಂಬಿ ಏನನ್ನೂ ನಿರ್ಧರಿಸಬೇಡಿ. ಇಲ್ಲಿ ಎಲ್ಲಾ ವ್ಯವಸ್ಥೆ ಚೆನ್ನಾಗಿದೆ. ಆರಾಮಾಗಿ ಬಂದು ಬಂದು ಪವಿತ್ರ ಸ್ನಾನ ಮಾಡಬಹುದು.

ದೈವಿಕ ಅನುಭವದ ಬಗ್ಗೆ ಅನುಶ್ರೀ ಪೋಸ್ಟ್‌ : ಸಂಗಮದಲ್ಲಿ ಮಿಂದು… ಕಣ್ಣುಗಳು ನೆಂದು, ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು, ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು. ಕೋಟಿ ಜನ ಸೇರೋ ಜಾಗ, ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ, ಮೌನಿ ಅಮಾವಾಸ್ಯ, ಹರ ಹರ ಮಹದೇವ್! ಎಂದು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.

Share This Article