ಆಯಿಲ್‌ ಟ್ಯಾಂಕ್‌ ಸ್ಫೋಟ – ಇಬ್ಬರು ಕಾರ್ಮಿಕರ ಸಾವು

Public TV
0 Min Read
oil tank blast tumakuru

ತುಮಕೂರು: ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೇ ಆಯಿಲ್ ಟ್ಯಾಂಕ್ ವೆಲ್ಡಿಂಡ್ ಮಾಡಲು ಮೇಲೆ ಹತ್ತಿದ ಇಬ್ಬರು ಕಾರ್ಮಿಕರು ಟ್ಯಾಂಕ್ ಸ್ಫೋಟಗೊಂಡು ಸಾವನಪ್ಪಿದ ಘಟನೆ ತುಮಕೂರಿನ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

ಪರಿಮಳ ಅಗ್ರೋ ಫುಡ್ ಆ್ಯಂಡ್ ಫೀಡ್ಸ್ ಮಿಲ್‌ನಲ್ಲಿ ಘಟನೆ ಸಂಭವಿಸಿದೆ. ಬಿಹಾರ ಮೂಲದ ಚಂದನ್ ಹಾಗೂ ಸಂತೋಷ್ ಮೃತಪಟ್ಟಿದ್ದಾರೆ. ಧೀರಜ್ ಎನ್ನುವವರಿಗೆ ಗಾಯವಾಗಿದ್ದು, ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಮುಂಜಾಗ್ರತಾ ಕ್ರಮ ಕೈಗೊಳ್ಳದ ಮಾಲೀಕ ಖಾದರ್ ಭಾಷಾ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ಅಶೋಕ್, ಕಾರ್ಮಿಕ ಅಧಿಕಾರಿ ತೇಜಾವತಿ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಮಾಲೀಕರ ನಿರ್ಲಕ್ಷ್ಯ ಸಾಬೀತಾಗಿದೆ.

Share This Article