ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕು ಮಾಡಿಕೆರೆ ಹಾಲಿನ ಡೈರಿಯಲ್ಲಿ (Milk Dairy) ಸಿಬ್ಬಂದಿಯಿಂದಲೇ ಹಾಲಿಗೆ ನೀರು ಕಲಬೆರಕೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರಿ ಕಾರ್ಯದರ್ಶಿ ಹಾಗೂ ಸಿಬ್ಬಂದಿಯನ್ನ ವಜಾಗೊಳಿಸಲಾಗಿದೆ.
ಚಿಂತಾಮಣಿ ತಾಲೂಕು ಮಾಡಿಕೆರೆ ಹಾಲಿನ ಡೈರಿಯಲ್ಲಿ ಸಿಬ್ಬಂದಿಯಿಂದಲೇ ಹಾಲಿಗೆ ನೀರು ಕಲಬೆರಕೆ ಮಾಡುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ನಿಮ್ಮ `ಪಬ್ಲಿಕ್ ಟಿವಿ’ ವರದಿ ಪ್ರಸಾರ ಮಾಡಿ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಎಂಡಿ ಶ್ರೀನಿವಾಸಗೌಡ ತನಿಖೆಗೆ ಆದೇಶ ಮಾಡಿದ್ದರು. ಈಗ ತನಿಖೆಯ ವರದಿ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು. ಮಾಡಿಕೆರೆ ಹಾಲಿನ ಡೈರಿಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಹಾಲಿಗೆ ನೀರು ಬೆರಸಿ ಮಹಾವಂಚನೆ ಮಾಡಿರುವುದು ಸಾಬೀತಾಗಿದೆ. ಇದನ್ನೂ ಓದಿ: ಹಾಲಿಗೆ ನೀರು ಬೆರೆಸಿ ಅಕ್ರಮ – ಕೆಲಸದಿಂದ ಸಿಬ್ಬಂದಿ ವಜಾ ಮಾಡಿದ ಚಿಮುಲ್
ಉದ್ದೇಶಪೂರ್ವಕವಾಗಿಯೇ ಹಾಲಿಗೆ ನೀರು ಬೆರೆಸಿ ನೀರಿನ ಪ್ರಮಾಣದ ಬಿಲ್ ಲೂಟಿ ಮಾಡಲು ಬೇನಾಮಿ ಕಾರ್ಡುಗಳನ್ನ ಸೃಷ್ಟಿಸಿರೋದು ತನಿಖೆಯಲ್ಲಿ ಪತ್ತೆಯಾಗಿದೆ. 2004 ಹಾಗೂ 2005ರ ಆರ್ಥಿಕ ವರ್ಷದಲ್ಲಿ ಹಾಲಿಗೆ ಬರೋಬ್ಬರಿ ಒಟ್ಟು 10,187.9 ಲೀ. ನೀರು ಬೆರೆಸಿರುವುದು ಗೊತ್ತಾಗಿದೆ. ಹಾಲಿಗೆ ಬೆರೆಸಿರುವ ನೀರಿನ ಪ್ರಮಾಣದ ಹಾಲಿನ ಮೊತ್ತ 3,53,376 ರೂ. ಹಾಗೂ ಸರ್ಕಾರದ ಪ್ರೋತ್ಸಾಹ ಧನ 50,939 ರೂ. ಸೇರಿ ಒಟ್ಟು 4,04,675 ರೂ.ಗಳನ್ನ ಕಾರ್ಯದರ್ಶಿ ಸಿಬ್ಬಂದಿ ದುರಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಮಾಡಿಕೆರೆ ಹಾಲಿನ ಡೈರಿಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವಜಾ ಮಾಡಲಾಗಿದೆ. ಇದನ್ನೂ ಓದಿ: ಡೈರಿ ಸಿಬ್ಬಂದಿಯಿಂದಲೇ ಹಾಲಿಗೆ ನೀರು ಬೆರಸಿ ವಂಚನೆ
ಮುಂದುವರೆದು ಹಾಲಿನ ಡೈರಿಯ ವಿಸ್ತರಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನಾರಾಯಣಸ್ವಾಮಿಯನ್ನ ಸಹ ಸೇವೆಯಿಂದ ವಹಾ ಮಾಡಿ ವಿಚಾರಣೆಗೆ ಕಾಯ್ದಿರಿಸಲಾಗಿದೆ. ಅವ್ಯವಹಾರದ ಬಗ್ಗೆ ಗಮನಹರಿಸಿದೇ ಕರ್ತವ್ಯ ನಿರ್ಲಕ್ಷ್ಯ ತೋರಿದ ಕಾರಣ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಎಂಡಿ ಶ್ರೀನಿವಾಸಗೌಡ ವಿಸ್ತರಣಾಧಿಕಾರಿ ನಾರಾಯಣಸ್ವಾಮಿಯನ್ನ ಸೇವೆಯಿಂದ ವಜಾ ಮಾಡಿ ಆದೇಶಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ-ಆಂಧ್ರ ಬಸ್‌ಗಳ ಓವರ್‌ಟೆಕ್ ಪೈಪೋಟಿ – 8ರ ಬಾಲಕಿ ಸಮೇತ ಸೋದರ ಮಾವ ಸಾವು
ತನಿಖೆ ವೇಳೆ ಮಾಡಿಕೆರೆ ಸಂಘದಲ್ಲಿನ ಅಕ್ರಮ ಅವ್ಯವಹಾರಗಳು ಬಟಾಬಯಲು. ಈ ಕೆಳಗಿನಂತಿವೆ ಪ್ರಮುಖ ಅಂಶಗಳು…
1. ಸ್ಥಳೀಯ ಹಾಲು ಮಾರಾಟದ ಬಿಲ್ಲು ಹಾಕದಿರುವುದು.
2. ತೂಕದ ಯಂತ್ರಗಳಲ್ಲೂ ವ್ಯತ್ಯಾಸ ಕಂಡುಬಂದಿದೆ.
3. ಸ್ಥಳೀಯ ಹಾಲು ಮಾರಾಟದ ಬಿಲ್ಲಿನ ಹಣವನ್ನ ಸಂಘದ ಬ್ಯಾಂಕ್ ಉಳಿತಾಯ ಖಾತೆಗೆ ಜಮೆ ಮಾಡಿಲ್ಲ.
4. ತನಿಖೆ ವೇಳೆ ಪರಿಶೀಲನೆಗೆ ಬಟಾವಡೆ ಲಿಸ್ಟ್ ನೀಡಿರುವುದಿಲ್ಲ.
5. ಸರ್ಕಾರದ ಫ್ರೋತ್ಸಾಹಧನದ ಕ್ಷೀರಸಿರಿ ಪೋರ್ಟಲ್‌ನಲ್ಲಿ ಕ್ಲೈಮ್ ಮಾಡಿದ ಮಾಹಿತಿಯನ್ನ ಪರಿಶೀಲನೆಗೆ ನೀಡಿರುವುದಿಲ್ಲ.
6. ಒಕ್ಕೂಟದ ಎಂಐಎಸ್ ವರದಿಯಲ್ಲಿ ಹಾಲಿನ ಗುಣಮಟ್ಟ ಎಸ್‌ಎನ್‌ಎಫ್ 8.30 ಆಗಿದ್ದು…ಸಂಘದ ಡೇರಿ ರಿಜಿಸ್ಟಾರ್ ನಲ್ಲಿ ದಾಖಲಿಸಿಲ್ಲ.
7. ಬಟವಾಡೆಯ ಪ್ರತಿಗಳು ಪರಿಶೀಲನೆಗೆ ನೀಡಿರುವುದಿಲ್ಲ.