BBK 11: ವೈಲ್ಡ್‌ ಆಟಕ್ಕೆ ಬಿತ್ತು ಬ್ರೇಕ್-‌ ದೊಡ್ಮನೆಯಿಂದ ರಜತ್‌ ಔಟ್‌

Public TV
1 Min Read
rajath kishen 1

‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ರಜತ್ ಅವರು ಮನೆಯಲ್ಲಿ ವೈಲ್ಡ್ ಆಗಿ ಆಟ ಆಡಿದ್ದರು. ಈಗ ಫಿನಾಲೆಯಲ್ಲಿ ರಜತ್ ಮುಗ್ಗರಿಸಿದ್ದಾರೆ. ಟಾಪ್ 3 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ರಜತ್ ಅವರ ಆಟಕ್ಕೆ ಬ್ರೇಕ್ ಬಿದ್ದಿದೆ. ಇದನ್ನೂ ಓದಿ:BBK 11: ಕೈಹಿಡಿಯದ ಅದೃಷ್ಟ- ದೊಡ್ಮನೆಯಿಂದ ಮೋಕ್ಷಿತಾ ಔಟ್

rajath 1 2

ಸುದೀಪ್ ಈಗಾಗಲೇ ಹೇಳಿರುವಂತೆ ರಜತ್ ಪಕ್ಕಾ ಬಿಗ್ ಬಾಸ್ ಆಟಗಾರ. ಈ ಆಟವನ್ನು ಹೇಗೆ ಆಡಬೇಕು ಎಂಬುದು ಅವರಿಗೆ ಗೊತ್ತು. ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿಕೊಂಡೇ ಬಿಗ್ ಬಾಸ್ ಮನೆಗೆ ಅವರು ಕಾಲಿಟ್ಟಿದ್ದರು. ದೊಡ್ಮನೆಯಲ್ಲಿ ಯಾರೊಂದಿಗೂ ಸಹ ಅವರು ಅಟ್ಯಾಚ್‌ಮೆಂಟ್ ಬೆಳೆಸಿಕೊಂಡಿಲ್ಲ. ರಜತ್ ಮೊದಲಿನಿಂದಲೂ ಹೇಳುತ್ತಿರುವುದು ಒಂದೇ ಮಾತು, ನಾನು ನನಗಾಗಿ ಆಡುತ್ತೇನೆ, ನಾನು ಗೆಲ್ಲಲು ಮಾತ್ರ ಆಡುತ್ತೇನೆ, ಬೇರೆಯರನ್ನು ಗೆಲ್ಲಿಸಲು ಅಲ್ಲ ಎಂದು. ಅದಕ್ಕೆ ತಕ್ಕಂತೆ ಅವರು ಆಡುತ್ತಾ ಬಂದಿದ್ದರು.

rajath kishan

ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಎಂಟರ್ಟೈನ್‌ಮೆಂಟ್ ಅನ್ನು ಸಹ ರಜತ್ ನೀಡುತ್ತಾ ಬಂದಿದ್ದರು. ಆಗಾಗ್ಗೆ ಸಹ ಸ್ಪರ್ಧಿಗಳ ಕಾಲೆಳೆಯುತ್ತಿರುತ್ತಾರೆ. ಸಣ್ಣ-ಪುಟ್ಟ ಡೈಲಾಗ್‌ಗಳನ್ನು ಹೊಡೆದುಕೊಂಡು ತಮಾಷೆ ಮಾಡುತ್ತಿರುತ್ತಾರೆ. ಒಟ್ಟಾರೆಯಾಗಿ ಸಾಧಾರಣ ಮಟ್ಟದ ಎಂಟರ್ಟೈನ್‌ಮೆಂಟ್ ಸಹ ಕೊಡುತ್ತಾರೆ. ಇದು ಅವರ ಗೆಲುವಿಗೆ ಕಾರಣ ಆಗಬಹುದು ಎಂದು ಫ್ಯಾನ್ಸ್ ಅಂದಾಜಿಸಿದ್ದರು. ಆದರೀಗ ಎಲ್ಲವೂ ಉಲ್ಟಾ ಆಗಿದೆ. ಬಿಗ್ ಮನೆಯಿಂದ ಅವರು ಔಟ್ ಆಗಿದ್ದಾರೆ.

Share This Article