ತುಮಕೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ: ಪರಮೇಶ್ವರ್

Public TV
2 Min Read
G PARAMESHWAR

ತುಮಕೂರು: ತುಮಕೂರಲ್ಲಿ (Tumakuru) 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ (G Parameshwar)  ಹೇಳಿದ್ದಾರೆ.

ತುಮಕೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ತುಮಕೂರಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ವಸಂತನರಸಾಪುರದಲ್ಲಿ 3 ಸಾವಿರ ಎಕರೆ ಭೂಮಿ ನೋಡಿದ್ದೇವೆ. ಸೀಬಿ ದೇವಸ್ಥಾನದ ಬಳಿ 4-5 ಸಾವಿರ ಎಕರೆ ಭೂಮಿ ಗುರುತಿಸಿದ ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ. ತುಮಕೂರು ನಗರದ 2 ಕಡೆ ವಧಾಗಾರ ಮಾರುಕಟ್ಟೆ ನಿರ್ಮಾಣ ಆಗಲಿದೆ. ಅಮಾನಿಕೆರೆಗೆ ಗ್ಲಾಸ್ ಬ್ರಿಡ್ಜ್ ಮಾಡಲು ಉದ್ದೇಶಿಸಲಾಗಿದೆ. ಅಲ್ಲದೆ ಅಂಬೇಡ್ಕರ್ ಪುತ್ಥಳಿ ಟೌನ್ ಹಾಲ್‌ನಲ್ಲಿ ಸರ್ಕಲ್ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: 76ನೇ ಗಣರಾಜ್ಯೋತ್ಸವ – ಕರ್ತವ್ಯ ಪಥದಲ್ಲಿ ಆಕರ್ಷಕ ಪಥಸಂಚಲನ, ಸೇನಾ ಶಕ್ತಿ ಪ್ರದರ್ಶನ

Parameshwara

ಇನ್ನೂ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ 2.5 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದೆ. ಹಂತಹಂತವಾಗಿ ಅದನ್ನು ಭರ್ತಿ ಮಾಡುತ್ತೇವೆ ಎಂದರು. ಇದನ್ನೂ ಓದಿ: ಒಂದು ತಿಂಗಳ ರೆಸ್ಟ್ ಬಳಿಕ ಸಂಪೂರ್ಣ ಚಿತ್ರೀಕರಣದಲ್ಲಿ ಭಾಗಿ: ಶಿವಣ್ಣ

ಅನಧಿಕೃತ ಮೈಕ್ರೋ ಫೈನಾನ್ಸ್ ಕಂಪನಿ ಪತ್ತೆಗೆ ಆದೇಶ:
ಇದೇ ವೇಳೆ ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮೈಕ್ರೋ ಫೈನಾನ್ಸ್ ಬಗ್ಗೆ ನಿನ್ನೆ ಸರ್ಕಾರ ಸಭೆ ನಡೆಸಿದೆ. ಇರೋ ಕಾನೂನು ಭದ್ರ ಮಾಡುವುದು ಹಾಗೂ ಹೊಸ ಕಾನೂನು ಸೇರಿಸುವ ಬಗ್ಗೆ ಚಿಂತನೆ ನಡೆದಿದೆ. ಕಿರುಕುಳ ಕೊಡದಂತೆ ನಿರ್ದೇಶನ ನೀಡಲಾಗಿದೆ. ಒಂದು ವಾರದಲ್ಲಿ ಹೊಸ ಕಾನೂನು ವರದಿಯನ್ನು ರಾಜ್ಯಪಾಲರಿಗೆ ನೀಡಲಾಗುವುದು. ಪೊಲೀಸರಿಗೆ ಸುಮೋಟೋ ಕೇಸ್ ಹಾಕುವ ಅಧಿಕಾರ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರಧಾನಿ ಅವರಿಗೆ ಪತ್ರ ಬರೆಯಲಿದ್ದಾರೆ. ಅನಧಿಕೃತ ಮೈಕ್ರೋ ಫೈನಾನ್ಸ್ ಕಂಪನಿಗಳ ಪತ್ತೆ ಹಚ್ಚಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ದಾವಣಗೆರೆ | ಮೈಕ್ರೋ ಫೈನಾನ್ಸ್‌ನಿಂದ ಮಹಿಳೆಗೆ ಕಿರುಕುಳ

ತುಮುಲ್ ಅಧ್ಯಕ್ಷ ಚುನಾವಣೆ ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಅದರ ಬಗ್ಗೆ ನಾನು ಮಾತಡಲ್ಲ. ನಾಮಿನೇಷನ್ ಮಾಡಿ ಕಾನೂನಿನಲ್ಲಿ ಅವಕಾಶ ಇದೆ ಹಾಗಾಗಿ ಮಾಡಿದ್ದೇವೆ. ತುಘಲಕ್ ದರ್ಬಾರ್ ಅನ್ನೋದು ನನಗೆ ಗೊತ್ತಿಲ್ಲ. ಅವರು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ನಿಜವಾದ ಸ್ವಾತಂತ್ರ‍್ಯ ಹೋರಾಟಗಾರರನ್ನು ಮೂಲೆಗೆ ತಳ್ಳಿದ್ದು ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

ನಂತರ ಮಾಧುಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿ, ಹೇಗೆ ಅಂತ ಹೇಳಿ ಅವರೇ ಎಕ್ಸಪ್ಲೆನ್ ಮಾಡಲಿ. ನಾಮಿನೇಷನ್ ಮಾಡಲು ಅವಕಾಶ ಇದೆಯಲ್ವಾ ಅದಕ್ಕೆ ಮಾಡಲಾಗಿದೆ. ಅವರ ಪ್ರಕಾರ ಅವರಿಗೆ ತಿಳಿದ್ದಿದ್ದು ಹೇಳಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಆಸ್ಪತ್ರೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್‌ ಡಿಸ್ಚಾರ್ಜ್‌ – ಸಚಿವೆ ಭಾವುಕ

Share This Article