– ಭದ್ರಾ, ಮೇಕೆದಾಟು ಅನುಮತಿಗಾಗಿ ಹಿರಿಯ ನಾಯಕರಿಗೆ ಮನವಿ ಮಾಡಿದ್ದೇವೆ: ಡಿಸಿಎಂ
ಬೆಂಗಳೂರು: ಕಾಂಗ್ರೆಸ್ ನಮ್ಮ ಕುಟುಂಬ, ಯಾವುದೇ ದಾಯಾದಿ ಕಲಹ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರ ಪುಣ್ಯ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಧ್ವಜಾರೋಹಣ ಮಾಡಿದ್ದಾರೆ. ಇಂದು ನಮ್ಮ ಸಂವಿಧಾನ ಅನುಷ್ಠಾನ ತಂದ ಪವಿತ್ರ ದಿನ. ಒಕ್ಕೂಟ ವ್ಯವಸ್ಥೆ ಜಾರಿಯಾದ ದಿನ. ಎಲ್ಲರ ಧರ್ಮ, ಜಾತಿ ಒಂದೇ ಎಂದು ಸಾರಿದ ಪವಿತ್ರವಾದ ದಿನವಿದು. ಸಂವಿಧಾನ ನಮ್ಮ ಬದಕು, ಇದನ್ನು ನೆಹರು ನಾಯಕತ್ವದಲ್ಲಿ ಅಂಬೇಡ್ಕರ್ ಅವರಿಗೆ ಜವಾಬ್ದಾರಿ ಕೊಟ್ಟರು. ಸಂವಿಧಾನ ನಮಗೆ ನಾವು ಅರ್ಪಿಸಿದ ದಿನ. ಸಂವಿಧಾನ ಇಲ್ಲದಿದ್ದರೆ ನಮ್ಮ ಪ್ರಜಾಪ್ರಭುತ್ವ ಆತ್ಮ ಇರುತ್ತಿರಲಿಲ್ಲ. ಈ ಸಂವಿಧಾನವನ್ನು ಉಳಿಸಿಕೊಂಡು ಹೋಗಬೇಕಿದೆ ಎಂದು ತಿಳಿಸಿದರು.ಇದನ್ನೂ ಓದಿ: ರಾಜ್ಯಗಳ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ – ಥಾವರ್ ಚಂದ್ ಗೆಹ್ಲೋಟ್
ಈ ಪೂರ್ತಿ ವರ್ಷ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಸಮಾವೇಶ ಆಗಬೇಕು. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಆಗಬೇಕು. ಈ ಸಮಾವೇಶ ಸಂಬಂಧಿಸಿದಂತೆ ಸಂವಿಧಾನ ರಕ್ಷಣೆಗೆ ವ್ಯಾಪಕವಾಗಿ ಚರ್ಚೆ ಆಗಬೇಕು. ಸರ್ಕಾರಿ ಶಾಲಾ ಕಾಲೇಜಿನಲ್ಲಿ ಚರ್ಚೆಯಾಗಬೇಕು. 224 ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಸಲು ತಯಾರಿ ನಡೆಸುತ್ತಿದ್ದೇವೆ. ಸರ್ಕಾರದಲ್ಲಿ ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸುತ್ತೇವೆ ಎಂದು ಹೇಳಿದರು.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ @Kharge ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಾನು ಜೊತೆಗಿದ್ದೆವು. ಸಂವಿಧಾನ ಜಾರಿಯಾದ ಈ ಐತಿಹಾಸಿಕ ದಿನದಂದು ಅದರ ಮೌಲ್ಯಗಳನ್ನು ಎತ್ತಿಹಿಡಿಯುವ ಪಣ ತೊಡೋಣ. #RepublicDay pic.twitter.com/8uZTE9vGyT
— DK Shivakumar (@DKShivakumar) January 26, 2025
ಇದೇ ವೇಳೆ ಬೆಂಗಳೂರು ಅಭಿವೃದ್ಧಿಗೆ ಕೇಂದ್ರಕ್ಕೆ ಪತ್ರ ಬರೆದ ವಿಚಾರವಾಗಿ ಮಾತನಾಡಿ, ಬೆಂಗಳೂರು ಮುಖಾಂತರ ಭಾರತ ನೋಡಲಾಗುತ್ತಿದೆ. ಇದೀಗ ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿದೆ. ಜೊತೆಗೆ ಅತೀ ಹೆಚ್ಚು ತೆರಿಗೆ ಸಂಗ್ರಹಣೆ ಆಗುತ್ತಿದೆ. ಹೀಗಾಗಿ ಅಭಿವೃದ್ಧಿಗೆ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದೇವೆ. ಬೇರೆ ದೇಶದ ದೂತವಾಸ ಕಚೇರಿಗಳು ಇಲ್ಲಿವೆ. ಯಾವುದೇ ಗಡವು ನಾವು ಕೊಡುವುದಿಲ್ಲ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿದ್ದೇವೆ. ಅವರು ಇಲ್ಲಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಜೋಶಿ, ಶೆಟ್ಟರ್ ಸೇರಿದಂತೆ ಅನೇಕ ಹಿರಿಯ ನಾಯಕರಿದ್ದಾರೆ ಅವರಿಗೆ ಭದ್ರಾ, ಮೇಕೆದಾಟುವಿಗೆ ಅನುಮತಿ ಕೊಡಿಸಬೇಕಾಗಿ ಮನವಿ ಮಾಡಿದ್ದೇವೆ ಎಂದರು.
ಇದು ಖರ್ಗೆ ಅವರೇ ಕಟ್ಟಿಸಿದ ಕಚೇರಿ. ನಾನು ಹೊರಗಡೆ ಮುಖವಾಡ ಬದಲಾವಣೆ ಮಾಡಿದ್ದೇನೆ. ಫ್ಯಾಮಿಲಿ ವಿಷಯಗಳನ್ನು ಬಹಿರಂಗವಾಗಿ ಹೇಳಲು ಆಗಲ್ಲ. ಆದರೆ ಕಾಂಗ್ರೆಸ್ ಇಸ್ ಅವರ್ ಫ್ಯಾಮಿಲಿ. ಯಾವುದೇ ದಾಯಾದಿ ಕಲಹ ಇಲ್ಲ. ಮೊನ್ನೆ ಸಿಎಂ ಕೂಡ ಚಿತ್ರದುರ್ಗದಲ್ಲಿ ಎಲ್ಲ ಪರದೆ ಬಿಚ್ಚಿಟ್ಟಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ರಾಜ್ಯಗಳ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ – ಥಾವರ್ ಚಂದ್ ಗೆಹ್ಲೋಟ್