ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಇಂದು ತಾಯ್ನಾಡಿಗೆ ಶಿವಣ್ಣ ವಾಪಸ್

Public TV
1 Min Read
Shivarajkumar 1

ಬೆಂಗಳೂರು: ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಇಂದು (ಜ 26) ಶಿವಣ್ಣ (Shivanna) ತಾಯ್ನಾಡಿಗೆ ವಾಪಸ್ ಆಗುತ್ತಿದ್ದಾರೆ.

ಇತ್ತೀಚಿಗಷ್ಟೇ ಶಿವಣ್ಣ ತಾಯ್ನಾಡಿಗೆ ಬರುವ ಸಿಹಿ ಸುದ್ದಿಯನ್ನು ಸ್ವತಃ ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಇಂದು ಬೆಳಿಗ್ಗೆ 8:50ಕ್ಕೆ ಬೆಂಗಳೂರಿನ ಏರ್ಪೋಟ್‌ನಲ್ಲಿ ಲ್ಯಾಂಡ್ ಆಗಲಿದ್ದು, ವಿಮಾನ ನಿಲ್ದಾಣದ ಪ್ರಕ್ರಿಯೆಗಳನ್ನು ಮುಗಿಸಿ 9.30ರ ಬಳಿಕ ಹೊರಬರುವ ಸಾಧ್ಯತೆಯಿದೆ. ಅಮೆರಿಕದಿಂದ ದುಬೈಗೆ ಬಂದಿಳಿದು, ಅಲ್ಲಿಂದ ಕನೆಕ್ಟೆಡ್ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಕೆಂಪುಕೋಟೆ ಸಜ್ಜು – 10,000 ಗಣ್ಯರಿಗೆ ಆಹ್ವಾನ, ಮಿಲಿಟರಿ ಶಕ್ತಿ ಅನಾವರಣ

ಮೂತ್ರಕೋಶದ ಕ್ಯಾನ್ಸರ್ ಸಂಬಂಧ ಆಪರೇಷನ್ ಮಾಡಿಸಿಕೊಳ್ಳಲು ನಟ ಶಿವರಾಜಕುಮಾರ್ ಡಿ.18 ರಂದು ಅಮೆರಿಕಕ್ಕೆ ತೆರಳಿದ್ದರು. ಬಳಿಕ ಡಿ.34 ರಂದು ಆಪರೇಷನ್‌ಗೆ ಒಳಗಾಗಿದ್ದು, ಇದೀಗ ಸಂಪೂರ್ಣ ಗುಣಮುಖರಾಗಿ ತಾಯ್ನಾಡಿಗೆ ಮರಳುತ್ತಿದ್ದಾರೆ.

ಇದೀಗ ಶಿವಣ್ಣರನ್ನು ಅದ್ಧೂರಿಯಾಗಿ ಸ್ವಾಗತಿಸಲು ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಒಂದು ತಿಂಗಳಿಗೂ ಅಧಿಕ ಕಾಲ ಅಮೆರಿಕಾದಲ್ಲಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡ ಶಿವರಾಜ್‌ಕುಮಾರ್ ಆಗಾಗ ಅಭಿಮಾನಿಗಳಿಗೆ ಅಪ್‌ಡೇಟ್ ಕೊಟ್ಟಿದ್ದರು.

ಏರ್‌ಪೋರ್ಟ್ ಬಳಿಯ ಟೋಲ್‌ನಿಂದ ಹಿಡಿದು ನಾಗವಾರದ ಮನೆಯವರೆಗೂ ಶಿವಣ್ಣರನ್ನ ಬರಮಾಡಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ. ಶಿವಣ್ಣ ಅವರ ನಿವಾಸದ ಬಳಿ ಅಭಿಮಾನಿಗಳು ಬ್ಯಾನರ್, ಕಟೌಟ್ ಹಾಕಿ ಸ್ವಾಗತ ಮಾಡೋದಕ್ಕೂ ತಯಾರಿ ಮಾಡಿಕೊಂಡಿದ್ದಾರೆ. ಇನ್ನೂ ಸೋಮವಾರ ಶಿವಣ್ಣನ ಮನೆಯಲ್ಲಿ ಹೊಸ ವರ್ಷ ಹಾಗೂ ಸಂಕ್ರಾಂತಿ ಸಂಭ್ರಮ ಒಟ್ಟೊಟ್ಟಿಗೆ ನಡೆಯಲಿದೆ.ಇದನ್ನೂ ಓದಿ: ದಿನ ಭವಿಷ್ಯ 26-01-2025

Share This Article