ಮೈಕ್ರೋ ಫೈನಾನ್ಸ್ ಟಾರ್ಚರ್ – ದೂರು ನೀಡಲು ಬಂದಿದ್ದ ಮಹಿಳೆಯರಿಗೆ ಪೊಲೀಸರಿಂದ ದಂಡ ಆರೋಪ

Public TV
1 Min Read
Micro Finance Torture In Haveri Ranebennur

ಹಾವೆರಿ: ಮೈಕ್ರೋ ಫೈನಾನ್ಸ್ (Microfinance) ಸಿಬ್ಬಂದಿ ಕಿರುಕುಳಕ್ಕೆ ನೊಂದು ದೂರು ನೀಡಲು ಹೋಗಿದ್ದ ರಾಣೆಬೆನ್ನೂರಿನ (Ranebennur) ಗುಡ್ಡದ ಬೇವಿನಹಳ್ಳಿಯ ಇಬ್ಬರು ಮಹಿಳೆಯರಿಗೆ ಪೊಲೀಸರು ಗದರಿಸಿ ದಂಡ ವಸೂಲಿ ಮಾಡಿದ ಆರೋಪ ಕೇಳಿ ಬಂದಿದೆ.

ನಮ್ಮ ದೂರಿಗೆ ಸ್ಪಂದಿಸದ ಹಲಗೇರಿ ಪೊಲೀಸರು, ಮೈಕ್ರೋ ಫೈನಾನ್ಸ್ ಸಿಬ್ಬಂದಿ ದೂರಿಗೆ ಸ್ಪಂದಿಸಿದ್ದಾರೆ. ನಮ್ಮನ್ನು ಠಾಣೆಗೆ ಕರೆಸಿ ಗದರಿಸಿ ದಂಡ ಕಟ್ಟಿಸಿದ್ರು ಎಂದು ಗ್ರಾಮದ ನಾಗಮ್ಮ ಹಾಗೂ ರಹೀಮಾ ಆರೋಪಿಸಿದ್ದಾರೆ.

ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಿಮ್ಮ ಮಗಳು ಸಾಲ ಕಟ್ಟೋದು ಬಿಟ್ಟು, ಯಾರ ಜೊತೆ ಓಡಿ ಹೋಗಿದ್ದಾಳೆ ಎಂದು ಅವಾಚ್ಯವಾಗಿ ನಿಂದನೆ ಮಾಡಿದ್ದರು. ಹೀಗಾಗಿ ಮೈಕ್ರೋ ಪೈನಾನ್ಸ್ ಸಿಬ್ಬಂದಿಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯನ್ನು ಮಹಿಳೆಯರು ತಳ್ಳಾಡಿದ್ದರು ಎನ್ನಲಾಗಿದೆ.

ಮಹಿಳೆಯರ ವಿರುದ್ಧ ಮೈಕ್ರೋ ಫೈನಾನ್ಸ್ ಸಿಬ್ಬಂದಿ ದೂರು ದಾಖಲಿಸಿದ್ದರು. ಈ ಹಿನ್ನಲೆ ಪೊಲೀಸರು ಮಹಿಳೆಯರನ್ನು ಠಾಣೆಗೆ ಕರೆಸಿ 1,000 ರೂ. ದಂಡ ವಸೂಲಿ ಮಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

Share This Article