2028ರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆ: ಸಿಎಂ

Public TV
3 Min Read
Siddaramaiah VV Sagar Dam Chitradurga 2

– ವಿವಿ ಸಾಗರ ಜಲಾಶಯಕ್ಕೆ ಸಿಎಂ, ಡಿಸಿಎಂ ಬಾಗಿನ ಅರ್ಪಣೆ

ಚಿತ್ರದುರ್ಗ: ನಾವು ಐದು ವರ್ಷ ಅಧಿಕಾರ ಮಾಡುತ್ತೇವೆ. 2028ರಲ್ಲೂ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಸಾಗರ ಜಲಾಶಯ ಭರ್ತಿಯಾದ ಹಿನ್ನೆಲೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಬಿಜೆಪಿಯಲ್ಲಿನ ಶ್ರೀ ರಾಮುಲು ಹಾಗೂ ಜನಾರ್ದನ ರೆಡ್ಡಿ ಮಧ್ಯೆ ಶುರುವಾಗಿರುವ ಭಿನ್ನಮತಕ್ಕೆ ಪ್ರತಿಕ್ರಿಯಿಸಿದರು. ಬಿಜೆಪಿಯಲ್ಲಿ ಹೆಚ್ಚು ಗುಂಪುಗಳಿವೆ. ನಮ್ಮಲ್ಲಿ ಯಾವುದೇ ಗುಂಪುಗಳಿಲ್ಲ. ನಾನು, ಡಿಕೆಶಿ ಇಲ್ಲಿಯೇ ಇದ್ದೇವೆ ಎಂದು ಹೇಳಿ ಪಕ್ಕದಲ್ಲಿದ್ದ ಡಿಕೆ ಶಿವಕುಮಾರ್ ಅವರನ್ನು ತೋರಿಸಿ ಒಗ್ಗಟ್ಟು ಪ್ರದರ್ಶಿಸಿದರು. ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಸಿಎಂ ತಪ್ಪು ಮಾಡಿಲ್ಲ, ಹೆಸರು ಹಾಳು ಮಾಡಲು ಕೇಂದ್ರ ಬಿಜೆಪಿ ಷಡ್ಯಂತ್ರ: ದಿನೇಶ್ ಗುಂಡೂರಾವ್

Siddaramaiah VV Sagar Dam Chitradurga 1

ಇನ್ನು ನಮ್ಮ ಪಾರ್ಟಿಯಲ್ಲಿ ಯಾವುದೇ ಗ್ರೂಪಿಸಂ ಇಲ್ಲ. ಬಿಜೆಪಿ ಪಾರ್ಟಿಯಲ್ಲಿ ಕಚ್ಚಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಒಗ್ಗಟ್ಟಾಗಿದೆ. ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಆದ್ದರಿಂದ ನಾವು ಐದು ವರ್ಷ ಅಧಿಕಾರ ಮಾಡುತ್ತೇವೆ. 2028ಕ್ಕೂ ಮತ್ತೆ ಅಧಿಕಾರಕ್ಕೆ ನಾವೇ ಬರುತ್ತೇವೆ ಎಂದರು. ಇದನ್ನೂ ಓದಿ: ಐಫೋನ್, ಆ್ಯಂಡ್ರಾಯ್ಡ್ ಫೋನಲ್ಲಿ ಭಿನ್ನ ದರ – ಓಲಾ, ಊಬರ್‌ಗೆ ನೋಟಿಸ್

ನೀರಾವರಿಗೆ ನಮ್ಮ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ. 1,274 ಕೋಟಿ ರೂ. ವೆಚ್ಚದಲ್ಲಿ ಮತ್ತೊಂದು ಯೋಜನೆಯನ್ನು ಸರ್ಕಾರ ಸಿದ್ಧಪಡಿಸಿದೆ. ಇದು ಜಾರಿಯಾದರೆ ಈ ಭಾಗದ ಕಟ್ಟ ಕಡೆಯ ಜಮೀನಿಗೂ ನೀರು ಒದಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಬರೋಬ್ಬರಿ 10 ಕೋಟಿ ಭಕ್ತರಿಂದ ಪುಣ್ಯಸ್ನಾನ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವುದಾಗಿ ಕಾರಜೋಳ ಅವರು ಬರೀ ಬಾಯಿ ಮಾತಲ್ಲಿ ಹೇಳಿ ಬಳಿಕ ವಂಚಿಸಿದರು. ಈ ಯೋಜನೆಗೆ 5,300 ಕೋಟಿ ರೂ. ಕೊಡುವುದಾಗಿ ಕೇಂದ್ರ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ್ದರು. ಆದರೆ ನಯಾಪೈಸೆ ಬಿಡುಗಡೆಗೊಳಿಸದೆ ಈ ಭಾಗದ ಜನಸಮುದಾಯಕ್ಕೆ ಗೋಂವಿಂದ ಕಾರಜೋಳ ಮತ್ತು ಕೇಂದ್ರ ಸರ್ಕಾರ ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಯುಪಿ ಕಾಲುವೆಯೊಂದರಲ್ಲಿ ವ್ಯಕ್ತಿಯ ಶವ ಪತ್ತೆ – ಆತ್ಮಹತ್ಯೆಗೆ ಒಳ್ಳೆಯ ಜಾಗ ಯಾವ್ದು ಅಂತ ಸರ್ಚ್‌ ಮಾಡಿದ್ದ ಭೂಪ!

Siddaramaiah VV Sagar Dam Chitradurga

ಇನ್ನಾದರೂ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆ ಚರ್ಚಿಸಿ ಕೊಟ್ಟ ಮಾತಿನಂತೆ 5,300 ಕೋಟಿ ರೂ. ಬಿಡುಗಡೆ ಮಾಡಿಸಿ. ಬಿಜೆಪಿ ಕೊಟ್ಟ ಮಾತಿಗೆ ವಂಚಿಸುತ್ತದೆ. ನಾವು ಕೊಟ್ಟ ಮಾತು ಈಡೇರಿಸಿ ನುಡಿದಂತೆ ನಡೆಯುತ್ತಿದ್ದೇವೆ. ಇನ್ನು ಚುನಾವಣೆ ವೇಳೆ ಕೊಟ್ಟ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿ ರಾಜ್ಯದ ಬಡವರು, ಮಧ್ಯಮ ವರ್ಗದವರು ಸೇರಿ ಎಲ್ಲಾ ಜನಸಮುದಾಯಗಳ ನಂಬಿಕೆ ಉಳಿಸಿಕೊಂಡಿದ್ದೇವೆ. ಇದೇ ನಮಗೂ ಬಿಜೆಪಿಗೂ ಇರುವ ವ್ಯತ್ಯಾಸ ಎಂದರು. ಇದನ್ನೂ ಓದಿ: ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಲೋಕಾಯುಕ್ತದಿಂದ ಕ್ಲೀನ್‌ ಚಿಟ್ ಯತ್ನ: ವಿಜಯೇಂದ್ರ ಆರೋಪ

ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದಿದ್ದು, ಸರ್ಕಾರದಿಂದ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿದ್ದೇವೆ. 115 ವರ್ಷಗಳ ಇತಿಹಾಸ ಇರುವ, ರಾಜ್ಯದಲ್ಲಿ ನಿರ್ಮಾಣ ಆದ ಮೊದಲ ಜಲಾಶಯ ಇದಾಗಿದ್ದು, ಮೂರನೇ ಬಾರಿ ಕೋಡಿ ಬಿದ್ದಿದೆ. ಅಂದಿನ ಮಹಾರಾಣಿ ಅಮ್ಮಣ್ಣಿ ತಾಯಿ ತಮ್ಮ ಒಡವೆಗಳನ್ನು ಮಾರಿ 45 ಲಕ್ಷ ರೂ. ಖರ್ಚು ಮಾಡಿ ಈ ಜಲಾಶಯ ನಿರ್ಮಿಸಿದ್ದಾರೆ. ಇದು 30,000 ಎಕರೆ ಕೃಷಿ ಭೂಮಿಗೆ ನೀರು ಒದಗಿಸುತ್ತಿದೆ. ಹೀಗಾಗಿ ರಾಣಿ ಅಮ್ಮಣ್ಣಿಯವರನ್ನು ನಾವು ಸ್ಮರಿಸುತ್ತೇವೆ, ಧನ್ಯವಾದ ಅರ್ಪಿಸುತ್ತೇವೆ ಎಂದರು. ಇದನ್ನೂ ಓದಿ: ಪಕ್ಷದ ವಿದ್ಯಮಾನಗಳು ಸಂತೋಷ ತಂದಿಲ್ಲ – ರಾಮುಲು ಅಪಾರ್ಥಕ್ಕೆ ಅವಕಾಶ ಕೊಡೋ ಮಾತಾಡಬಾರದು: ವಿಜಯೇಂದ್ರ

ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹಾಗೂ ಜಿಲ್ಲೆಯ ಶಾಸಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದ್ರು ಸ್ವಾಗತ: ಚೆಲುವರಾಯಸ್ವಾಮಿ

Share This Article