ನಿಂತಿದ್ದ ಕಾರಿಗೆ ಟ್ರಕ್ ಡಿಕ್ಕಿ – ಆರು ಮಂದಿಗೆ ಗಂಭೀರ ಗಾಯ

Public TV
1 Min Read
Yellapur CAR ACCIDENT

ಕಾರವಾರ: ಟ್ರಾಫಿಕ್‍ನಲ್ಲಿ ನಿಂತಿದ್ದ ಫಾರ್ಚುನರ್ ಕಾರಿಗೆ (Car) ಹಿಂಭಾಗದಿಂದ ಡಾಂಬರ್ ಮಿಕ್ಸರ್ ಟ್ರಕ್ ಡಿಕ್ಕಿಯಾಗಿ (Accident) ಮಗು ಸೇರಿ 6 ಜನ ಗಂಭೀರವಾಗಿ ಗಾಯಗೊಂಡ ಘಟನೆ ಯಲ್ಲಾಪುರದ ಅರೆಬೈಲ್ ಘಟ್ಟದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕಾರು ಬೆಳಗಾವಿಯಿಂದ (Belagavi) ಧರ್ಮಸ್ಥಳಕ್ಕೆ ತೆರಳುತಿತ್ತು. ಅರೆಬೈಲ್ ಘಟ್ಟದ ಬಳಿ ಟ್ರಾಫಿಕ್‍ನಲ್ಲಿ ಕಾರು ನಿಂತಿದ್ದ ವೇಳೆ ಹಿಂದಿನಿಂದ ಅತೀ ವೇಗವಾಗಿ ಬಂದ ಟ್ರಕ್ ಕಾರಿಗೆ ಡಿಕ್ಕಿಯಾಗಿದೆ.

ಡಿಕ್ಕಿ ಹೊಡೆಸಿದ ರಭಸಕ್ಕೆ ಮುಂಭಾಗದಲ್ಲಿ ನಿಂತಿದ್ದ ಕಂಟೈನರ್ ಲಾರಿಗೆ ಕಾರು ಅಪ್ಪಳಿಸಿದೆ. ಅಪಘಾತದಿಂದ ಯಲ್ಲಾಪುರ- ಅಂಕೋಲ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಅಪಘಾತದ ಬಳಿಕ ಟ್ರಕ್‌ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಗಾಯಗೊಂಡ ಅರು ಜನರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

Share This Article