ವಕ್ಫ್‌ ವಿರುದ್ಧ ಅನ್ನದಾತರ ಆಕ್ರೋಶ – ಇಂದು ಶ್ರೀರಂಗಪಟ್ಟಣ ಸ್ವಯಂ ಪ್ರೇರಿತ ಬಂದ್‌

Public TV
2 Min Read
Farmers anger against Waqf Mandya Srirangapatna Bandh today 1

ಮಂಡ್ಯ: ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದ ವಕ್ಫ್ ಭೂತ (Waqf Board) ಸಕ್ಕರೆ ನಾಡು ಜನರನ್ನು ಬಿಟ್ಟುಬಿಡದೇ ಕಾಡುತ್ತಿದೆ. ರೈತರ ಜಮೀನು, ಪುರಾತತ್ವ ಇಲಾಖೆಯ ಆಸ್ತಿಗಳ ಆರ್‌ಟಿಸಿಯಲ್ಲಿ (RTC) ವಕ್ಫ್ ಬೋರ್ಡ್ ಹೆಸರು ಎಂದು ನಮೂದಾಗಿದ್ದು, ಇದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಅನ್ಯಾಯನ್ನು ಖಂಡಿಸಿ ರೈತರು ಮತ್ತು ಹಿಂದೂ ಸಂಘಟನೆಗಳು ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದು, ಇಂದು ಶ್ರೀರಂಗಪಟ್ಟಣ (Srirangapatna) ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ.

ಶ್ರೀರಂಗಪಟ್ಟಣ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಕ್ಫ್‌ ಬೋರ್ಡ್‌ ಆತಂಕವನ್ನೇ ಸೃಷ್ಟಿ ಮಾಡಿದೆ. ಕಿರಂಗೂರು, ಶೆಟ್ಟಿಹಳ್ಳಿ, ಬಾಬುರಾಯನಕೊಪ್ಪಲು, ದರಸಕುಪ್ಪೆ ಗ್ರಾಮದ 50ಕ್ಕೂ ಹೆಚ್ಚು ರೈತರ ಆರ್‌ಟಿಸಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಎಂದು ನಮೂದು ಆಗಿದೆ.

ಆರ್‌ಟಿಸಿಯಲ್ಲಿ ಸ್ವಾಧೀನದಾರರ ಕಲಂ ನಲ್ಲಿ ರೈತರ ಹೆಸರಿದ್ದರೂ ಋಣ ಕಲಂ ನಲ್ಲಿ ವಕ್ಫ್ ಹೆಸರು ನಮೂದಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಸಾಮನ್ಯವಾಗಿ ಜಮೀನನ‌ ಮೇಲೆ ಸಾಲ ತೆಗೆದುಕೊಂಡರೆ, ಕ್ರಯ ಮಾಡಿಸಿದರೆ ಮಾತ್ರ ಋಣ ಕಲಂ ನಲ್ಲಿ ಬ್ಯಾಂಕ್ ಅಥವಾ ವ್ಯಕ್ತಿಯ ಹೆಸರು ಉಲ್ಲೇಖವಾಗುತ್ತದೆ. ಆದರೆ ಬಹುತೇಕ ರೈತರ‌ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ರೈತರು ಜಮೀನು ಮಾರಾಟ, ಜಮೀನು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ಆರ್‌ಟಿಸಿ ಪರಿಶೀಲನೆ ಮಾಡಿದಾಗ ವಕ್ಫ್ ಭೂತ ಎಂಟ್ರಿಕೊಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಸಕ್ಕರೆ ನಾಡಿಗೂ ಕಾಲಿಟ್ಟ ವಕ್ಫ್‌ ವಿವಾದ – ಮಂಡ್ಯದಲ್ಲಿ ದೇವಸ್ಥಾನವೇ ವಕ್ಫ್ ಆಸ್ತಿ

Mandya Temple 3

ಕೇವಲ ರೈತರ ಜಮೀನು ಮಾತ್ರವಲ್ಲದೇ ಪಾರಂಪರಿಕ ಕಟ್ಟದ, ಪುರಾತತ್ವ ಇಲಾಖೆ ಆಸ್ತಿಯ ಮೇಲೆ ವಕ್ಫ್‌ ವಕ್ರ ಕಣ್ಣು ಬಿದ್ದಿದೆ. ಶ್ರೀರಂಗಪಟ್ಟಣ ಸುತ್ತ ಇರುವ ಮದ್ದಿನ ಮನೆ ಸೇರಿದಂತೆ ಪುರಾತತ್ವ ಇಲಾಖೆ ಹತ್ತಾರು ಹೆಚ್ಚು ಆರ್‌ಟಿಸಿಗಳಲ್ಲಿ ವಕ್ಫ್‌ ಬೋರ್ಡ್ ಹೆಸರು ನಮೂದಾಗಿದೆ. ಇದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ವಕ್ಫ್ ಬೋರ್ಡ್ ಗೋಲ್ ಮಾಲ್ ಖಂಡಿಸಿ ಇಂದು ಶ್ರೀರಂಗಪಟ್ಟಣ ಟೌನ್ ಸ್ವಯಂ ಪ್ರೇರಿತ ಬಂದ್‌ಗೆ ಕರೆ‌ ನೀಡಲಾಗಿದೆ. ಇದನ್ನೂ ಓದಿ: ಮಂಡ್ಯ ರೈತರ ಬೆನ್ನುಬಿದ್ದ ವಕ್ಫ್ ಭೂತ – ಪುರಾತತ್ವ ಇಲಾಖೆ ಆಸ್ತಿ ಮೇಲೂ ಕಣ್ಣು

ಬೆಳಗ್ಗೆ 6 ಗಂಟೆಯಿಂದ ‌ಸಂಜೆ 5 ಗಂಟೆಯವರೆಗೆ ಬಂದ್ ಮಾಡಿ‌ ಹೋರಾಟ ಯಶಸ್ವಿಗೆ ಮನವಿ ಮಾಡಲಾಗಿದ್ದು, ಬಂದ್ ಜೊತೆಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ, ರೈತಸಂಘ, ಮಂಡ್ಯ ರಕ್ಷಣಾ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ರೈತರು ಹಾಗೂ ಜಾನುವಾರುಗಳೊಂದಿಗೆ ರಸ್ತೆಗೆ‌ ಇಳಿದು ಬೃಹತ್ ಪ್ರತಿಭಟನೆಗೆ ಸಿದ್ದತೆ ಮಾಡಿಕೊಂಡಿವೆ. ಇದನ್ನೂ ಓದಿ: Mandya | ರೈತರ ಜಮೀನು, ಹಿಂದೂ ದೇಗುಲ ಮಾತ್ರವಲ್ಲ ಸರ್ಕಾರಿ ಶಾಲೆಯೂ ವಕ್ಫ್ ಆಸ್ತಿ!

Share This Article