Bihar | ಗಂಗಾ ನದಿಯಲ್ಲಿ ದೋಣಿ ಮಗುಚಿ ಮೂವರು ಸಾವು – ನಾಲ್ವರು ನಾಪತ್ತೆ

Public TV
1 Min Read
Bihar Boat Capsizes

ಪಾಟ್ನಾ: ಗಂಗಾ ನದಿಯಲ್ಲಿ (Ganga River) ದೋಣಿ ಮಗುಚಿದ (Boat Capsizes) ಪರಿಣಾಮ ಮೂವರು ಸಾವನ್ನಪ್ಪಿದ್ದು, ನಾಲ್ವರು ನಾಪತ್ತೆಯಾದ ಘಟನೆ ಬಿಹಾರದ (Bihar) ಕತಿಹಾರ್ (Kathihar) ಜಿಲ್ಲೆಯಲ್ಲಿ ನಡೆದಿದೆ.

17 ಜನರಿದ್ದ ದೋಣಿ ಅಮ್ದಾಬಾದ್ ಪ್ರದೇಶದ ಗೋಲಾಘಾಟ್ ಬಳಿ ಮಗುಚಿಬಿದ್ದಿದೆ. ಇಲ್ಲಿಯವರೆಗೆ 10 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಅನೇಕರು ಈಜಿ ದಡ ಸೇರಿದ್ದಾರೆ. ನಾಪತ್ತೆಯಾದ ನಾಲ್ವರಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯತ್ನಾಳ್‌ಗೆ ಭಗವಂತ ಒಳ್ಳೆಯದನ್ನು ಮಾಡಲಿ : ಕೈ ಮುಗಿದು ವಿಜಯೇಂದ್ರ ಟಾಂಗ್

ಘಟನೆಯ ಕಾರಣವನ್ನು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೇಶ್ ಕುಮಾರ್ ಮೀನಾ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರನ್ನು ಪವನ್ ಕುಮಾರ್ (60) ಮತ್ತು ಸುಧೀರ್ ಮಂಡಲ್ (70) ಎಂದು ಗುರುತಿಸಲಾಗಿದ್ದು, ಇನ್ನೋರ್ವ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಕೋಲ್ಕತ್ತಾ ರೇಪ್‌ ಕೇಸ್‌ | ಮಗನನ್ನು ಗಲ್ಲಿಗೇರಿಸಿದ್ರೂ ಬೇಸರ ಇಲ್ಲ: ಸಂಜಯ್ ತಾಯಿ

Share This Article