ಬೆಂಗಳೂರು: ಡಿ.ಕೆ ಸುರೇಶ್ ( DK Suresh) ತಂಗಿ ಹೆಸರೇಳಿ 1 ಕೋಟಿ ರೂ.ಗಿಂತಲೂ ಅಧಿಕ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಐಶ್ವರ್ಯಗೌಡ (Aishwarya Gowda) ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.
ಮೂಲತಃ ವೈದ್ಯರಾದ ಡಾ.ದಯಾನಂದ ಲಿಂಗೇಗೌಡ ಅವರಿಗೆ ವಂಚನೆ ಮಾಡಿರುವುದಾಗಿ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಶ್ವರ್ಯಗೌಡ, ಪತಿ ಹರೀಶ್ ಸೇರಿ 7 ಜನರ ವಿರುದ್ಧ ಕೇಸ್ ದಾಖಲಾಗಿದೆ. ಇದನ್ನೂ ಓದು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬರೀ ಊಹಾಪೋಹ, ಯಾವುದೇ ಚರ್ಚೆ ನಡೆದಿಲ್ಲ – ಶರಣಪ್ರಕಾಶ್ ಪಾಟೀಲ್
ದೂರಿನಲ್ಲಿ ಏನಿದೆ?
ಸ್ನೇಹಿತ ಟಿ.ಪಿ ರಮೇಶ್ ಮೂಲಕ ಐಶ್ವರ್ಯಗೌಡ ಪರಿಚಯವಾಗಿದ್ದರು, ಈ ವೇಳೆ ತಾನು ಡಿ.ಕೆ ಸುರೇಶ್ ತಂಗಿ ಅಂತ ಹೇಳಿ ವಂಚನೆ ಮಾಡಿದ್ದಾರೆ ಎಂಬುದಾಗಿ ಆರ್.ಆರ್ ನಗರ ಪೊಲೀಸ್ ಠಾಣೆಗೆ ದಯಾನಂದ ಲಿಂಗೇಗೌಡ ದೂರು ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸಿಎಂ – ಜನಾರ್ದನ ರೆಡ್ಡಿ ಲೇವಡಿ
ಹೊಸದಾಗಿ ಕಂಪನಿ ತೆರೆದಿದ್ದೇವೆ. ಅದಕ್ಕೆ ಡಿ.ಕೆ ಸುರೇಶ್ ಅವರೇ ಪಾಲುದಾರರು ಅಂತ ನಂಬಿಸಿದ್ದಾರೆ. ನಮ್ಮ ಕಂಪನಿಯಲ್ಲಿ ಠೇವಣಿ ಹೂಡಿದ್ರೆ ಒಳ್ಳೆ ಲಾಭ ಬರುತ್ತೆ. ಜೊತೆಗೆ ಸಿನಿಮಾ, ಸಿರೀಯಲ್‌ಗಳಿಗೂ ಹಣ ಹೂಡಿಕೆ ಮಾಡ್ತೀವಿ ಅಂತ ಆಮಿಷ ಒಡ್ಡಿದ್ದಾರೆ. ತಾನು ಡಿ.ಕೆ ಸುರೇಶ್ ತಂಗಿ ಅಂತ ಹೇಳಿ, 1 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾರೆ. ಹಣ ಕೇಳಲು ಹೋದಾಗಲೆಲ್ಲ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.