ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ಗೆ ಚಾಕು ಇರಿತ- ಆಸ್ಪತ್ರೆಗೆ ದಾಖಲು

Public TV
1 Min Read
SAIF ALI KHAN

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ (Saif Ali Khan) ಮೇಲೆ ದುಷ್ಕರ್ಮಿಗಳು ಚಾಕು ಇರಿದಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಈ ಸಂಬಂಧ ಮುಂಬೈ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ:ಶಿವಣ್ಣಗೆ 6 ಆಪರೇಷನ್‌, 190 ಹೊಲಿಗೆ ಹಾಕಲಾಗಿದೆ: ಮಧು ಬಂಗಾರಪ್ಪ

kareena kapoor

ಮುಂಬೈನ ಬಾಂದ್ರಾದಲ್ಲಿ ಸೈಫ್‌ ಅಲಿ ಖಾನ್‌ ಮೇಲೆ ತಡರಾತ್ರಿ 2 ಗಂಟೆಗೆ ದಾಳಿ ನಡೆದಿದೆ. ದರೋಡೆಗೆ ಬಂದಿದ್ದ ಕಿಡಿಗೇಡಿಗಳಿಂದ ಈ ಕೃತ್ಯ ಜರುಗಿದೆ. ಸೈಫ್‌ ಅಲಿ ಖಾನ್‌ಗೆ ಚಾಕುವಿನಿಂದ ಇರಿದು, ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ನಟನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ನಿ ಕರೀನಾ ಕಪೂರ್‌ ಮತ್ತು ಇಬ್ಬರೂ ಮಕ್ಕಳು ಸೇಫ್‌ ಆಗಿದ್ದಾರೆ.

ಇನ್ನೂ ನಟನ ನಿವಾಸಕ್ಕೆ ಮುಂಬೈ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Share This Article