ಜಮೀರ್ ನೂರು ಹಸು ಕೊಡಿಸಿದ್ರೂ ಪಾಪ ಪರಿಹಾರ ಆಗಲ್ಲ – ಛಲವಾದಿ ಸಿಡಿಮಿಡಿ

Public TV
2 Min Read
Chalavadi Zameer 1

ಬೆಂಗಳೂರು: 3 ಹೊಸ ಹಸು ಕೊಡಿಸ್ತೀನಿ ಎಂದು ಹೇಳಿದ್ದಾರೆ. ಜಮೀರ್ ನೂರು ಹಸು ಕೊಡಿಸಿದ್ರೂ ಪಾಪ ಪರಿಹಾರ ಆಗಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಕಿಡಿಕಾರಿದ್ದಾರೆ.

ನಗರದ ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿ, ಇದು ಮಾನವರು ತಲೆ ತಗ್ಗಿಸುವ ಕೆಲಸ. ಹಸುಗಳಿಗೆ ಕೆಚ್ಚಲು ಕುಯ್ಯೋ ಅಮಾನವೀಯ ಕೆಲಸ ಮಾನವರು ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಕೆಚ್ಚಲು ಕೊಯ್ಯಬಹುದು. ಮೂಕ ಪ್ರಾಣಿಗಳ ಕೆಚ್ಚಲು ಯಾರು ಕೊಯ್ದರು ಎಂದು ಬಯಲಿಗೆ ತರಬೇಕು. ಆದರೆ ಈ ಕೇಸ್ ಮುಚ್ಚಿ ಹಾಕೋ ಪ್ರಯತ್ನ ಆಗ್ತಿದೆ. ಸಿಎಂ ರಾಜಕೀಯ ಮಾಡಬೇಡಿ, ಶಾಸಕರು ನಾನು 3 ಹಸು ಕೊಡಿಸ್ತೀನಿ ಎಂದಿದ್ದಾರೆ. ನೂರು ಹಸು ಕೊಡಿಸಿದ್ರು ಪಾಪ ಪರಿಹಾರ ಆಗಲ್ಲ ಎಂದು ಸಿಡಿಮಿಡಿಗೊಂಡಿದ್ದಾರೆ.ಇದನ್ನೂ ಓದಿ: ದರ್ಶನ್‌ಗೆ ಸಿನಿಮಾ ಮಾಡೇ ಮಾಡ್ತೀನಿ: ಡೈರೆಕ್ಟರ್‌ ಪ್ರೇಮ್‌

ಈ ಸರ್ಕಾರದಲ್ಲಿ ಲಾ ಅಂಡ್ ಆರ್ಡರ್ ಕೆಡುತ್ತಿದೆ. ತಮ್ಮ ಅಧಿಕಾರದ ಕಿತ್ತಾಟದಲ್ಲಿ ರಾಜ್ಯವನ್ನು ಈ ಸರ್ಕಾರ ಮರೆಯುತ್ತಿದೆ. ಇದು ಕಿವುಡು ಸರ್ಕಾರ, ಕಿವುಡು ಮಂತ್ರಿಗಳಿಗೆ ಯಾರು ಹೇಳಬೇಕು? ಪ್ರಿಯಾಂಕ್ ಖರ್ಗೆ ಬಿಜೆಪಿ ಮೇಲೆ ಆರೋಪ ಮಾಡ್ತಾರೆ. ಗುತ್ತಿಗೆದಾರ ಸಂಘ ಪತ್ರ ಬರೆದಿದೆ. ಯಾರಪ್ಪನ ಮನೆಯಿಂದ ತಂದು ಕೊಡುತ್ತಾರೆ. ಗುತ್ತಿಗೆದಾರರು ಕೆಲಸ ಮಾಡಿದ್ದಾರೆ. ಅದರ ಹಣ ಕೇಳುತ್ತಿದ್ದಾರೆ. ಸುಮ್ಮನೆ ಆರೋಪ ಮಾಡಬೇಡಿ ಎಂದು ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ವಾಗ್ದಾಳಿ ನಡೆಸಿದರು.

ಇದೇ ವೇಳೆ 60% ಆಪಾದನೆ ವಿಚಾರವಾಗಿ ಮಾತನಾಡಿ, ನಾನು ಕಂಟ್ರಾಕ್ಟರ್ ಜೊತೆ ಮಾತಾಡಿದೆ. ಈ ಸರ್ಕಾರದಲ್ಲಿ 60% ಕಮೀಷನ್ ಇದೆ. ಗುತ್ತಿಗೆದಾರರು ಬಾಯಿ ಬಿಟ್ಟರೆ ರಾಜಕಾರಣಿಗಳು, ಅಧಿಕಾರಿಗಳು ತೊಂದರೆ ಕೊಡುತ್ತಾರೆ. ಇದು ಭ್ರಷ್ಟ ಸರ್ಕಾರ. ಇವರ ಪಕ್ಷದ ಒಳ ಬೇಗುದಿಯಿಂದ ಈ ಸರ್ಕಾರ ಬೇಗ ಬಿದ್ದು ಹೋಗುತ್ತದೆ ಎಂದು ಅನಿಸುತ್ತದೆ. ಹಿಂದೆ ಚುನಾವಣೆ ಸಮಯದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಅವರು ಪತ್ರ ಬರೆಸಿದ್ದರು. ನಾವು ಅವತ್ತು ಸರಿಯಾಗಿ ಉತ್ತರ ಕೊಟ್ಟಿಲ್ಲ. ಇವತ್ತು ಗುತ್ತಿಗೆದಾರರು ಸತ್ಯ ಹೇಳ್ತಿದ್ದಾರೆ. ಇದು 60% ಗ್ಯಾರಂಟಿ ಸರ್ಕಾರ ಆಗಿದೆ. ಅವತ್ತು ವಿಪಕ್ಷದಲ್ಲಿ ಇದ್ದ ಸಿದ್ದರಾಮಯ್ಯ, ಡಿಕೆಶಿಗೆ ಗುತ್ತಿಗೆದಾರರು ಪತ್ರ ಬರೆದಿದ್ದರು. ಇವತ್ತು ನೇರವಾಗಿ ಸಚಿವರಿಗೇ ಪತ್ರ ಬರೆಯುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಯಾವ ಆಧಾರ ಇರುತ್ತದೆ. ಆರೋಪ ಮಾಡಿದರೆ ಗೊತ್ತಾಗುತ್ತದೆ. ಹಣ ಬರಲ್ಲ ಎಂದು ಗುತ್ತಿಗೆದಾರರು ಹೇಳೋಕೆ ಭಯ ಬೀಳುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.ಇದನ್ನೂ ಓದಿ: Haveri | ತಡರಾತ್ರಿ ಫ್ರಿಡ್ಜ್ ಬ್ಲಾಸ್ಟ್ – ಮನೆಯ ವಸ್ತುಗಳು ಸುಟ್ಟು ಕರಕಲು

 

Share This Article