ಚಿತ್ರದುರ್ಗ: ಕಳೆದ ಒಂದು ಶತಮಾನದಲ್ಲಿ 70 ವರ್ಷ ಬರ ಅನುಭವಿಸಿದ್ದ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ (Vani Vilasapura Dam) ಭರ್ತಿಯಾಗಿ ಕೋಡಿಬಿದ್ದಿದೆ.
ಕೋಟೆ ನಾಡಿನ ಏಕೈಕ ಜಲಾಶಯ ನಿರ್ಮಾಣವಾದ ಬಳಿಕ 3ನೇ ಬಾರಿಗೆ ಕೋಡಿಬಿದ್ದ ಜಲಾಶಯ ಬರದ ನಾಡಿಗೆ ಜೀವಕಳೆ ತಂದಿದೆ. ಕೊನೆಯಬಾರಿಗೆ 2022ರಲ್ಲಿ ಜಲಾಶಯ ಕೋಡಿ ಬಿದ್ದಿತ್ತು. ಆದ್ರೆ ಇತ್ತೀಚೆಗೆ ಭದ್ರಾ ಜಲಾಶಯದ ನೀರು ಹರಿದ ಪರಿಣಾಮ ವಿವಿ ಸಾಗರ ಜಲಾಶಯ 3ನೇ ಬಾರಿಗೆ ಕೋಡಿಬಿದ್ದಿದೆ. ಇದನ್ನೂ ಓದಿ: ಪ್ರೀತಿಸುವಂತೆ ಮುಸ್ಲಿಂ ಯುವಕನಿಂದ ಕಿರುಕುಳ – ಅಪ್ರಾಪ್ತೆ ಆತ್ಮಹತ್ಯೆ, ಆರೋಪಿ ಬಂಧನ
ಜಲಾಶಯ ಭರ್ತಿಯಿಂದ ನೂರಾರು ಕಿಮೀ ವರೆಗೆ ಅಂತರ್ಜಲದ ಮಟ್ಟ ಹೆಚ್ಚಾಗಿದ್ದು, ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ತಾಲ್ಲೂಕಿನ ರೈತರು ಸಂಭ್ರಮಿಸಿದ್ದಾರೆ. ಜಲಾಶಯ ಭರ್ತಿಯಾದ ಹಿನ್ನೆಲೆ ರೈತಮುಖಂಡರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜ.18 ರಂದು ಸಿಎಂ ಸಿದ್ದರಾಮಯ್ಯ ಅವರು ಬಾಗಿನ ಅರ್ಪಿಸಲಿದ್ದಾರೆ.
1907 ರಲ್ಲಿ ಮೈಸೂರು ಒಡೆಯರಾದ ಕೃಷ್ಣರಾಜ ಒಡೆಯರ್ ಈ ಜಲಾಶಯ ನಿರ್ಮಿಸಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳ ವೈಭವ – ಇಂಚಿಂಚಿಗೂ ಹದ್ದಿನ ಕಣ್ಣು, 2,700 ಎಐ ಕ್ಯಾಮೆರಾ ಕಣ್ಗಾವಲು