ಮೈಸೂರು: ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) 50:50 ಸೈಟು ಹಂಚಿಕೆಯಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna), ಸಿಎಂ ಬಳಿಕ ಮತ್ತೊಬ್ಬ ರಾಜಕಾರಣಿ ವಿರುದ್ಧ ದೂರು ನೀಡಿದ್ದಾರೆ.
ಹೌದು. 50:50 ನಿವೇಶನ ಪಡೆಯುವಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ (GT Devegowda) ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ, ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ (Siddaramaiah) ಪ್ರಕರಣಕ್ಕೆ ಸೇರಿಸಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮದ್ವೆಯಾಗುವಂತೆ ಒತ್ತಡ – ಲಿವ್ ಇನ್ ಗೆಳತಿ ಕೊಂದು ಶವವನ್ನ 8 ತಿಂಗಳು ಫ್ರಿಡ್ಜ್‌ನಲ್ಲಿಟ್ಟಿದ್ದ ಸೈಕೋ
ಕೋರ್ಟ್‌ನಲ್ಲಿ ವ್ಯಾಜ್ಯ ಇದ್ದ ಭೂಮಿಗೆ ಅಕ್ರಮವಾಗಿ 50:50 ಪರಿಹಾರ ಕೊಡಿಸಲಾಗಿದೆ. ಜಿ.ಟಿ ದೇವೇಗೌಡರ ಪ್ರಭಾವ ಬಳಸಿ ಚೌಡಯ್ಯ ಎಂಬವರ ಹೆಸರಿಗೆ 44,736 ಚದರ ಅಡಿ ಜಾಗದ 6 ನಿವೇಶನ ಕೊಡಿಸಿದ್ದಾರೆ. ಅದರಲ್ಲಿ ಕಿಕ್‌ಬ್ಯಾಕ್ ರೂಪದಲ್ಲಿ 2 ನಿವೇಶನ ತಮ್ಮ ಕುಟುಂಬಕ್ಕೆ ಬರೆಸಿಕೊಂಡಿದ್ದಾರೆ. ವಿಜಯನಗರ ಬಡಾವಣೆ 4ನೇ ಹಂತದಲ್ಲಿ 2 ನಿವೇಶನ ಪಡೆದು ಅದನ್ನ ತಮ್ಮ ಮಗಳು ಅನ್ನಪೂರ್ಣ ಹಾಗೂ ಅಳಿಯ ವಿಶ್ವೇಶ್ವರಯ್ಯ ಹೆಸರಿಗೆ ಕ್ರಯ ಮಾಡಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಮಂದಿರ ಅಲಂಕಾರಕ್ಕೆ 50 ಕ್ವಿಂಟಾಲ್ ಹೂವು
ಇದರಲ್ಲಿ ಜಿ.ಟಿ ದೇವೇಗೌಡ ಅವರ ಪ್ರಭಾವ ಇರುವುದು ದಟ್ಟವಾಗಿದೆ. ಆರ್‌ಟಿಸಿಯಲ್ಲಿ ಸರ್ಕಾರಿ ಭೂಮಿ ಎಂದು ಇದೆ. ಈ ವ್ಯಾಜ್ಯ ಕೋರ್ಟ್‌ನಲ್ಲಿ ಬಾಕಿ ಇದೆ. ಆದಾಗ್ಯೂ ಜಿಟಿಡಿ ತಮ್ಮ ಕುಟುಂಬಕ್ಕೆ 50:50 ನಿವೇಶನ ಬರೆಸಿಕೊಂಡಿರುವ ಅನುಮಾನವಿದೆ. ಮುಡಾ ವ್ಯಾಪ್ತಿಗೆ ಭೂಮಿ ಬರದಿದ್ದರೂ, ದೇವನೂರು ಬಡಾವಣೆಗೆ ಪರಿಹಾರ ಕೊಟ್ಟಂತೆ ಮಾಡಲಾಗಿದೆ. ಇದೆಲ್ಲದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುವಂತೆ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಇಂದಿನಿಂದ ಮೂರು ದಿನ ಹಲವು ಕಾರ್ಯಕ್ರಮ