ಹೋಟೆಲ್‌ಗಳ ಮೇಲೆ ಲಾರಿ ಪಲ್ಟಿ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿ

Public TV
1 Min Read
Raichur Hotel

ರಾಯಚೂರು: ನಗರದ ಹೊರವಲಯದ ಯರಮರಸ್ ಬೈಪಾಸ್ ಬಳಿ ಭತ್ತದ ಹೊಟ್ಟು ತುಂಬಿದ್ದ ಲಾರಿ ಚೈನೀಸ್ ಫಾಸ್ಟ್ ಫುಡ್ ಸೆಂಟರ್ ಹಾಗೂ ಹೋಟೆಲ್‌ (Hotel) ಮೇಲೆ ಉರುಳಿ ಬಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಜಖಂ ಆಗಿವೆ.

Raichur Hotel 3

ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ್ದು ಸ್ಥಳದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓವರ್ ಲೋಡ್ ತುಂಬಿಕೊಂಡು ಹೊರಟಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದನ್ನೂ ಓದಿ: ಅಯೋಧ್ಯೆಯ ಶ್ರೀರಾಮನ ಮೂರ್ತಿಗೆ `ರಾಮಲಲ್ಲಾʼ ಅಂತ ಕರೆಯುವುದೇಕೆ?

Raichur Hotel 2

ರಾಯಚೂರಿನಿಂದ ಹೈದ್ರಾಬಾದ್ ಕಡೆಗೆ ಹೊರಟಿದ್ದ ಲಾರಿ ಪಲ್ಟಿಯಿಂದ ಹೋಟೆಲ್, ಫಾಸ್ಟ್ ಪುಡ್ ಸೆಂಟರ್ ಜಖಂ ಆಗಿವೆ. ಶೆಡ್, ಪೀಠೋಪಕರಣ ಸೇರಿ ಹೋಟೆಲ್‌ನಲ್ಲಿದ್ದ ವಸ್ತುಗಳೆಲ್ಲಾ ಹಾನಿಯಾಗಿವೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ವರ್ಷದ ಸಂಭ್ರಮ – ಇಂದಿನಿಂದ ಮೂರು ದಿನ ಹಲವು ಕಾರ್ಯಕ್ರಮ?

ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲಾರಿ ಓವರ್ ಲೋಡ್ ತುಂಬಿಕೊಂಡು ವೇಗವಾಗಿ ಬಂದಿದ್ದೇ ಘಟನೆಗೆ ಕಾರಣ ಅಂತ ಸ್ಥಳದಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟನಲ್ ರೋಡ್‌ಗೆ ಬಿಜೆಪಿ ವಿರೋಧ – ಸಂಸದರಿಂದ ಬಿಬಿಎಂಪಿ ಆಯುಕ್ತರಿಗೆ ಪತ್ರ

Share This Article