ನವದೆಹಲಿ: ತಪ್ಪುಗಳು ಆಗುತ್ತವೆ. ನಾನು ಕೂಡ ಕೆಲವು ತಪ್ಪುಗಳನ್ನು ಮಾಡಬಹುದು. ನಾನು ಕೂಡ ಮನುಷ್ಯನೇ, ದೇವರಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಝೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಅವರ ಪೀಪಲ್ ಬೈ ಡಬ್ಲ್ಯೂಟಿಎಫ್ ಸರಣಿಯಲ್ಲಿ ಪಾಡ್‌ಕ್ಯಾಸ್ಟ್‌ಗೆ ಪದಾರ್ಪಣೆ ಮಾಡಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಇದನ್ನೂ ಓದಿ: ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗಳಿಗೆ ಬಾಂಬ್ ಬೆದರಿಕೆ – ವಿದ್ಯಾರ್ಥಿ ಅರೆಸ್ಟ್
ಸರ್, ನನ್ನ ಹಿಂದಿ ಚೆನ್ನಾಗಿಲ್ಲದಿದ್ದರೆ ದಯವಿಟ್ಟು ಕ್ಷಮಿಸಿ. ನಾನು ದಕ್ಷಿಣ ಭಾರತೀಯ. ನಾನು ಹೆಚ್ಚಾಗಿ ಬೆಂಗಳೂರಿನಲ್ಲಿ ಬೆಳೆದೆ. ನನ್ನ ತಾಯಿಯ ನಗರ ಮೈಸೂರು. ಅಲ್ಲಿ ಜನರು ಹೆಚ್ಚಾಗಿ ಕನ್ನಡ ಮಾತನಾಡುತ್ತಾರೆ. ನನ್ನ ತಂದೆ ಮಂಗಳೂರು ಬಳಿ ಇದ್ದರು. ನಾನು ಶಾಲೆಯಲ್ಲಿ ಹಿಂದಿ ಕಲಿತಿದ್ದೇನೆ. ಆದರೆ, ನನಗೆ ಭಾಷೆಯಲ್ಲಿ ನಿರರ್ಗಳತೆ ಇಲ್ಲ ಎಂದು ಕಾಮತ್, ಪ್ರಧಾನಿ ಮೋದಿಗೆ ಆರಂಭದಲ್ಲಿ ಮನವಿ ಮಾಡಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಮೋದಿ, ತೊಂದರೆಯಿಲ್ಲ ಮ್ಯಾನೇಜ್ ಮಾಡಬಹುದು ಎಂದು ತಿಳಿಸಿದರು.
ಎರಡು ಗಂಟೆಗಳ ಪಾಡ್‌ಕ್ಯಾಸ್ಟ್‌ನಲ್ಲಿ ಪ್ರಧಾನಿಯವರು ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ಪ್ರವೇಶ, ಹಿನ್ನಡೆಗಳು, ಒತ್ತಡವನ್ನು ನಿಭಾಯಿಸುವುದು ಮತ್ತು ನೀತಿ ನಿರ್ವಹಣೆ ಸೇರಿದಂತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ದಟ್ಟ ಮಂಜು – 100ಕ್ಕೂ ಅಧಿಕ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ
ನಾನು ನನ್ನ ಕುಟುಂಬದ ಎಲ್ಲ ಸದಸ್ಯರ ಬಟ್ಟೆಗಳನ್ನು ಒಗೆಯುತ್ತಿದ್ದೆ. ಅದಕ್ಕಾಗಿಯೇ ನನಗೆ ಕೊಳಕ್ಕೆ ಹೋಗಲು ಅವಕಾಶ ಸಿಗುತ್ತಿತ್ತು ಎಂದು ತಮ್ಮ ಬಾಲ್ಯದ ಕುರಿತು ಮೋದಿ ಮಾತನಾಡಿದ್ದಾರೆ.