ವ್ಯಕ್ತಿತ್ವ ವಿಕಸನ ಶಿಬಿರದ ಹೆಸರಲ್ಲಿ ಗನ್, ಸಾಹಸ ತರಬೇತಿ – ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಕೇಸ್‌

Public TV
1 Min Read
case filed against Sri Rama Sene activists Bagalkote 1

ಬಾಗಲಕೋಟೆ: ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಹೆಸರಲ್ಲಿ ಗನ್ ಹಾಗೂ ಇತರೆ ಸಾಹಸ ತರಬೇತಿ ನೀಡಿದ್ದಕ್ಕೆ ಶ್ರೀರಾಮ ಸೇನೆ (Sri Ram Sena) ಕಾರ್ಯಕರ್ತರ ಮೇಲೆ ಎಫ್‌ಐಆರ್‌ (FIR) ದಾಖಲಾಗಿದೆ.

ನಿಂಗಪ್ಪ ಹೂಗಾರ ದೂರಿನ‌ ಮೇರೆಗೆ ತರಬೇತಿಯಲ್ಲಿ ಭಾಗಿಯಾಗಿದ್ದ 27 ಶ್ರೀರಾಮ ಸೇನೆ ಕಾರ್ಯಕರ್ತರ ವಿರುದ್ಧ ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Bengaluru Airport | 2024ರಲ್ಲಿ ದಾಖಲೆ – 4 ಕೋಟಿ ಮಂದಿಯಿಂದ ಪ್ರಯಾಣ

case filed against Sri Rama Sene activists Bagalkote 2

ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ಡಿ.24 ರಿಂದ ಡಿ.29 ರವರೆಗೆ ಸೇನಾ ತರಬೇತಿ ಮಾದರಿಯಲ್ಲಿ ಯುವಕರಿಗೆ ದಂಡ ಪ್ರಯೋಗ, ಗನ್ ಟ್ರೈನಿಂಗ್, ಕರಾಟೆ ಸೇರಿದಂತೆ ವಿವಿಧ ಕೌಶಲ್ಯ ತರಬೇತಿ‌ ನೀಡಲಾಗಿತ್ತು.

ಮುಳ್ಳು ಕಂಟಿಯ ಗುಂಡಿಯಲ್ಲಿ ಹಾದುಹೋಗುವುದು, ಸಂಧಿಗ್ದ ಸ್ಥಳಗಳಲ್ಲಿ ಪಾರಾಗುವುದು, ಟಾರ್ಗೆಟ್ ಸೆಟ್ ಮಾಡಿ ಗುರಿ ಇಟ್ಟು ಹೊಡೆಯುವ ತರಬೇತಿ ನೀಡಲಾಗಿತ್ತು. ಶ್ರೀರಾಮ ಸೇನೆ ಸ್ವಸುರಕ್ಷೆಗಾಗಿ ವಿವಿಧ ರಕ್ಷಾ ತರಬೇತಿ ನೀಡಿದ್ದೇವೆ ಎಂದು ಹೇಳಿಕೊಂಡಿತ್ತು.

 

Share This Article