– ನಕ್ಸಲರಿಗೆ ಬ್ಯಾಲೆಟ್‌ಗಿಂತ ಬುಲೆಟ್ ಮೇಲೆ ನಂಬಿಕೆ ಜಾಸ್ತಿ
ಬೆಂಗಳೂರು: ನಕ್ಸಲರು (Naxal) ಚೀನಾ (China), ಪಾಕಿಸ್ತಾನದ (Pakistan) ಐಎಸ್ಐ ಸಹಕಾರ ಪಡೆದಿದ್ದಾರೆ ಎಂದು ಎಂಎಲ್‌ಸಿ ಸಿ.ಟಿ ರವಿ (C.T. Ravi) ಗಂಭೀರ ಆರೋಪ ಮಾಡಿದ್ದಾರೆ.
- Advertisement 2-
ನಗರದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ನಕ್ಸಲರು ಮೋಸ, ವಂಚನೆ ಮಾಡಲು ಬರುತ್ತಿದ್ದಾರೋ ಎಂಬುದು ಗೊತ್ತಾಗಬೇಕು. ಇದರ ಹಿಂದೆ ಯಾರು ಇದ್ದಾರೆ ಎಂಬುದು ಬಹಿರಂಗಪಡಿಸಬೇಕು. ಅವರ ಸಿದ್ಧಾಂತ ತಪ್ಪು ಎಂದು ಮನವರಿಕೆಯಾಗಿದ್ದರೆ ಸ್ವಾಗತಿಸುತ್ತೇನೆ. ಅವರನ್ನು ಸಂಪೂರ್ಣ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
- Advertisement 3-
- Advertisement 4-
ನಕ್ಸಲ್ ಸಿದ್ಧಾಂತ ಪ್ರಜಾಪ್ರಭುತ್ವಕ್ಕೆ, ರಾಷ್ಟ್ರ, ಸಂವಿಧಾನಕ್ಕೆ ವಿರೋಧಿ ಸಿದ್ಧಾಂತವಾಗಿದೆ. ಅವರಿಗೆ ಬ್ಯಾಲೆಟ್ ಮೇಲೆ ನಂಬಿಕೆ ಇಲ್ಲ, ಬುಲೆಟ್ ಮೇಲೆ ನಂಬಿಕೆ ಜಾಸ್ತಿ. ಈ ಶರಣಾಗತಿ ಯಾವ ಕಾರಣಕ್ಕೆ? ಸಂದರ್ಭದ ದುರುಪಯೋಗ ಆಗ್ತಿದೆಯಾ? ಈ ನಕ್ಸಲರ ಕುರಿತು ಪೂರ್ಣ ತನಿಖೆ ನಡೆಯಬೇಕು. ನಿಜವಾಗಿ ಶರಣಾಗಿದ್ರೆ ಸಮಸ್ಯೆ ಇಲ್ಲ. ಆದರೆ ಸಂದರ್ಭದ ದುರುಪಯೋಗ ಆಗುವುದು ಬೇಡ ಎಂದು ಎಚ್ಚರಿಸಿದ್ದಾರೆ.
ನಕ್ಸಲರು ರಾಷ್ಟ್ರ ಹಿತಕ್ಕಾಗಿ, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಕೆಲಸ ಮಾಡಿದವರಲ್ಲ. ಇವರ ವಿರುದ್ಧ ಸಂಪೂರ್ಣವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.