ಕೊಡಗಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ

Public TV
1 Min Read
Kodagu Cricket Stadium 3

ಮಡಿಕೇರಿ: ಸುತ್ತಲೂ ಹಸಿರು ರಾಶಿ, ಬೆಟ್ಟ – ಗುಡ್ಡ, ಇಂತಹ ಪ್ರಕೃತಿ ಸೌಂದರ್ಯದ ಮಧ್ಯೆ ಕುಳಿತು ಅಂತಾರಾಷ್ಟ್ರೀಯ ಕ್ರಿಕೆಟ್ (International Cricket) ಪಂದ್ಯಾವಳಿ ನೋಡುವ ಅವಕಾಶ ಸಿಕ್ಕರೆ ಅದೆಷ್ಟು ಮಜವಿರುತ್ತದೆ ಅಲ್ಲವೇ? ಹೌದು. ಮುಂದಿನ 3-4 ವರ್ಷಗಳಲ್ಲೇ ಕೊಡಗಿನ (Kodagu) ಜನಕ್ಕೆ ಈ ಸದವಕಾಶ ಸಿಗಲಿದೆ.

Kodagu Cricket Stadium

ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ (International Cricket Stadium) ತಲೆ ಎತ್ತಲಿದ್ದು, ಈಗಾಗಲೇ ನಿರ್ಮಾಣ ಕಾರ್ಯ ಶುರುವಾಗಿದೆ. ಇದನ್ನೂ ಓದಿ: ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು: ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುತ್ರನ ಮನೆ ಬೆಂಕಿಗಾಹುತಿ

Kodagu Cricket Stadium 4

ಜಿಲ್ಲೆಗೆ ಅಂತಾರಾಷ್ಟ್ರೀಯ ಕ್ರೀಡಾಂಗಣ ಬೇಕು ಅನ್ನೋದು ಇಲ್ಲಿನ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಈಗ ಆ ಬೇಡಿಕೆ ಈಡೇರುವ ಕಾಲ ಹತ್ತಿರವಾಗಿದೆ. ಮಡಿಕೇರಿ ತಾಲೂಕಿನ ಪಾಲೆಮಾಡು ಗ್ರಾಮದ ಬಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತುತ್ತಿದೆ. ಈಗಾಗಲೆ ಮೈದಾನ ನಿರ್ಮಾಣ ಕಾಮಗಾರಿ ಆರಂಭವಾಗಿದೆ.

Kodagu Cricket Stadium 2

ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾಂಗಣಕ್ಕೆ ಜಿಲ್ಲಾಡಳಿತ 12 ಎಕರೆ ಜಾಗ ನೀಡಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣ ಮಾದರಿಯಲ್ಲೇ ನಿರ್ಮಾಣ ಮಾಡುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ಈ ಪ್ರದೇಶದಲ್ಲಿ ಬೆಟ್ಟವನ್ನು ಸಮತಟ್ಟುಗೊಳಿಸಲಾಗುತ್ತಿದೆ. ಇದನ್ನೂ ಓದಿ: Tirupati Stampede | ವೈಕುಂಠ ಏಕಾದಶಿಯಂದು ತಿರುಪತಿಗೆ ಯಾಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ?

ಸದ್ಯ ಕ್ರೀಡಾಂಗಣ ನಿರ್ಮಾಣಕ್ಕೆ ಕಾಮಗಾರಿ ಶುರುವಾಗಿದ್ದು, ಮುಂದಿನ 3-4 ವರ್ಷಗಳಲ್ಲಿ ಅಂಗಳ ನಿರ್ಮಾಣವಾಗಲಿದೆ. ಇದು ಸ್ಥಳೀಯ ಕ್ರೀಡಾಪಟುಗಳಿಗೂ ವರದಾನವಾಗಲಿದೆ. ಈಗಾಗಲೇ ಜಿಲ್ಲೆಯಲ್ಲಿ ಆಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣವಿದೆ. ಆದರೆ, ಕನಿಷ್ಠ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸುವಂತಹ ಅಥ್ಲೆಟಿಕ್ ಕ್ರೀಡಾಂಗಣವಾಗಲಿ, ಕ್ರಿಕೆಟ್​​ ಮೈದಾನವಾಗಲಿ ಇಲ್ಲ. ಸದ್ಯ ಕ್ರಿಕೆಟ್ ಮೈದಾನ ತಲೆ ಎತ್ತುತ್ತಿದ್ದು, ಇದರೊಂದಿಗೆ ಕೊಡಗು ಜಿಲ್ಲೆ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ ಎಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article