ಫೋಟೋಗ್ರಾಫರ್ ಆದ್ರು ಡಿಕೆಶಿ!

Public TV
1 Min Read
DKS PHOTO F

ಬೆಂಗಳೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಇಂಧನ ಸಚಿವ ಡಿಕೆ ಶಿವಕುಮಾರ್ ಈಗ ಫುಲ್ ಫ್ರೀ ಆಗಿದ್ದಾರೆ. ಹಾಗಾಗಿ ಸಚಿವರು ಈಗ ಫೋಟೋ ಕ್ಲಿಕ್ಕಿಸಲು ತೊಡಗಿದ್ದಾರೆ.

DKS PHOTO 4

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರ ಮುಗಿದ ಬಳಿಕ ಡಿಕೆಶಿ ನಿನ್ನೆಯಿಂದ ಸ್ವಲ್ಪ ಫ್ರೀ ಆಗಿದ್ದಾರೆ. ಹೀಗಾಗಿ ಅವರು ಮದುಮಲೈ ಕಡೆಗೆ ತೆರಳಿದ್ದಾರೆ. ಈ ವೇಳೆ ಅವರಿಗೆ ರಸ್ತೆ ಬದಿಗಳಲ್ಲಿ ಪ್ರಾಣಿ ಪಕ್ಷಿಗಳ ದರ್ಶನವಾಗಿದೆ. ಮರಿಯಾನೆ ಜೊತೆಗೆ ಸಾಗುತ್ತಿದ್ದ ಆನೆ, ವಿಹರಿಸುತ್ತಿದ್ದ ನವಿಲು ಹಾಗೂ ಜಿಂಕೆಗಳ ಗುಂಪುಗಳನ್ನು ನೋಡಿ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

DKS PHOTO 2

ಇದನ್ನು ಬಳಿಕ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗುಂಡ್ಲುಪೇಟೆಯಲ್ಲಿ ಚುನಾವಣಾ ಪ್ರಚಾರದ ಬಳಿಕ ಮದುಮಲೈ ರಸ್ತೆಯಲ್ಲಿ ತೆರಳುತ್ತಿದ್ದಾಗ ಈ ವನ್ಯಜೀವಿಗಳೆಲ್ಲಾ ಕಾಣಿಸಿದವು. ಇದನ್ನು ನನ್ನ ಮೊಬೈಲ್ ಫೋನ್‍ನಲ್ಲಿ ಕ್ಲಿಕ್ಕಿಸಿದ್ದೇನೆ ಎಂದು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

DKS PHOTO 1

DKS PHOTO 3

Share This Article
Leave a Comment

Leave a Reply

Your email address will not be published. Required fields are marked *