ಸಿಎಂ, ಸಚಿವರ ಡಿನ್ನರ್ ಪಾರ್ಟಿಗೆ ರಾಜಕೀಯ ಲೇಪನ ಬೇಡ: ಈಶ್ವರ್ ಖಂಡ್ರೆ

Public TV
1 Min Read
Eshwar Khandre

ಬೆಂಗಳೂರು: ಸಿಎಂ (Siddaramaiah) ಮತ್ತು ಮಂತ್ರಿಗಳು ಹೊಸ ವರ್ಷದ ಖುಷಿಯಿಂದ ಊಟಕ್ಕೆ ಸೇರಿದ್ದರು. ಅದಕ್ಕೆ ರಾಜಕೀಯ ಕಲ್ಪಿಸೋದು ಬೇಡ ಎಂದು ಡಿನ್ನರ್ ಪಾರ್ಟಿ ಸಭೆಯನ್ನು (Dinner Meeting) ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಸಮರ್ಥಿಸಿಕೊಂಡಿದ್ದಾರೆ.

ಡಿನ್ನರ್ ಪಾರ್ಟಿ ವಿಚಾರವಾಗಿ ಅವರು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಹೊಸ ವರ್ಷದ ಖುಷಿಯಿಂದ ಊಟಕ್ಕೆ ಎಲ್ಲರೂ ಕರೆಯುತ್ತಾರೆ. ನಾನು ಕೂಡಾ ಊಟಕ್ಕೆ ಕರೆಯುತ್ತೇನೆ. ನಿಮ್ಮನ್ನು ಕರೆಯುತ್ತೇನೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

ಡಿನ್ನರ್ ಪಾರ್ಟಿಗೆ ರಾಜಕೀಯ ಕಲ್ಪಿಸೋದು ಬೇಡ. ಹೊಸ ವರ್ಷದ ಖುಷಿ ಇರುತ್ತೆ‌ ಅದಕ್ಕೆ ಕರೆದು ಊಟ, ಟಿಫನ್‌ಗೆ ಕರೆಯೋದು ಸಾಮಾನ್ಯ. ಅದಕ್ಕೆ ರಾಜಕೀಯ ಅನ್ನೋದು ಬೇಡ ಎಂದಿದ್ದಾರೆ.

ಏನಿದು ಡಿನ್ನರ್ ಪಾರ್ಟಿ?
ಇತ್ತೀಚೆಗೆ ಬೆಳಗಾವಿಯಲ್ಲಿ (Belagavi) ಆಪ್ತ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸದಸ್ಯರ ಜೊತೆ ವಿದೇಶದಲ್ಲಿ ಪ್ರವಾಸದಲ್ಲಿದ್ದರು. ಈ ಹೊತ್ತಿನಲ್ಲೇ ಇತ್ತ ಸಿದ್ದರಾಮಯ್ಯ ಬಣದಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.

Share This Article