ಪುರಿಯ ಜಗನ್ನಾಥ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ – ದೇವಾಲಯದ ಸುತ್ತ ಪೊಲೀಸ್ ಬಿಗಿಭದ್ರತೆ

Public TV
1 Min Read
Puri Jagannath Temple 1

ಭುವನೇಶ್ವರ: ಪುರಿಯ ಜಗನ್ನಾಥ ದೇವಾಲಯದ (Puri Jagannath Temple) ಮೇಲೆ ಇಂದು ಡ್ರೋನ್ (Drone) ಹಾರಾಟ ನಡೆಸಿದ್ದು, ಈ ಹಿನ್ನೆಲೆ ತನಿಖೆಗಾಗಿ ತಂಡವನ್ನು ರಚಿಸಿದೆ.

ಇಂದು (ಜ.05) ಮುಂಜಾನೆ 4:10ರ ಸುಮಾರಿಗೆ ದೇವಸ್ಥಾನದ ಮೇಲೆ ಡ್ರೋನ್ ಹಾರಾಟ ನಡೆಸಿದ್ದು, ಸುಮಾರು ಅರ್ಧಗಂಟೆಗಳ ಕಾಲ ಹಾರಾಡಿದೆ. ಇದರಿಂದ ಭಯದ ವಾತಾವರಣ ಸೃಷ್ಟಿಯಾಗಿದ್ದು, ದೇವಾಲಯದ ಸುತ್ತಮುತ್ತ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.ಇದನ್ನೂ ಓದಿ: ಮಗಳ ಜೊತೆಗಿನ ಮುದ್ದಾದ ವಿಡಿಯೋ ಹಂಚಿಕೊಂಡ ಮಿಲನಾ ನಾಗರಾಜ್‌

ಈ ಕುರಿತು ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಮಾತನಾಡಿ, ದೇವಸ್ಥಾನದ ಮೇಲೆ ಡ್ರೋನ್ ಹಾರಿಸುವುದು ಕಾನೂನುಬಾಹಿರ ಮತ್ತು ಸ್ವೀಕಾರಾರ್ಹವಲ್ಲ, ಭದ್ರತೆಯನ್ನು ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟ ವ್ಯಕ್ತಿಯನ್ನು ಪತ್ತೆ ಹಚ್ಚಿ, ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಪುರಿ ಎಸ್ಪಿ ತಂಡಗಳನ್ನು ರಚಿಸಿ, ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದರು.

ದೇವಾಲಯವು ಡ್ರೋನ್ ಹಾರಾಟ ನಿಷೇಧ ವಲಯವಾಗಿರುವುದರಿಂದ ಸದ್ಯ ಭದ್ರತೆಯನ್ನು ಹೆಚ್ಚಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಲು ದೇವಸ್ಥಾನದ ಸುತ್ತಲಿನ ನಾಲ್ಕು ಕಾವಲು ಗೋಪುರಗಳಲ್ಲಿ 24 ಗಂಟೆಯೂ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದರು.

ಸದ್ಯ ಯಾರೋ ಒಬ್ಬ ವ್ಲಾಗರ್ ಡ್ರೋನ್ ಅನ್ನು ದೇವಸ್ಥಾನದ ಮೇಲೆ ಹಾರಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ತನಿಖೆ ನಡೆಸಿ, ಅದರ ಹಿಂದಿನ ಉದ್ದೇಶ ತಿಳಿದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಚುನಾವಣೆಯಲ್ಲಿ ಗೆದ್ದರೆ ಪ್ರಿಯಾಂಕ ಕೆನ್ನೆಯಂತೆ ನಯವಾದ ರಸ್ತೆಗಳನ್ನು ನಿರ್ಮಿಸುತ್ತೇನೆ: ಬಿಜೆಪಿ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

Share This Article